ಚಿತ್ರ: ಸುಪ್ರಭಾತ
ಚೆಲುವೆ ನನ್ನ ಚೆಲುವೆ
ನಗುವ ಹೊನ್ನ ಹೂವೆ
ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
ಏನು ಹಾಯಾಗಿದೆ
ಚೆಲುವೆ ನನ್ನ ಚೆಲುವೆ
ನಗುವ ಹೊನ್ನ ಹೂವೆ
ಎದೆಯಲ್ಲಿ ಮಿಡಿವ ಮಾತು ನುಡಿವ
ಎದೆಯಲ್ಲಿ ಮಿಡಿವ ಮಾತು ನುಡಿವ
ಚಪಲ ನಿನ್ನಲ್ಲಿ ನಾ ಕಂಡೆ
ಈ ಕಣ್ಣೆ ಸಾಕಲ್ಲ ಬೇರೇನೂ ಬೇಕಿಲ್ಲ
ಮನದ ಮಾತಾಡಲು
ಸವಿಯಾದ ನುಡಿಯು ಜೇನ ಹನಿಯು
ಸವಿಯಾದ ನುಡಿಯು ಜೇನ ಹನಿಯು
ಚಿನ್ನ ನೀನಾಡೋ ಮಾತೆಲ್ಲ
ನಿನ್ನಿಂದ ಬದುಕೆಲ್ಲ ಬಂಗಾರವಾಯ್ತಲ್ಲ
ಒಲಿದು ನೀ ಬರಲು
ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
ಗೆಳೆಯ ನೋಡುತ ನೋಡುತ ಆನಂದ
ಪಡೆದೆ ಈ ದಿನ ಈ ದಿನ ನಿನ್ನಿಂದ
ಎಂತ ಹಿತವಾಗಿದೆ
ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
ನಲಿದಾಡೋ ಗಿಣಿಯ ಬೀಸಿ ಬಲೆಯ
ನಲಿದಾಡೋ ಗಿಣಿಯ ಬೀಸಿ ಬಲೆಯ
ಬಳಿಗೆ ಸೆಳೆದಂತೆ ನಾ ಸೆಳೆದು
ಮಾತಾಡದಂತೇನೆ ನಾ ಪಡೆದೆ ನಿನ್ನನ್ನೇ
ಎಂತ ಭಾಗ್ಯವಿದು
ಆಹಾಹಾಹ
ಆಹಾಹಹ
ಲಲ್ಲಲ್ಲಲ್ಲ ಲಲಲ್ಲ
ಲಲಲಲಲಲಲ
ಸೊಗಸಾಗಿ ನಗುವ ನಿನ್ನ ತುಟಿಯ
ಸೊಗಸಾಗಿ ನಗುವ ನಿನ್ನ ತುಟಿಯ
ಚಂದ ಕಂಡಂದೆ ನಾ ಸೋತೆ
ಹೊಸ ಹೂವ ಕಂಡಂತೆ
ಹೊಸ ಜೀವ ಬಂದಂತೆ
ಬದುಕೇ ಹಾಡಾಯಿತು
ಚೆಲುವೆ ನನ್ನ ಚೆಲುವೆ
ನಗುವ ಹೊನ್ನ ಹೂವೆ
ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
ಏನು ಹಾಯಾಗಿದೆ
ಚೆಲುವೆ ನನ್ನ ಚೆಲುವೆ
ನಗುವ ಹೊನ್ನ ಹೂವೆ
No comments:
Post a Comment
Write Something about PK Music