Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Nooru Devaranella nookache doora Song Lyrics - C Ashwath Songs Lyrics - ನೂರು ದೇವರನೆಲ್ಲ ನೂಕಾಚೆ ದೂರ

Song: Nooru Devaranella nookache doora
Literature - Kuvempu
Music / Singing - C Ashwath

ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ ಬಾರಾ
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ… ಬಾರಾ…
ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ

ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ… ಬಾರಾ…
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ… ಬಾರಾ…

ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ

ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿನ್ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿನ್ ನುಡಿದು
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ… ಬಾರಾ…
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ… ಬಾರಾ…

ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನೆನೆವ ತಾಯ್ಗೆ ಹಾಕು
ಹಾಕು ಹಾಕು ಹಾಕು
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ… ಬಾರಾ…
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ
ಬಾರಾ… ಬಾರಾ… ಬಾರಾ…

ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ, ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ, ನೂ ಕಾ ಚೆ ದೂರ

No comments:

Post a Comment

Write Something about PK Music

new1

new2

new5