Song: Ninna neeti adaava devarige
Lyrics:N.S. Lakshminarayana Bhatta
Music/ Singer: C Ashwath
Lyrics:N.S. Lakshminarayana Bhatta
Music/ Singer: C Ashwath
ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ನೀನೇ ಸರಿ ಅನ್ನಬೇಕು
ಪ್ರೀತಿಗಾಗಿಯೇ ಎಲ್ಲ ತೆತ್ತ ಜೀವವನು
ಈ ರೀತಿ ಕಾಡುವುದು ಸಾಕು
ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ಏಕಾಂತವೆನ್ನುವುದು ಎಲ್ಲಿ ನನಗೀಗ
ಏಕಾಂತವೆನ್ನುವುದು ಎಲ್ಲಿ ನನಗೀಗ
ಎದೆಯಲೇ ಮನೆಯ ಹೂಡಿರುವೆ
ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೊ
ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೊ
ನಿನದೆ ನಾಮ ಜಪ ನನಗೆ
ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ನೀನೇ ಸರಿ ಅನ್ನಬೇಕು
ಪ್ರೀತಿಗಾಗಿಯೇ ಎಲ್ಲ ತೆತ್ತ ಜೀವವನು
ಈ ರೀತಿ ಕಾಡುವುದು ಸಾಕು
ನಿನ್ನ ಕಾಣುವ ಮುನ್ನ ಏನೆಲ್ಲ ಆಸೆಗಳು
ನಿನ್ನ ಕಾಣುವ ಮುನ್ನ ಏನೆಲ್ಲ ಆಸೆಗಳು
ಏನೆಲ್ಲ ಕನಸಿತ್ತು ನನಗೆ
ಎಲ್ಲ ತೀರಿತು ನಿನ್ನ ದ್ಯಾನ ಒಂದೇ ಈಗ
ಎಲ್ಲ ತೀರಿತು ನಿನ್ನ ದ್ಯಾನ ಒಂದೇ ಈಗ
ಕಿಚ್ಚಾಗಿ ಒಗ್ಗುತಿದೆ ಒಳಗೆ
ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ನೀನೇ ಸರಿ ಅನ್ನಬೇಕು
ಪ್ರೀತಿಗಾಗಿಯೇ ಎಲ್ಲ ತೆತ್ತ ಜೀವವನು
ಈ ರೀತಿ ಕಾಡುವುದು ಸಾಕು
ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ
ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು
ಶರಣಾದ ಜೀವಕ್ಕೆ ಮರುಗಿ ಸಂತೈಸದೆ
ಶರಣಾದ ಜೀವಕ್ಕೆ ಮರುಗಿ ಸಂತೈಸದೆ
ದೂರವಾದರೆ ಹೇಗೆ ಒಲವು
ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ನೀನೇ ಸರಿ ಅನ್ನಬೇಕು
ಪ್ರೀತಿಗಾಗಿಯೇ ಎಲ್ಲ ತೆತ್ತ ಜೀವವನು
ಈ ರೀತಿ ಕಾಡುವುದು ಸಾಕು
ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ನೀನೇ ಸರಿ ಅನ್ನಬೇಕು
NINNA NEETHI LYRICS
Ninna neethi Song Lyrics in Kannada - C Ashwath
NINNA NEETHI LYRICS
Ninna neethi Song Lyrics in Kannada - C Ashwath
No comments:
Post a Comment
Write Something about PK Music