ಗಾಯಕ: ವಿಜಯ್ ಪ್ರಕಾಶ್
ಸಾಹಿತ್ಯ: ಹಂಸಲೇಖ
ಕೃಪೆ: ಜೀ ಕನ್ನಡ
ಜೈ ಭೀಮ್.. ಜೈ ಭೀಮ್..
ಉತ್ತುಂಗದಲಿ ಉರಿಯೊ ಸೂರ್ಯನೇ
ನೀನು ದನಿಯಿರದವರಾ ಧೈರ್ಯವೊ
ನೀಲಿ ಅಂದ್ರೆ ನೀತಿಯೋ
ಜೈ ಭೀಮಾ ಅಂದ್ರೆ ನಿರ್ಭೀತಿಯೊ
ಕಾನೂನಿನ ಮಾನ ಮುಚ್ಚೋ
ಬಟ್ಟೆ ನೇಯ್ದವಾ
ಜಾತಿಜ್ವಾಲೆ ಆರಿಸಲು
ಹಾಲು ಸುರಿದವಾ
ಮನೆ ಒಡೆಯೋ ಕುತಂತ್ರಿಗಳ
ಕಾಲು ಮುರಿದವಾ
ಗುಳ್ಳೆ ನರಿಗಳ ಚರ್ಮ ಸುಲಿದವಾ
ಉತ್ತುಂಗದಲೀ ಉರಿಯೊ ಸೂರ್ಯನೇ
ನೀನು ದನಿಯಿರದವರ ಧೈರ್ಯವೊ
♬♬♬♬♬♬♬♬♬♬♬♬
ಖಡ್ಗ ಹಿಡಿದು ಬೀಸಲಿಲ್ಲ
ಬಡತನಕಂಜಿ ಕೂರಲಿಲ್ಲ
ಖಡ್ಗ ಹಿಡಿದು ಬೀಸಲಿಲ್ಲ
ಬಡತನಕಂಜಿ ಕೂರಲಿಲ್ಲ
ನೀನು ಓದಿ ಸಾಣೆ ಹಿಡಿದ ಶಾಸ್ತ್ರಗಳು
ಅವು ಕಳಚಿಕೊಂಡವಯ್ಯ
ಎಲ್ಲ ಮುಸುಕುಗಳು
ನೀನು ಓದಿ ಸಾಣೆ ಹಿಡಿದ ಶಾಸ್ತ್ರಗಳು
ಅವು ಕಳಚಿಕೊಂಡವಯ್ಯ
ಎಲ್ಲ ಮುಸುಕುಗಳು
ಯೋಗವೆಂದು ಯೋಗ್ಯವೆಂದು
ಅಸ್ಪೃಶ್ಯತೆ ಸಹಜವೆಂದು
ವಾದಿಸುವ ವೇದಿಗಳ ಕೂಟಾ
ನಿನ್ನ ವಾದಕಂಜಿ ಕಿತ್ತವಯ್ಯಾ
ಓಟಾ
ನಿನ್ನ ವಾದಕಂಜಿ ಕಿತ್ತವಯ್ಯಾ
ಓಟಾ
ಜಾತಿ ಮತಗಳೆಲ್ಲ ಹೇಯ
ಸಮತೆಯೊಂದೆ ನಮ್ಮ ಧ್ಯೇಯ
ಎಂದು ನೀನು ಹೇಳಿಕೊಟ್ಟ ನ್ಯಾಯ
ಅದು ಅಳಿಸಿತಯ್ಯ
ಅಹಮಿನ ಹಳೆ ಅಧ್ಯಾಯ
ಅದು ಅಳಿಸಿತಯ್ಯ
ಅಹಮಿನ ಹಳೆ ಅಧ್ಯಾಯ
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
ಜೈ ಜೈ ಜೈ ಜೈ ಭೀಮ್
No comments:
Post a Comment
Write Something about PK Music