ತನ್ನ ತಾನು ತಿಳಿದ ಮೇಲೆ
ಸಂಗೀತ : ಸಿದ್ದಯ್ಯ ಸ್ವಾಮಿ ಜವಳಿ
ಸಾಹಿತ್ಯ: ಚಂದ್ರಮಪ್ಪ ಮಾಸ್ತರ್
ಗಾಯಕರು : ಮಾರುತಿ ಕಾಸರ,
ನರೋಣಾ ಸುವರ್ಣ, ಲಕ್ಷ್ಮಿ, ಶೃತಿ
ಛಾಯಾ, ನಂದಿತಾ
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಕಾಕಬುದ್ಧಿ ಕಡೇ ಘಾಯಿಸಲಾರದೆ
ಕಾಕಬುದ್ಧಿ ಕಡೇ ಘಾಯಿಸಲಾರದೆ
ಲೋಕದ ಗೊಡವೀ
ನಿನಗ್ಯಾಕ ಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
♫♫♫♫♫♫♫♫♫♫♫♫
ಮಾತು ಕಲಿಯ ಬೇಕೂ
ಮಾತಿನ ಅರ್ಥ ತಿಳೀಬೇಕು
ಮಾತು ಕಲಿಯ ಬೇಕೂ
ಮಾತಿನ ನೀತಿ ತಿಳೀಬೇಕು
ಮಾತು ಬಲ್ಲ ಮಹಾ ಜ್ಞಾನಿಯಕೂಡ
ಮಾತು ಬಲ್ಲ ಮಹಾ ಜ್ಞಾನಿಯಕೂಡ
ಕೋತಿ ಹಾಂಗ ಬೆನ್ ಹತ್ತಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
♫♫♫♫♫♫♫♫♫♫♫♫
ತತ್ವ ಕಲೀಬೇಕೂ
ತತ್ವದಾ ಅರ್ಥ ತಿಳೀಬೇಕು
ತತ್ವ ಕಲೀಬೇಕೂ
ತತ್ವದಾ ಅರ್ಥ ತಿಳೀಬೇಕು
ತತ್ವ ಬಲ್ಲ ಮಹಾ ಜ್ಞಾನಿಯಕೂಡ
ತತ್ವ ಬಲ್ಲ ಮಹಾ ಜ್ಞಾನಿಯಕೂಡ
ಕತ್ತೀ ಹಾಂಗ ಬೆನ್ ಹತ್ತಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
♫♫♫♫♫♫♫♫♫♫♫♫
ಆಸೆ ಅಳಿಯಬೇಕೂ
ಮನಸಿನ ಹೇಸಿಕಿ ತೊಳೀಬೇಕು
ಆಸೆ ಅಳಿಯಬೇಕೂ
ಮನಸಿನ ಹೇಸಿಕಿ ತೊಳೀಬೇಕು
ಆಸೆ ಅಳಿದು ಮನ ಹೇಸಿಕಿ ತೊಳೆದು
ಆಸೆ ಅಳಿದು ಮನ ಹೇಸಿಕಿ ತೊಳೆದು
ಗುಡ್ಡದ ಮಹಾಂತನ ಪಾದ ಹಿಡೀಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಕಾಕಬುದ್ಧಿ ಕಡೇ ಘಾಯಿಸದೇನೆ
ಕಾಕಬುದ್ಧಿ ಕಡೇ ಘಾಯಿಸದೇನೆ
ಲೋಕದ ಗೊಡವೀ
ನಿನಗ್ಯಾಕ ಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಜಗದೊಳು ಜ್ವಾಕ್ಯಾಗಿರಬೇಕು
ಜಗದೊಳು ಜ್ವಾಕ್ಯಾಗಿರಬೇಕು
No comments:
Post a Comment
Write Something about PK Music