ಚಿತ್ರ: ಇಂದ್ರಜಿತ್
ಬಾರೋ ಬಾರೋ ಬಾರೋ ನನ್ನ ಗೆಳೆಯ………
ಹಾಡೋ ಹಾಡೋ ಹಾಡೋ ಕ್ರಾಂತಿ
ಗೀತೆಯ……..
ಕೊಂದರಿಲ್ಲಿ…
ಸುಟ್ಟರಿಲ್ಲಿ..
ಕಾಂತಿಯ
ಜೊತೆಗೆ ನ್ಯಾಯ ನೀತಿಯನ್ನ….
ನೆಟ್ಟರಿಲ್ಲಿ…..
ರಕ್ತದಲ್ಲಿ….
ಶಾಂತಿಯ
ನುಂಗುವ ಧೂಮಕೇತುವನ್ನ……
ಹಾಡೋ ಹಾಡೋ ಹಾಡೋ ಕ್ರಾಂತಿ
ಗೀತೆಯ………
♫♫♫♫ ♫♫♫♫ ♫♫♫♫ ♫♫♫♫
ಒಲವಿನ ಕಥೆಯ ಬರೆಯುವ ಗೆಳೆಯ
ಬದುಕಿನ
ಕೊಳೆಯ ತೊಳೆಯುವ ಸಮಯ
ಹಸಿವಿನ
ಬೆಂಕಿ ಸುಡುತಿದೆ ಮನೆಯ
ಅಡುಗಿನ
ನದಿಗೆ ಇಡುವುದು ತಡೆಯ
ಮಂಚದ ಮೇಲೆ ಲಂಚದ ಒಡೆಯ
ಎದ್ದರೆ
ಮೇಲೆ ಕಡಿಯ ತಲೆಯ
ಬಡತನ ಸಾಕುವ ಕಳ್ಳ ದೊರೆಗಳ……
ಹೇಯ್ ಹೆಣ್ಣಿನ ಶೀಲವ ಮಾರೋ
ಮೃಗಗಳ..
ಬೀದಿಯೊಳಗೆ
ನೇಣು ಗಂಬಕೇರಿಸು
ಕಲಿಯ ಕುದುರೆ ಏರಿ ಬೆಳಕು
ಮೂಡಿಸು
ಕೊಂದರಿಲ್ಲಿ…
ಸುಟ್ಟರಿಲ್ಲಿ..
ಕಾಂತಿಯ
ಜೊತೆಗೆ ನ್ಯಾಯ ನೀತಿಯನ್ನ..
ಹಾಡೋ ಹಾಡೋ ಹಾಡೋ ಕ್ರಾಂತಿ
ಗೀತೆಯ…..
♫♫♫♫ ♫♫♫♫ ♫♫♫♫ ♫♫♫♫
ನಡು ಬೀದಿಯಲೆ
ಹುಲಿ ಸಿಂಹಗಳು
ನದೆದಾಡುತಿವೆ
ಬರಿ ಚಿರತೆಗಳು
ಮುಂಬಾಗಿಲಲಿ
ನರಿ ತೋಳಗಳು
ಹಿಂಬಾಗಿಲಲಿ
ಕರಿ ಗೂಬೆಗಳು
ಹೆಂಚಿನ
ಮೇಲೆ ರಣ ಹದ್ದುಗಳು
ನಡು ಮನೆಯೊಳಗೆ ಆ ವಿಷ ಸರ್ಪಗಳು
ದೇಶವ ನುಂಗಲು ಹೊಂಚು ಹಾಕಿವೆ
ಹೇಯ್ ಅರಿಯದ ಜನರನು ತಿಂದು
ತೇಗಿವೆ
ಅವರ ಹಿಡಿದು ಸಿಗಿದು ಹೂಳು
ನೆಲದಲಿ
ಮುಳ್ಳಿನಿಂದ
ಮುಳ್ಳು ತೆಗೆಯೋ ಜಗದಲಿ
ಕೊಂದರಿಲ್ಲಿ..
ಸುಟ್ಟರಿಲ್ಲಿ..
ಕಾಂತಿಯ
ಜೊತೆಗೆ ನ್ಯಾಯ ನೀತಿಯನ್ನ
ಬಾರೋ ಬಾರೋ ಬಾರೋ ನನ್ನ
ಗೆಳೆಯ…
ಹಾಡೋ ಹಾಡೋ ಹಾಡೋ ಕ್ರಾಂತಿ
ಗೀತೆಯ…
No comments:
Post a Comment
Write Something about PK Music