Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

ಭುವನಂ ಗಗನಂ - Bhuvanam Gaganam Song Lyrics in Kannada - Vamshi

ಚಿತ್ರ: ವಂಶಿ
ಸಂಗೀತ: RP ಪಟ್ನಾಯಕ್
ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್

 

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು

ಹಸಿರನು ನೀಡಿದ
ಇರುಳನು ನೀಗಲು

ಹಗಲನು ನೀಡಿದ
ಶರಣು ಎನಲು ಇವನು

ಒಲಿದು ಬರುವ
ಎದುರು ನಿಲ್ಲಲು ಇವನು

ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
♫♫♫♫♫♫♫♫♫♫♫♫
ತಾಯಿಗೆ ಮಗನೆ ಜೀವ

ಮಗನಿಗೆ ತಾಯೆ ದೈವ
ಇಲ್ಲಿ ತ್ಯಾಗ ಪ್ರೀತಿಯ

ಕರುಳಿನ ಬಂಧ ನೋಡು
ಜಗದಾ ಬಾರಿ ಸಾಗರವ ಜಿಗಿದು

ಈಜಿ ಮೀರಿಸುವ ಪ್ರಬಲ

ಧೈರ್ಯ ನೀಡಿರುವ ಶಿವನೇ...
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
♫♫♫♫♫♫♫♫♫♫♫♫
ಕಾಲ ಓಡುತಿದೆ ಬೇಗ

ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ

ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ

ಜನರು ಮಾಡೋ ಕಾಯಕವ
ನಿಜದ ಅಂಕ ನೀಡಿರುವ ತಿಳಿಯೋ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು

ಹಸಿರನು ನೀಡಿದ
ಇರುಳನು ನೀಗಲು

ಹಗಲನು ನೀಡಿದ
ಶರಣು ಎನಲು ಇವನು

ಒಲಿದು ಬರುವ
ಎದುರು ನಿಲ್ಲಲು ಇವನು

ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ

No comments:

Post a Comment

Write Something about PK Music

new1

new2

new5