ಚಿತ್ರ: ಹೊಸ ಜೀವನ
ಗಾಯಕ: ಕೆ.ಜೆ. ಯೇಸುದಾಸ್
ಸಾಹಿತ್ಯ: ಹಂಸಲೇಖ
ತಾರಾಗಣ: ಶಂಕರ್ ನಾಗ್,
ದೀಪಿಕಾ
ಸಂಗೀತ: ಹಂಸಲೇಖ
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲಾ
ಅಣ್ಣನು ತಮ್ಮನು ಇಲ್ಲಾ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ಧಿಸೋರಿಲ್ಲಾ
ಸತ್ತರೆ ಹೊದ್ದಿಸೋರಿಲ್ಲಾ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿಹೋಯ್ತು
ಈ ಮನಸೇ ಕಲ್ಲಾಗಿ ಹೊಯ್ತು
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲಾ
ಅಣ್ಣನು ತಮ್ಮನು ಇಲ್ಲಾ...
♬♬♬♬♬♬♬♬♬♬♬♬
321
ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು
ರೊಟ್ಟಿ ಮೀಸಲಂತೆ
ನಾಯಿಗೂ ಹೀನನಾದೆ ನಾ
ಮಾಳಿಗೆಗೆ ಒಂದು
ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ
ತಿಂದೋರು ಎಲೆಯಾ
ಬಿಸಾಡೋ ಹಾಗೆ
ಹೆತ್ತೊರು ನನ್ನ ಎಸೆದಾಯ್ತು
ಸತ್ತೊರ ಎಡೆಯಾ ಕಾಗೆಗೆ ಇರಿಸಿ
ಹೆತ್ತೊರ ಕೂಗಿ ಕರೆದಾಯ್ತು
ಉತ್ತರಾ ಇಲ್ಲಾ ಪ್ರಶ್ನೆಯೇ ಎಲ್ಲಾ
ಕೇಳೋ ದೇವನೇ..
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲಾ
ಅಣ್ಣನು ತಮ್ಮನು ಇಲ್ಲಾ
♬♬♬♬♬♬♬♬♬♬♬♬
321
ಹುಟ್ಟೋ ಮಕ್ಕಳೆಲ್ಲ
ತೂಗೋ ತೊಟ್ಟಿಲಲ್ಲಿ
ನನ್ನ ಇಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ
ಲಾಲಿ ಹಾಡು ಎಲ್ಲಿ
ನಾನು ಯಾವ ದ್ರೋಹ ಮಾಡಿದೆ
ಭೂಮಿಯ ತುಂಬಾ ಅನಾಥರೆಂಬ
ಕೋಟ್ಯಾನು ಕೋಟಿ ಕೂಗು ಇದೆ
ಗ್ರಾಚಾರ ಬರಿಯೋ
ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪವಿದೆ
ಉತ್ತರಾ ಇಲ್ಲಾ ಪ್ರಶ್ನೆಯೇ ಎಲ್ಲಾ
ಕೇಳೋ ದೇವನೇ
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲಾ
ಅಣ್ಣನು ತಮ್ಮನು ಇಲ್ಲಾ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ಧಿಸೋರಿಲ್ಲಾ
ಸತ್ತರೆ ಹೊದ್ಧಿಸೋರಿಲ್ಲಾ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿಹೋಯ್ತು
ಈ ಮನಸೇ ಕಲ್ಲಾಗಿ ಹೊಯ್ತು
No comments:
Post a Comment
Write Something about PK Music