ಸುಖ ಸಂಸಾರಕ್ಕೆ 12 ಸೂತ್ರಗಳು
ಗಾಯನ: SPB, S ಜಾನಕಿ
ಸಂಗೀತ : ಚಕ್ರವರ್ತಿ
ಸಾಹಿತ್ಯ: ದೊಡ್ಡರಂಗೇ ಗೌಡ
ಲಾ ಲಲಲಾಲಲ
321
ಆ ಹಹಾ
ಲಾ ಲಲ ಲಲಾ
ಲಾ ಲಲಾ
ಲಾ ಲಲ ಲಲಾ
ರಾಗ ರಂಗು ಮೂಡಿ ಬಂತು
ಕಣ್ಣಿನಾಗೆ
ಹೊಯ್ ನೂರೆಂಟು ಆಸೆತಂತು
ಬಾಳಿನಾಗೆ
ಮಾತು ಮೌನ ಮೀರಿ ಬೆಳದ
ಸ್ನೇಹದಾಗೆ..
ಅಂಗ ಸಂಗ ತೋರಿ ಹೊಳೆದ
ಮೋಹದಾಗೆ…
ಜೀವ ಭಾವ ಹೊಂದಿಕೊಂಡ
ಪ್ರೀತಿಯಾಗೆ…
ಏನೇನೊ ಕನಸು ಕಂಡೆ
ಪ್ರೇಮದಾಗೆ…
ಅಂಟು ನಂಟು ತುಂಬಿ ಬಂದ
ನೋಟದಾಗೆ…
ನಾವ್ ಒಂದಾಗಿ ಬೆರೆತೆ
ಹಾಲು ಜೇನಿನಾಗೆ
ರಾಗ ರಂಗು ಮೂಡಿ ಬಂತು
ಕಣ್ಣಿನಾಗೆ…
ಹೊಯ್ ನೂರೆಂಟು ಆಸೆತಂತು
ಬಾಳಿನಾಗೆ
♫♫♫♫♫♫♫♫♫♫♫♫
ಹೊಲದಾಗೆ ಬಾಗಿ ಬೀಗಿ
ತೂಗಾಡೋ ಹೂವಿನಂಗೆ
ಕಂಡೆ ನೀನು
ಜೋರಾಗಿ ಹಾರಿ ಹಾರಿ
ರಸ ಹೀರೊ ದುಂಬಿ ಹಂಗೆ
ಬಂದೆ ನಾನು
ಬಳಿಗೆ ಬಂದು
ಸೆರಗ ಸೆಳೆಯೋ ತಂಟೆಗೆ
ಮನಸು ತುಂಬಿ
ಆಸೆ ತಂದ ಮೋಜಿಗೆ
ಬಳಿಗೆ ಬಂದು
ಸೆರಗ ಸೆಳೆಯೋ ತಂಟೆಗೆ
ಮನಸು ತುಂಬಿ
ಆಸೆ ತಂದ ಮೋಜಿಗೆ
ಸುಖದಾಸಿರಿ ತೋರಿ
ಮಿನುಗೋನಗೆ ಬೀರಿ
ತೋಳು ಚಾಚಿ ಮೆಲ್ಲಗೇ ಅಪ್ಪಿಕೊಂಡೆ
ಮುತ್ತನೊತ್ತಿ ತಪ್ಪದೇ ಒಪ್ಪಿಕೊಂಡೆ
ರಾಗ ರಂಗು ಮೂಡಿ ಬಂತು
ಕಣ್ಣಿನಾಗೆ…
ಹೊಯ್ ನೂರೆಂಟು ಆಸೆತಂತು
ಬಾಳಿನಾಗೆ
ಮಾತು ಮೌನ ಮೀರಿ ಬೆಳೆದ
ಸ್ನೇಹದಾಗೆ…
ನಾವ್ ಒಂದಾಗಿ ಬೆರೆತೆ
ಹಾಲು ಜೇನಿನಾಗೆ…
♫♫♫♫♫♫♫♫♫♫♫♫
321
ಚೆಲುವಾದ ಲೋಕದಾಗೆ
ಸುಖವಾಗಿ ಕಲೆತಾಗ
ಎಂಥ ಚೆಂದಾ
ಸಂತೋಷ ಹಾದಿಯಾಗೆ
ಸೊಗಸಾಗಿ ನಡೆವಾಗ
ಏನು ಅಂದ
ಬೆರೆದೆ ನೀನು
ನನ್ನ ಕರೆಯೋ ಧಾಟಿಗೆ
ದಿನವೂ ನಾನು
ನಿನ್ನ ಅರಿಯೋ ರೀತಿಗೆ
ಬೆರೆದೆ ನೀನು
ನನ್ನ ಕರೆಯೋ ಧಾಟಿಗೆ
ದಿನವೂ ನಾನು
ನಿನ್ನ ಅರಿಯೋ ರೀತಿಗೆ
ಒಲವೇ ಬಲೆ ಬೀಸಿ
ವಸಗೆ ಹೂವು ಹಾಸಿ
ಎಂದು ನಾನು ನಿನ್ನನೇ ನೆಚ್ಚಿಕೊಂಡೆ
ಹಗಲಿರುಳು ಎನ್ನದೇ ಮೆಚ್ಚಿಕೊಂಡೆ
ರಾಗ ರಂಗು ಮೂಡಿ ಬಂತು
ಕಣ್ಣಿನಾಗೆಏಏಏ
ಹೊಯ್ ನೂರೆಂಟು ಆಸೆತಂತು
ಬಾಳಿನಾಗೆ
ಮಾತು ಮೌನ ಮೀರಿ ಬೆಳದ
ಸ್ನೇಹದಾಗೆ…
ಅಂಗ ಸಂಗ ತೋರಿ ಹೊಳೆದ
ಮೋಹದಾಗೆ…
ಜೀವ ಭಾವ ಹೊಂದಿಕೊಂಡ
ಪ್ರೀತಿಯಾಗೆ…
ಏನೇನೊ ಕನಸು ಕಂಡೆ
ಪ್ರೇಮದಾಗೆ…
ಅಂಟು ನಂಟು ತುಂಬಿ ಬಂದ
ನೋಟದಾಗೆ…
ನಾವ್ ಒಂದಾಗಿ ಬೆರೆತೆ
ಹಾಲು ಜೇನಿನಾಗೆ
ರಾಗ ರಂಗು ಮೂಡಿ ಬಂತು
ಕಣ್ಣಿನಾಗೆ…
ಹೊಯ್ ನೂರೆಂಟು ಆಸೆತಂತು
ಬಾಳಿನಾಗೆ
ಮಾತು ಮೌನ ಮೀರಿ ಬೆಳದ
ಸ್ನೇಹದಾಗೆ…
ನಾವ್ ಒಂದಾಗಿ ಬೆರೆತೆ
ಹಾಲು ಜೇನಿನಾಗೆ
No comments:
Post a Comment
Write Something about PK Music