ಚಿತ್ರ: ಭಕ್ತ ಕನಕದಾಸ
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಬಾಗಿಲನು ತೆರೆದು
ಪರಮಪದದೊಳಗೆ ವಿಶಧರನ ತಲ್ಪದಲಿ ನೀ
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ
♫♫♫♫♫♫♫♫♫♫♫
ಕಡುಕೋಪದಿಂ ಖಳನು ಖಡ್ಗವನೇ ಪಿಡಿದು
ನಿನ್ನೊಡೆಯ ಎಲ್ಲಿಹನು ಎಂದು ನುಡಿಯೆ
ದ್ರುಡಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಬಾಗಿಲನು ತೆರೆದು
ಯಮಸುತನ ರಾಣಿಗೆ ಅಕ್ಷಯ ವಸನವ ಇಟ್ಟೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೇ
ಬಾಗಿಲನು ತೆರೆದು
ಬಾಗಿಲನು ತೆರೆದು
ಬಾಗಿಲನು ತೆರೆದು
ಸೇವೆಯನು ಕೊಡೊ ಹರಿಯೇ
No comments:
Post a Comment
Write Something about PK Music