ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ||ಒಳಿತು||
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ
ಮೇಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ ಬರದು ಏನು ಹಿಂದೆ
ಏ…..….. ||ಒಳಿತು||
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ದ್ವೇಷವೆಂಬ ವಿಷವ ಸುರಿಯಬೆಡ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ
ಏ…..….. ||ಒಳಿತು||
Olitu maadu manusa nee irodu mooru divasa
Olitu maadu manusa nee irodu mooru divasa
Usiru ninta mEle ninna hesaru hELutaara
Usiru ninta mEle ninna hesaru hELutaara
heNa annutaara maNNaga hooLutaara
chaTTa kaTTutaara ninna suTTu haakutaara
Olitu maadu manusa nee irodu mooru divasa ||Olithu||
Mooru dinada sante nagunaguta maaDabeku
Dweshavemba kante nee suTTu haakabeku
Mooru dinada sante nagunaguta maaDabeku
Dweshavemba kante nee suTTu haakabeku
Preeti prEma hanchi nee hOgabEku alli
Satta mElu ninage hesaru unTu illi
Preeti prEma hanchi nee hOgabEku alli
Satta mElu ninage hesaru unTu illi
BhoomiyallirOdu baaDige maneyaage
mEle hOgabeku namma swanta manege
baralu Enu tande baradu Enu hinde
E….. ||Olithu||
Swarga naraka ella mElilla kELu janaka
Ille kaaNabEku usiriro konetanaka
Swarga naraka ella mElilla kELu janaka
Ille kaaNabEku usiriro konetanaka
Naanu naanu endu mereyabyada mooDa
Naanu embudu maNNu maretuhOgabEDa
Naanu naanu endu mereyabyada mooDa
Naanu embudu maNNu maretuhOgabEDa
Dweshavemba vishava suriyabeDa mooDa
Preetiyamrutava omme savidu nODa
Ade swarga kELa manujanaagi baaLa
E….. ||Olithu||
ಈ ಹಾಡಿಗೆ ಸಾಹಿತ್ಯ ಬರೆದವರು ನಿರ್ದೇಶಕ ಋಷಿ, ಸಂಗೀತ ಸಂಯೋಜಿಸಿದವರು ಶ್ರೀ ಮಧುರ ನಾಯಿರಿ, ಹಾಡಿದವರು ಸಿ. ಅಶ್ವಥ್. ಅಶ್ವಥ್ ಅಂತೂ ಈಗ ನಮ್ಮೊಂದಿಗಿಲ್ಲ. ಸಾಹಿತ್ಯ ಬರೆದ ಋಷಿ ಜಾಮೀನಿಗಾಗಿ ಕೇವಲ 20 ಸಾವಿರ ರೂಪಾಯಿ ಹೊಂದಿಸಲಾಗದೆ 11 ತಿಂಗಳು ಜೈಲಿನಲ್ಲಿದ್ರು. ಜೈಲಿನಲ್ಲೂ ಇವರನ್ನ ಕೈ ಹಿಡಿದಿದ್ದು ಇದೇ ಒಳಿತು ಮಾಡು ಮನುಸ ಹಾಡು. ಈ ಹಾಡನ್ನ ಋಷಿ ಬರೆದಿದ್ದು ಅನ್ನೋ ಕಾರಣಕ್ಕೆ ಜೈಲಿನಲ್ಲೇ ಇರುವ ಮತ್ತೊಬ್ಬ ಕೈದಿ ಅಜಯ್ ಶಂಕರ್ ಸುಮಾರು 40 ರಿಂದ 50 ಸಾವಿರ ಖರ್ಚು ಮಾಡಿ ಜಾಮೀನು ಕೊಡಿಸಿ ಋಷಿ ಜೈಲಿಂದ ಹೊರಬರುವಂತೆ ಮಾಡಿದ್ದಾರೆ. ಋಷಿ ಇತ್ತೀಚೆಗಷ್ಟೆ ಜೈಲಿಂದ ಹೊರಬಂದಿದ್ದಾರೆ.
ReplyDeleteಮರುಭೂಮಿ ಚಿತ್ರಕ್ಕಾಗಿ ಈ ಹಾಡನ್ನ ಮಾಡಲಾಯ್ತು. ಕಾರಣಾಂತರಗಳಿಂದ ಆ ಚಿತ್ರ ರಿಲೀಸ್ ಕೂಡ ಆಗಲಿಲ್ಲ. ಋಷಿ ಕಥೆ ಇದಾದ್ರೆ, ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಶ್ರೀ ಮಧುರ ನಾಯಿರಿ ಕಳೆದ ಆರು ತಿಂಗಳಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇದ್ದಾರೆ. ತೀವ್ರ ಅನಾರೋಗ್ಯದಿಂದ ಮಧುರ ಬಳಲುತ್ತಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ. ಕುಟುಂಬದ ಆಧಾರವಾಗಿದ್ದ ಮಧುರ ಹಾಸಿಗೆ ಹಿಡಿದಿರೋದ್ರಿಂದ ಕುಟುಂಬಕ್ಕೂ ನಿತ್ಯ ನೋವಿನ ದಿನವಾಗಿದೆ.
Nice
ReplyDelete