ಚಿತ್ರ: ಕಸ್ತೂರಿ ನಿವಾಸ
ಗಾಯನ: PBS & P. ಸುಶೀಲ
ಸಾಹಿತ್ಯ : RN ಜಯಗೋಪಾಲ್
ನೀ ಬಂದು ನಿಂತಾಗ
ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ
ಸೋತೇ ನಾನಾಗ
ನೀ ಬಂದು ನಿಂತಾಗ
ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ
ಸೋತೇ ನಾನಾಗ
ಆಹಾ ಆಹಾಆಹಾ
ಹ್ಞೂಂ ಹ್ಞೂಂ ಹ್ಞೂಂ
♬♬♬♬♬♬♬♬♬♬
ವಾಸಂತಿ ನಲಿದಾಗ ಆಆಆಆ
ವಾಸಂತಿ ನಲಿದಾಗ
ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ
ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ
ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು
ನವಜೀವ ಬಂದಾಗ
ಕೈ ಕೈ ಸೋಕಾಗ
ಮನವೆರೆಡು ಬೆರೆತಾಗ
ಮಿಡಿದಂಥ ಹೊಸರಾಗ
ಅದುವೇ ಅನುರಾಗ
ಬಾರಾ ಬಾರಾ ಬಾರಾ
ಜೇನಂಥ ಮಾತಲ್ಲಿ ಈಈಈ
ಜೇನಂಥ ಮಾತಲ್ಲಿ
ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚೆಲ್ಲಿ
ನಿಂತೆನೀ ಮನದಲ್ಲಿ
ಎದುರಾದೆ ಹಗಲಲ್ಲಿ
ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ
ಕೊನೆಯೆಲ್ಲಿ ಮೊದಲೆಲ್ಲಿ
ಬಲುದೂರ ನೀ ಹೋಗೆ
ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ
ಬಾರಾ ಬಾರಾ ಬಾರಾ
ಬಾಳೆಂಬ ಪಥದಲ್ಲಿ ಈಈಈ
ಬಾಳೆಂಬ ಪಥದಲ್ಲಿ
ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ
ನನಸೆಲ್ಲಾ ಸೊಗಸಾಗಿ
ಯುಗವೊಂದು ದಿನವಾಗಿ
ದಿನವೊಂದು ಕ್ಷಣವಾಗಿ
ನಮ್ಮಾಸೆ ಹೂವಾಗಿ
ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ
ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದೂ ಜೊತೆಯಾಗಿ
ನಡೆವಾ ಒಂದಾಗಿ
ಬಾರಾ ಬಾರಾ ಬಾರಾ
ನೀ ಬಂದು ನಿಂತಾಗ
ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ
ಸೋತೇ ನಾನಾಗ
ಆಹಾ ಆಹಾ ಆಹಾ
ಹ್ಞೂಂ ಹ್ಞೂಂ ಹ್ಞೂಂ
ಆಹಾ ಆಹಾಆಹಾ
ಹ್ಞೂಂ ಹ್ಞೂಂ ಹ್ಞೂಂ
No comments:
Post a Comment
Write Something about PK Music