Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Baduki Uliyuvene | Siddappaji pavaadagalu Lyrics in kannada ಬದುಕಿ ಉಳಿಯುವೆನೆ



ಸಿದ್ದಪ್ಪಾಜಿ ಪವಾಡ

ಬದುಕಿ ಉಳಿಯುವೆನೆ……..
ಘೋರ ಪವಾಡದಲಿ.. ಅಯ್ಯೋ
ಬದುಕಿ ಉಳಿಯುವೆನೆ……..
ಘೋರ ಪವಾಡದಲಿ..
ತಾಯಿ ದೊಡ್ಡವ್ವ ತಂದೆ ರಾಚಪ್ಪಾಜಿ
ಕರುಣೆಯ ತೋರಿರೆನಗೆ ನೀವು
ಕರುಣೆಯ ತೋರಿರೆನಗೆ.
ಬದುಕಿ ಉಳಿಯುವೆನೆ……..ನಾ
ಘೋರ ಪವಾಡದಲಿ..
♫♫♫♫ ♫♫♫♫ ♫♫♫♫ ♫♫♫♫
ಬದುಕಿ ಬಂದರೆ ನಿಮ್ಮ ಮಗ ನಾನು
ಬದುಕದೆ ಹೋದರೆ ಬ್ರಹ್ಮನ ಮಗನು
ಎಂಟು ಪವಾಡಗಳ ಮಾಡಿದರು
ಕಡೆಗೂ ಕಬ್ಬಿಣವ ಕೊಡದಿಹರು
ಕಾದು ಗಟ್ಟಿ ಪವಾಡವನು ಗೆಲ್ಲಿಸಿರೀ ನನ್ನ
ಕಾದು ಗಟ್ಟಿ ಪವಾಡವನು ಗೆಲ್ಲಿಸಿರೀ
ನಿಮ್ಮೀ ಕಂದನ ಮರೆಯದಿರಿ
ಬದುಕಿ ಉಳಿಯುವೆನೆ……..
ಘೋರ ಪವಾಡದಲಿ.. ಅಯ್ಯೋ
ಬದುಕಿ ಉಳಿಯುವೆನೆ……..
♫♫♫♫ ♫♫♫♫ ♫♫♫♫ ♫♫♫♫
ಕೊಟ್ಟರೆ ಕಬ್ಬಿಣವ ಉಳಿಯುವಿರಿ
ಕೊಡದೆ ಹೋದರೆ ಅಳಿಯುವಿರಿ
ಸ್ವಾಮಿಯ ಮಹಿಮೆಯ ತಿಳಿದೀರಾ
ಕಪ್ಪು ತುಂಡದ ಲೀಲೆ ಬಲ್ಲಿರಾ
ಗುರುಗಳ ಕೋಪಕೆ ಗುರಿಯಾದಿರಿ ಆಯ್ಯೋ
ಗುರುಗಳ ಕೋಪಕೆ ಗುರಿಯಾದಿರಿ
ಬಹು ಘೋರ ಕಷ್ಟಕೆ ಸಿಲುಕುವಿರಿ
ಅಳಿಯಲಿ ಉಳಿಯಲಿ ಗುರುವಿನ ಕಾಯಕ
ಮಾಡುವುದೇ ಧರ್ಮ
ಅಳಿಯದೆ ಉಳಿದರೆ ನೋಡುವೆನು
ಪಂಚಾಳದವರ ಪ್ರೇಮ
ನಾಳೆಯನರಿಯದ ನರರೇ ನಿಮಗೆ
ಕಾದಿದೆಯೋ ಕರ್ಮ
ನಾಕವನಳಿದು ನರಕಕೆ ನಿಮ್ಮ
ನೂಕುವುದೇ ಮರ್ಮ


No comments:

Post a Comment

Write Something about PK Music

new1

new2

new5