ಚಿತ್ರ : ಸೀತಾ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
♬♬♬♬♬♬♬♬♬♬♬♬♬♬♬♬
ಮಿಡಿದೆ ನೀನು ಪ್ರಣಯ ನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯ ನಾದ ಹೃದಯ ವೀಣೆ ಅದರಲಿ
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
♬♬♬♬♬♬♬♬♬♬♬♬♬♬♬
ಕಂಗಳಲ್ಲೇ ಕವನ ಬರೆದು ಕಳಿಸಿದೆ ನೀ ಇಲ್ಲಿಗೆ
ಕಂಗಳಲ್ಲೇ ಕವನ ಬರೆದು ಕಳಿಸಿದೆ ನೀ ಇಲ್ಲಿಗೆ
ಅಂಗಳದೇ ಅರಳಿತಾಗ ನನ್ನ ಒಲವ ಮಲ್ಲಿಗೆ
ಬರೆದೆ ನೀನು ನಿನ್ನ ಹೆಸರು ನನ್ನ ಬಾಳ ಪುಟದಲಿ
♬♬♬♬♬♬♬♬♬♬♬♬♬♬♬
ನಿನ್ನ ನಗೆಯ ಬಲೆಯ ಬೀಸಿ ಹಿಡಿದೆ ನನ್ನ ಜಾಲದೆ
ನಿನ್ನ ನಗೆಯ ಬಲೆಯ ಬೀಸಿ ಹಿಡಿದೆ ನನ್ನ ಜಾಲದೆ
ಬಂಧಿಸಿದೆ ನನ್ನನಿಂದು ನಿನ್ನ ಪ್ರೇಮ ಪಾಶದೆ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ
ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
No comments:
Post a Comment
Write Something about PK Music