ದೇವರಗುಡಿ
ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಪಿ.ಬಿ.ಎಸ್, ಪಿ.ಸುಶೀಲ
ನಾ ಬಯಸದ
ಭಾಗ್ಯ ನನದಾಯಿತು
ಇಂದು ನನದಾಯಿತು
ಶುಭ ಯೋಗವೊ
ಅನುರಾಗವೋ
ನನ್ನ ನಿನ್ನ ಮಿಲನಾ
ನಾ ಬಯಸದ
ಭಾಗ್ಯ ನನದಾಯಿತು
ಇಂದು ನನದಾಯಿತು
ಶುಭ ಯೋಗವೊ
ಅನುರಾಗವೋ
ನನ್ನ ನಿನ್ನ ಮಿಲನಾ
ನಾ ಬಯಸದ ಭಾಗ್ಯ
ನನದಾಯಿತು
ಇಂದು ನನದಾಯಿತು
♬♬♬♬♬♬♬♬♬♬♬♬
ಕಂಗಳಲಿ ಪ್ರೇಮ ತುಂಬಿತು
ಅಧರದಲಿ ಆಸೆ ಮೂಡಿತು
ನಿನ್ನೊಲವಿಗೆ ತನುವು
ಹೂವಾಯಿತು
ಸ್ನೇಹದಲಿ ನೀನು ಸೇರಲು
ಬಾಹುಗಳ ಬಂದಿಯಾಗಲು
ಆ ಸ್ವರ್ಗದ ಸುಖವೇ ನನ್ನದಾಯಿತು
ನೀನೊಲಿದು ತಂದ ಆನಂದದಿಂದ
ಬರಿದಾದ ಬಾಳು ಬೆಳಕಾಯಿತು
ನಾ ಬಯಸದ ಭಾಗ್ಯ ನನದಾಯಿತು
ಇಂದು ನನದಾಯಿತು
♬♬♬♬♬♬♬♬♬♬♬♬
ಆ ಆ ಆ
ಅ ಹ ಹ ಹ
ಆ ಆ ಆ
ಓ ಹೋ ಹೋ ಆ ಹಾ
ಆ ಹಾ
ಒ ಹೋ
ಆ ಹಾ
321
ಮಲ್ಲಿಗೆಯ ಹೂವ ಹಾಸಿಗೆ
ಸ್ವಾಗತದ ಗೀತೆ ಹಾಡಿದೆ
ಹೊಸ ಅನುಭವ
ಇಂದು ಹಿತವಾಗಿದೆ
ಹಾಲಿನಲಿ ಜೇನು ಸೇರಿದೆ
ಅಮೃತವೇ ಬಾಳ ತುಂಬಿದೆ
ನನ್ನಾಸೆಯ ನುಡಿಗೆ ಮನ ನಾಚಿದೇ
ಏಕಾಂತದಲ್ಲಿ ನಾನಿರಲು ಇಲ್ಲಿ
ಆ ಚಿಂತೆ ಇನ್ನು ನಿನಗೇಕೆ
ನಾ ಬಯಸದ ಭಾಗ್ಯ ನನದಾಯಿತು
ಇಂದು ನನದಾಯಿತು
ಶುಭ ಯೋಗವೊ
ಅನುರಾಗವೋ
ನನ್ನ ನಿನ್ನ ಮಿಲನಾ
ನಾ ಬಯಸದ ಭಾಗ್ಯ ನನದಾಯಿತು
ಇಂದು ನನದಾಯಿತು
ಇಂದು ನನದಾಯಿತು
No comments:
Post a Comment
Write Something about PK Music