ಸಿದ್ದಪ್ಪಾಜಿ ಪವಾಡ
ಕಣ್ಣೆತ್ತಿ ನೋಡ್ರವ್ವ… ಕಂಡಾಯದ ಮೂರುತಿಯ
ಕಣ್ಣೆತ್ತಿ ನೋಡ್ರವ್ವ… ಕಂಡಾಯದ ಮೂರುತಿಯ
ಕಣ್ಣಾರೆ ಕಂಡು ಕೈ ಮುಗಿದು ದಾನವ ನೀಡಿರವ್ವಾ
ಕಣ್ಣಾರೆ ನೋಡಿ ಕೈ ಮುಗಿದು ದಾನವ ನೀಡಿರವ್ವಾ
♫♫♫♫ ♫♫♫♫ ♫♫♫♫ ♫♫♫♫
ಧರೆಗೆ ದೊಡ್ಡವರು ತಂದಂತ ಮುತ್ತಿನ ಕಂಡಾಯ
ಉತ್ತರ ಕೇಶದಿಂದ ಬಂದ ಉರಿಯ ಕಂಡಾಯ
ಹಿಂಡು ಗಾಳಿಗೆ ಗಂಡನಾಗಿ ಬಂದಂತ ಕಂಡಾಯ
ಘನ ಗಾರುಡಿಗರ ಗರ್ವವನ್ನೇ ಮೆಟ್ಟಿದ ಕಂಡಾಯ
ನಂಬಿದ ಮನೆಯಲಿ ಹಿಂಬಾಗಿ ವಾಲಾಡೊ ಕಂಡಾಯ
ನಂಬಲಾರದ ಮನೆಯೆಲ್ಲ ಜಾಲಾಡೊ ಕಂಡಾಯ
ದಾನವ ಮಾಡಿರೆ ನೀವು ಧನವಂತರಾಗಿ ಬಾಳಿ ನೀವು
ದಾನವ ಮಾಡಿರೆ ನೀವು ಧನವಂತರಾಗಿ ಬಾಳಿ ನೀವು
ಕಣ್ಣೆತ್ತಿ ನೋಡ್ರವ್ವ…. ಕಂಡಾಯದ ಮೂರುತಿಯ
ಕಣ್ಣಾರೆ ಕಂಡು ಕೈ ಮುಗಿದು ದಾನವ ನೀಡಿರವ್ವಾ
ಯವ್ವಾ ಕಣ್ಣಾರೆ ನೋಡಿ ಕೈ ಮುಗಿದು ದಾನವ ನೀಡಿರವ್ವಾ
♫♫♫♫ ♫♫♫♫ ♫♫♫♫ ♫♫♫♫
ಅನ್ನ ಕೊಟ್ಟವರ ಮನೆಯನ್ನು ಹರಸುವ ಕಂಡಾಯ
ದಾನ ನೀಡಿದ ಮನೆಗೆ ಪುಣ್ಯವ ಕೊಡುವ ಕಂಡಾಯ
ಬಿಕ್ಷೆ ಕೊಟ್ಟವರ ಮನೆಯೆಂದು ಲಕ್ಷ ಹೊನ್ನಹುದು
ನಿಂದಿಸಿದವರ ಮನೆಯೆಂದು ನಿರ್ಮೂಲವೆ ಹೌದು
ಧರೆಗೆ ದೊಡ್ಡವರ ಮುತ್ತಿನ ಜೋಳಿಗೆ ಹರಸಿರುವ ಬಿಕ್ಷಾ
ತಾಯಿ ದೊಡ್ಡಮ್ಮ ರಾಚಪ್ಪಾಜಿ ಚನ್ನಾಜವ್ನ ಬಿಕ್ಷಾ
ಮುತ್ತಿನಂಥ ಬಿಕ್ಷೆ ನೀಡಿ ಮುತ್ತೈದೆಯಾಗಿ ಬಾಳಿರಮ್ಮ
ಮುತ್ತಿನಂಥ ಬಿಕ್ಷೆ ನೀಡಿ ಮುತ್ತೈದೆಯಾಗಿ ಬಾಳಿರಮ್ಮ
ಕಣ್ಣೆತ್ತಿ ನೋಡ್ರವ್ವ….. ಕಂಡಾಯದ ಮೂರುತಿಯ
ಕಣ್ಣೆತ್ತಿ ನೋಡ್ರವ್ವ … ಕಂಡಾಯದ ಮೂರುತಿಯ
ಕಣ್ಣಾರೆ ಕಂಡು ಕೈ ಮುಗಿದು ದಾನವ ನೀಡಿರವ್ವಾ
ಯವ್ವಾ ಕಣ್ಣಾರೆ ನೋಡಿ ಕೈ ಮುಗಿದು ದಾನವ ನೀಡಿರವ್ವಾ
ದಾನವ ನೀಡಿರವ್ವಾ ದಾನವ ನೀಡಿರವ್ವಾ
No comments:
Post a Comment
Write Something about PK Music