Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

GUDIYA NODIRANNA DEHADA LYRICS - C ASHWATH SONGS LYRICS - ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..

Lyrics: Santa Shishunala Shareefa
Music: C. Ashwath

ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..

ಗುಡಿಯ ನೋಡಿರಿದು ಪೊಡವಿಗೆ ಒಡೆಯನು
ಗುಡಿಯ ನೋಡಿರಿದು ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ

ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..
ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..

ಮೂರು ಮೂಲೆಯ ಕಲ್ಲು, ಅದರೊಳು ಜಾರುತಿರುವ ಕಲ್ಲು

ಧೀರ ನಿರ್ಗುಣನು ಸಾರ ಸಗುಣದಲಿ……..
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ

ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..
ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..

ಆರು ಮೂರು ಕಟ್ಟಿ ಮೇಲಕೆ ಏರಿದವನು ಘಟ್ಟಿ
ಆರು ಮೂರು ಕಟ್ಟಿ ಮೇಲಕೆ ಏರಿದವನು ಘಟ್ಟಿ
ಭೇರಿ ಕಾಳಿ ಶಂಖ ಬಾರಿಸು ನಾದದಿ….
ಭೇರಿ ಕಾಳಿ ಶಂಖ ಬಾರಿಸು ನಾದದಿ
ಮೀರಿದಾನಂದ ತೋರಿ ಹೊಳೆಯುತಿಹ

ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..
ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..

ಸಾಗುತಿಹವು ದಿವಸ ಬಹುದಿನ ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ……
ಯೋಗಿ ರಾಜ ಶಿಶುನಾಳಧೀಶ
ತಾನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..
ಗುಡಿಯ ನೋಡಿರಣ್ಣಾ.. ದೇಹದ ಗುಡಿಯ ನೋಡಿರಣ್ಣಾ..

No comments:

Post a Comment

Write Something about PK Music

new1

new2

new5