ಚಿತ್ರ: ಕುಲಗೌರವ
ಗಾಯಕರು: ಪಿ. ನಾಗೇಶ್ವರ ರಾವ್
ಸಂಗೀತ : ಟಿ.ಜಿ. ಲಿಂಗಪ್ಪ
ಸಾಹಿತ್ಯ: ವಿಜಯನಾರಸಿಂಹ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ಆಸೆಯ ಅಲೆಗಳ
ಏರಿಳಿತದಲಿ
ಬಾಳಿನ ಬೆಳಕೇ ನಂಬಿಕೆ
ಬಾಳಿನ ಬೆಳಕೇ ನಂಬಿಕೆ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
♬♬♬♬♬♬♬♬♬♬♬♬
ಕಲೆಯಲಿ ಕಲೆತು
ಸಿರಿತನ ತೊರೆದು
ಒಲವನು ಅರಿಯದ ಜೀವ
ಕರುಳಿನ ಕುಡಿಗೆ
ನೆರಳನು ಕಾಣದು
ತಾಳಿದೆ ಬೇಗುದಿ ನೋವ
ನಾಳಿನ ಆಸೆಯ
ನಂಬಿಕೆ ನೀಡಿ
ನಗುತಿದೆ ಮೇಲಿನ ದೈವ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
♬♬♬♬♬♬♬♬♬♬♬♬
ಸೀತೆಯ ತೆರದಿ
ನಿಂದನೆ ಹೊಂದಿ
ಕಾಣದೆ ಬಾಳಿನ ಹಾದಿ
ಹೃದಯದ ಸುಧೆಯೆ
ವಿಷವನು ನೀಡಿರೆ
ಹೆಣ್ಣಿದು ಶೋಕದ ಕೈಸೆರೆ
ಆಸೆಯ ಅಲೆಗಳ
ಕುಣಿತದ ಮೇಲೆ
ಕಾಣದ ಕೈಗಳ ಲೀಲೆ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ಆಸೆಯ ಅಲೆಗಳ
ಏರಿಳಿತದಲಿ
ಬಾಳಿನ ಬೆಳಕೇ ನಂಬಿಕೆ
ಬಾಳಿನ ಬೆಳಕೇ ನಂಬಿಕೆ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
♬♬♬♬♬♬♬♬♬♬♬♬
ಸಾವನು ಸೆಳಸಿ
ಮುಪ್ಪಿನ ಉಸಿರು
ಹೊತ್ತಿದೆ ಎಲ್ಲಾ ದೂರು
ಮನೆಯನೆ ಒಡೆದೆ
ಆಸರೆ ತೋರದು
ಬದುಕಿದೆ ಏತಕೆ ಎಂದು
ಆದರು ಆಸೆಯ
ಅಲೆಗಳ ಮೇಲೆ
ಆಡಿದೆ ಜೀವದ ಲೀಲೆ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ
ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
No comments:
Post a Comment
Write Something about PK Music