Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Nee meetida nenapellavu Lyrics in Kannada | ನೀ ಮೀಟಿದ ನೆನಪೆಲ್ಲವೂ


ಚಿತ್ರ : ನೀ ಬರೆದ ಕಾದಂಬರಿ

ನೀ ಮೀಟಿದ ನೆನಪೆಲ್ಲವೂ
ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾ ನಿನ್ನನು
ಬೆರೆವಂತ  ಮನಸಾಗಿದೆ
 ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
 ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ

ನೀ ಮೀಟಿದ ನೆನಪೆಲ್ಲವೂ
ಎದೆ ತುಂಬಿ ಹಾಡಾಗಿದೆ

ಬಾಳಲ್ಲಿ ನೀ ಬರೆದೆ
ಹೊಸ ಪ್ರೇಮ ಕಾದಂಬರಿ
ಧರೆಗಿಳಿದು ಬಂದಂಥ
ಸೌಂದರ್ಯ  ಸುರಸುಂದರಿ
ಶ್ರುತಿ ಸೇರಿದೆ ಬಾಳು ಹಿತವಾಗಿದೆ
ಸುರಲೋಕದ ಸುಖ ನಮದಾಗಿದೆ
ತನು ಕೋಗಿಲೆ ಮನ ಹಾಡಿದೆ
ಎದೆ ಕೋಗಿಲೆ  ಇದೋ ಹಾಡಿದೆ
ಮನಸು ಮನಸು ಬೆರೆಯೆ ಬಾಳೆ ಸೊಗಸು
ನೀ ಮೀಟಿದ ನೆನಪೆಲ್ಲವೂ
ಎದೆ ತುಂಬಿ ಹಾಡಾಗಿದೆ

 ಭಾನು  ಭೂಮಿ
ನೋಡಲ್ಲಿ  ಒಂದಾಗಿದೆ
ನಮ್ಮಂತೆ ನೀವೆಂದು
ಒಂದಾಗಿ ಇರಿಯೆಂದಿದೆ
ಸಂಗಾತಿ ನಾ ನಿನ್ನ ಜೊತೆಯಾಗುವೆ
ಎಂದೆಂದಿಗೂ ನಿನ್ನ ಉಸಿರಾಗುವೆ
ನೀನಿಲ್ಲದೆ ಇರಲಾರೆನು
ನಿನ್ನಿಂದ ನಾ ದೂರಾಗೇನು
ನಗುವ ನಲಿವ ಜಗವ
ಮರೆತು ನಲಿವ

ನೀ ಮೀಟಿದ ನೆನಪೆಲ್ಲವೂ
ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾ ನಿನ್ನನು
ಬೆರೆವಂತ  ಮನಸಾಗಿದೆ
 ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
 ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ

No comments:

Post a Comment

Write Something about PK Music

new1

new2

new5