ಸಂಗೀತ:
ಡಾ. ಹಂಸಲೇಖ
ಗಾಯಕರು:
ಡಾ. ಎಸ್.ಪಿ.ಬಿ
ಸಾಹಿತ್ಯ:
ಡಾ. ಹಂಸಲೇಖ
ಮಳೆ
ಮುನಿದರೆ ಸಂತ
ಜನಪದ ಸಂತ ಜನಪದ ಸಂತ
ಮಳೆ
ಮುನಿದರೆ ಸಂತ
ಜನಪದ
ಸಂತ ಜನಪದ ಸಂತ
ಮಳೆ
ಬಿದ್ದರೆ ಬೆಳೆ ಎದ್ದರೆ
ಜಗಕ್ಕನ್ನನೀಡೊ
ಶ್ರೀಮಂತ
ರೈತ
ನಮ್ಮ ಭಾರತ ಭಾಗ್ಯವಿಧಾತ
ರೈತ
ನಮ್ಮ ಭಾರತ ಭಾಗ್ಯವಿಧಾತ
ಯಂತ್ರಜ್ಞಾನದ
ಚಕ್ರಾಧಿಪತಿ ರೈತ
ಭೂಮಿತಾಯಿಯ
ಬೀಜಾನುಮತಿ
ರೈತ
ರೈತ
ನಮ್ಮ ಭಾರತ ಭಾಗ್ಯವಿಧಾತ
ರೈತ
ನಮ್ಮ ಭಾರತ ಭಾಗ್ಯವಿಧಾತ
ರೈತ
♬♬♬♬♬♬♬♬♬♬♬♬
ಏಳುತ ಕೈಯಲ್ಲೆ
ಮುಗಿಯಲು ಮುಕ್ಕಣ್ಣ
ನಡೆಯುತ ಕಾಲ್ಗಳಿಗೆ
ಕರಿನೆಲವೆ ಶಿವೆಯಣ್ಣ
ಮುಳುಗುವ ಮೈಯ್ಯಿಗೆ
ಗಂಗೆಯೆ ಮಹಾದಾಯಿ
ಮಲಗುವ ಜೀವಕ್ಕೆ
ಗಗನವೆ ದಿನಗಾಹಿ
ಕಷ್ಟದ ಮಳೆಗೆ
ಎದುರಾಡದವ ರೈತ
ಎದ್ದರು ಬಿದ್ದರು ಮಣ್ಣನು
ಮರೆಯದ ಧಾತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ
ಮೋಡವ ಗೋಗರೆದು
ಹಾಡುವ ಕಲೆಗಾರ
ಸಾಲವೊ ಸೋಲವೊ
ಸೋಲದ ಸರದಾರ
ನಾಡಿನ ಹಸಿವೆಯನು
ನೀಗಿಸೊ ಛಲಗಾರ
ಲೋಕದ ಸುಖಕ್ಕಾಗಿ
ದುಡಿಯುವ ಹಮ್ಮೀರ
ಸರಕಾರಗಳ ಜಂಘಾಬಲವೆ ರೈತ
ಕೊಡಲಿ ಹಿಡಿದರು
ಕೊಲ್ಲಲು ಬಾರದ ನೇತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ ನಮ್ಮ ಬಾಳಿನ ಭಾಗ್ಯವಿಧಾತ
ರೈತ
ಬೆಳೆಯುವ ಕಾಯಕವೇ
ಬೆವರಿಗೆ ಹಿತವೆಂದ
ಹಂಚುವ ಹಂಬಲವೇ
ಉಳುವವನ ಮತವೆಂದ
ಕೀರ್ತಿ ಕಿರೀಟಗಳು
ತೆನೆಗೆ ಹೊರೆಯೆಂದ
ನಂಬಿಕೆ ಬೀಜವಿದೆ
ಬಿತ್ತನೆ ಸಾಕೆಂದ
ಛತ್ರಪತಿಗಳ ಕ್ಷೇತ್ರಾಧಿಪತಿ ರೈತ
ಭೂಮಿತಾಯಿಯ
ಬೀಜಾನುಮತಿ ರೈತ
ಮಳೆ ಮುನಿದರೆ ಸಂತ
ಜನಪದ ಸಂತ ಜನಪದ ಸಂತ
ಮಳೆ ಬಿದ್ದರೆ ಬೆಳೆ ಎದ್ದರೆ
ಜಗಕ್ಕನ್ನನೀಡೊ ಶ್ರೀಮಂತ
ರೈತ ನಮ್ಮ ಭಾರತ ಭಾಗ್ಯವಿಧಾತ
ರೈತ ನಮ್ಮ ಭಾರತ ಭಾಗ್ಯವಿಧಾತ
ರೈತ
No comments:
Post a Comment
Write Something about PK Music