Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

Search This Blog

Showing posts with label V Nagendra Prasad. Show all posts
Showing posts with label V Nagendra Prasad. Show all posts
March 18, 2023

ಮಾಯಗಂಗೆ - Maayagange Song Lyrics - Banaras


ಚಿತ್ರ: ಬನಾರಸ್
ಸಂಗೀತ: ಬಿ.ಅಜನೀಶ್ ಲೋಕನಾಥ್
ಗಾಯಕ: ಅರ್ಮಾನ್ ಮಲಿಕ್
ಸಾಹಿತ್ಯ:ವಿ. ನಾಗೇಂದ್ರ ಪ್ರಸಾದ್


ಮಾಯಗಂಗೆ ಮಾಯಗಂಗೆ

ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ

ಹೀಗೆ ಆದಾಗಲೇ
ನಾನೇ ಗಂಗೆಯೋ

ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ
ದೇವರೂರಿಗೆ ನಾನೇ

ದಾರಿ ಹೋಕನಾ
ಅನ್ನೋ ಅಚ್ಚರಿಯಾಗಿರೊ ಯೋಗ
ಪುಟ್ಟ ದೋಣಿ ಒಂದು
ಸುಳಿಗೆ ಸಿಕ್ಕಿಕೊಂಡ ಹಾಗಿದೆ ಹೋ
ಇಂಥದೊಂದು ದಾಳಿಯನ್ನು

ಜೀವ ತಾಳಬಲ್ಲದೆ ಹೋ
ಮಾಯಗಂಗೆ ಮಾಯಗಂಗೆ

ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ

ಹೀಗೆ ಆದಾಗಲೇ..
♬♬♬♬♬♬♬♬♬♬♬♬

321
ಬಾನೆತ್ತರ ಈ ಗೋಪುರ

ವಾಲೊಥರ ಹೇ
ಹಾ ಏಳು ಸ್ವರ

ಪಾಮರ ಕೇಳೋಥರ
ಹೇ . ನಾನೀಗ

ಅವಳ ಹೆಜ್ಜೇನ ನೋಡುತಾ
ಸಾಗಿದೆ ಪಾದ ಹೋಗೋ

ಗುರಿನೇ ಕಾಣದೆ
ದಟ್ಟ ಬೆಳಕಲು ಎಲ್ಲ ಕತ್ತಲಾಗಿದೆ
ನೀನು ಹೇಳಿದೆ ಡೊಂಕಿನ ದಾರಿ
ಹುಟ್ಟಬೇಕಿದೆ ಮತ್ತೆ ಹುಟ್ಟಬೇಕಿದೆ
ಪ್ರೀತಿ ಮಾಡಲು ಸೀಳುತ ಗೋರಿ
ಮಾಯಗಂಗೆ ಮಾಯಗಂಗೆ

ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ

ಹೀಗೆ ಆದಾಗಲೇ..
♬♬♬♬♬♬♬♬♬♬♬♬

321
ಗೂಡಂಗಡಿ ಚಹಾ ಪುಡಿ

ಮಾತಾಡಿದೆ ಹೇ
ಏನಾಯಿತು ಹೇಗಾಯಿತು

ಹೇಳೆಂದಿದೇ ಹೇ
ಹೇಏಏ ಕಣ್ಣ ಒಳಗೆ

ನಕ್ಷತ್ರ ಮಂಡಳಿ
ಮಾತಲಿ ನಾ ಹೇಗೆ ಅವಳ

ವಿಚಾರ ಹೇಳಲಿ
ತುಂಬಾ ಜಂಗುಳಿ

ಇಲ್ಲಿ ಭಸ್ಮದೋಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೆನು

ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ
ಮಾಯಗಂಗೆ ಮಾಯಗಂಗೆ

ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ

ಹೀಗೆ ಆದಾಗಲೇ

December 12, 2022

Raana | Udho Udho Huligemma Lyrics | Shreyas Manju | Gujjal Purushotham | Chandan Shetty | R.Nanda Kishore

PK-Music

♪ Banner: Gujjal Talkies ♪ Movie: Raana ♪ Producer: Gujjal Purushotham ♪ Director: R.Nanda Kishore ♪ Starring: Shreyas Manju, Reeshma Nanaiah & Others ♪ Music: Chandan Shetty ♪ Song: Udho Udho Huligemma ♪ Singer: Karibasava Tadakal ♪ Lyrics: Dr. V.Nagendra Prasad


Uploading...








December 11, 2022

ಧರಣಿ - Dharani Mandala Madhyadali Lyrics -Kranti Dharani Lyrics in Kannada - Darshan



Song Credits Song Name : Dharani, The Theme Song Movie : #Kranti Music Composer : V Harikrishna Lyrics : Dr V Nagendra Prasad Singers : Pancham Jeeva, Santhosh Venky, Aniruddha Sastry, Madhwesh Baradwaj, Vihan, Khushala, Lakshmi Vijay, Meghana Kulkarni, Pooja Rao, Archana & Prarthana Solo lines sung by : Pancham Jeeva


ಧರಣಿ ಮಂಡಲ ಮಧ್ಯದಲಿ

ಮೆರೆವಾ ಕನ್ನಡ ದೇಶದಲಿ

ಮೊಳಗೋ  ಕಹಳೇ

ದನಿ ಕೇಳಿ ಬೆಚ್ಚೋ ಗಗನ

 

ಕಪಟ ಇಲ್ಲದ ಊರಿನಲಿ

ಕರುಣೆ ತುಂಬಿದ ನಾಡಿನಲಿ

ದಿನವೂ ಕ್ಷಣವೂ

ರಣಕಲಿಗಳಿಲ್ಲಿ ಜನನ

 

ಕನ್ನಡದಲಿ ಉಸಿರಾಡುವುದೆನ್ನೆದೆ

ಕನ್ನಡ ಉಳಿದು ಬೇರೆ ಏನಿದೇ

ತಿರುಗೋ ಭೂಮಿಗೆ ಗೊತ್ತು

ಕನ್ನಡಕ್ಕಿರುವ ಗತ್ತು

ಕ್ರಾಂತಿಗೆ ತಿಲಕವನಿಟ್ಟ

ನಾಡು ನನ್ನದು

ತಾಯಿಯ ಕೂಗಿಗೇ ಬಂದೆನು ಇಲ್ಲಿಗೆ

 

ಧರಣಿ ಮಂಡಲ ಮಧ್ಯದಲಿ

ಮೆರೆವಾ ಕನ್ನಡ ದೇಶದಲಿ

ಮೊಳಗೋ ಕಹಳೇ

ದನಿ ಕೇಳಿ ಬೆಚ್ಚೋ ಗಗನಾ


 

ಕಪಟ ಇಲ್ಲದ ಊರಿನಲಿ

ಕರುಣೆ ತುಂಬಿದ ನಾಡಿನಲಿ

ದಿನವೂ ಕ್ಷಣವೂ

ರಣಕಲಿಗಳಿಲ್ಲಿ ಜನನ

November 23, 2022

Belakina Kavithe Song Lyrics in Kannada - Banaras Kannada Movie


Movie: Banaras
Music : B. Ajaneesh loknath 
Singer's : Sanjith Hegde, Sangeetha Ravindranath
Lyric : DR. V Nagendra prasadh
 



ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಹೀಗೆ ತಾನೇ ಪ್ರೇಮ ಸೆಳೆಯುವ ಗಳಿಗೆ
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳು ನನ್ನೊಳಗೆ
ಹತ್ತಿಯಂತೆ ಇವಳು ಈ ಮುದ್ದಾದ
ಬೆಂಕಿನ ಗಂಟಾಕಿದಂತ ಶಿವ ಯಾರೋ
 
♫♫♫♫♫♫♫♫♫♫♫♫
 
ರೆಪ್ಪೆಯಲ್ಲೇ ಸರಸ ಸದಾಕಾಲ
ಸಮ್ಮೋಹಗೊಳಿಸುವ ಹುಡುಗಿ
ಒಂದೆ ಒಂದು ನಿಮಿಷ
ಈ ಮಾದೇ ಕೈ ಬೆರಳು ತಾಗಿ
ಸರಿಯೋ ಕಾಲ ಕೂಡ ಸವೆಯೋ ತರ
ನಾ ಪ್ರೀತಿ ಮಾಡೋ ಹೈದ ಮಜುನು ತರ
ಹೀಗೆ ತಾನೇ ಪ್ರೇಮ ಸರಿಸಿತು ಜಗವ
 
♫♫♫♫♫♫♫♫♫♫♫♫
 
ಮೆಚ್ಚಿದನು ಅರಸ ಸಿಗೊಬೇಡ
ಅಂತಾನೆ ಸರಿಸುತ ಪರದೆ
ಪ್ರೀತಿಸುವ ಕೆಲಸ
ರಜೆ ಹಾಕೋ ಮಾತಿಲ್ಲ ರಾಧೆ..
ಉಸಿರ ಆಣೆ ಮಾಡು ಪ್ರೇಮೋತ್ಸವ
ನಾ ಅರಿಯೋ ಮುನ್ನ ಆಯ್ತು ಈ ಸಂಭವ
ಹೀಗೆ ತಾನೇ ಪ್ರೇಮ ಮುಗಿಯದ ಕವನ
 
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳು ನನ್ನೊಳಗೆ





November 08, 2022

ಭುವನಂ ಗಗನಂ - Bhuvanam Gaganam Song Lyrics in Kannada - Vamshi

ಚಿತ್ರ: ವಂಶಿ
ಸಂಗೀತ: RP ಪಟ್ನಾಯಕ್
ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್

 

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು

ಹಸಿರನು ನೀಡಿದ
ಇರುಳನು ನೀಗಲು

ಹಗಲನು ನೀಡಿದ
ಶರಣು ಎನಲು ಇವನು

ಒಲಿದು ಬರುವ
ಎದುರು ನಿಲ್ಲಲು ಇವನು

ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
♫♫♫♫♫♫♫♫♫♫♫♫
ತಾಯಿಗೆ ಮಗನೆ ಜೀವ

ಮಗನಿಗೆ ತಾಯೆ ದೈವ
ಇಲ್ಲಿ ತ್ಯಾಗ ಪ್ರೀತಿಯ

ಕರುಳಿನ ಬಂಧ ನೋಡು
ಜಗದಾ ಬಾರಿ ಸಾಗರವ ಜಿಗಿದು

ಈಜಿ ಮೀರಿಸುವ ಪ್ರಬಲ

ಧೈರ್ಯ ನೀಡಿರುವ ಶಿವನೇ...
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
♫♫♫♫♫♫♫♫♫♫♫♫
ಕಾಲ ಓಡುತಿದೆ ಬೇಗ

ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ

ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ

ಜನರು ಮಾಡೋ ಕಾಯಕವ
ನಿಜದ ಅಂಕ ನೀಡಿರುವ ತಿಳಿಯೋ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು

ಹಸಿರನು ನೀಡಿದ
ಇರುಳನು ನೀಗಲು

ಹಗಲನು ನೀಡಿದ
ಶರಣು ಎನಲು ಇವನು

ಒಲಿದು ಬರುವ
ಎದುರು ನಿಲ್ಲಲು ಇವನು

ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ

new1

new2

new5