Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

Search This Blog

Kanneera varesoke Kavacha Song Lyrics in kannada | ಕಣ್ಣೀರ ಒರಸೋಕೆ ಬೇರೆ ಯಾರು ಬೇಕು


ಚಿತ್ರ: ಕವಚ
KAVACHA MOVIE ALL SONGS LYRICS


ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು
ಬಾಳಲ್ಲಿ ಗೆಲ್ಲೋಕೆ ಭಯವು ಯಾಕೆ ಬೇಕು
ಹೃದಯ ಮೀಟೊ ಒಂದು ನಗುವೇ ಸಾಕು
ಎದೆಗುಂದದೇನೆ ಜಗವನ್ನು ಗೆಲ್ಲು
ಮನಸಂಜದಂತೆ ಬಲವಾಗಿ ನಿಲ್ಲು ಆಆ
ಕರುಣೆಯಲ್ಲಿ ಕಣಜವಾಗು ಕದನದಲ್ಲಿ ಕವಚವಾಗು
ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

ಅರ್ಜುನನ ಧ್ವಜದಲ್ಲಿರೋ ಹನುಮಂತನ ಹಾಗೆ
ಗಗನವ ಸೀಳಿ ಹಾರುವ ಶಕ್ತಿ ನಿನ್ನೊಳಗಿದೆ ತಮ್ಮ
ನಿನ್ನ ಬದುಕಿಗೆ ನೀ ಬ್ರಹ್ಮ
ಯೋಚಿಸಿದ ಹಾಗೆ ಬದುಕುಂಟು ಮುಂದೆ
ಪ್ರಾರ್ಥನೆಯ ಹಾಗೆ ಫಲವುಂಟು ಇಂದೇ
ಕತ್ತಲೆದುರು ಸೂರ್ಯನಾಗು ಕಷ್ಟದೆದುರು ಶೌರ್ಯನಾಗು

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು

ಅವಮಾನ ಅಪಮಾನ ಬಂದರೆ ಬರಲೇಳು
ಅವುಗಳೇ ನಿನ್ನ ಸಾಧನೆಗಳಿಗೆ ಮೆಟ್ಟಿಲುಗಳ ಸಾಲು
ಬರದು ಎಂದು ನಿನಗೆ ಸೋಲು
ಬಿದ್ದವನು ತಾನೇ ಎದ್ದೇಳುತಾನೆ
ದಾರಿ ಸಿಗದೋನೆ ದೊರೆಯಾಗುತಾನೆ
ಹೆದರಬೇಡಾ ಪರರಿಗಾಗಿ ಬಾಳಿ ಬದುಕು ಜನರಿಗಾಗಿ

ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು


Kanneera oresoke Lyrics
Kanneera oresoke Song Lyrics
Kavacha movie song Lyrics
Kannira oresoke Lyrics
Kannira varesoke song Lyrics

No comments:

Post a Comment

Write Something about PK Music

new1

new2

new5