Literature
- Gopal Krishna Adiga
Music
/ Singing - C Ashwath
ಮೌನ, ಮೌನ ತಬ್ಬಿತು ನೆಲವ ಜುಮ್ಮೆನೆ
ಪುಳಕಗೊಂಡಿತು ಧಾರಿಣಿ
ಮೌನ ತಬ್ಬಿತು ನೆಲವ ಜುಮ್ಮೆನೆ
ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು ಸೇರಿತು
ಕೆಂಪು ಸಂಜೆಯ ಕದಪಲ್ಲಿ
ಮೌನ ತಬ್ಬಿತು ನೆಲವ ಜುಮ್ಮೆನೆ
ಪುಳಕಗೊಂಡಿತು ಧಾರಿಣಿ
ಹಕ್ಕಿಗೊರಲಿನ ಸುರತ ಗಾನಕೆ
ಬಿಗಿಯು ನಸುವೆ ಸಡಿಲಿತು
ಹಕ್ಕಿಗೊರಲಿನ ಸುರತ ಗಾನಕೆ
ಬಿಗಿಯು ನಸುವೆ ಸಡಿಲಿತು
ಬೆಚ್ಚ ಬೆಚ್ಚನೆ ಉಸಿರಿನಂದದಿ
ಗಾಳಿ ಮೆಲ್ಲನೆ ತೆವಳಿತು
ಗಾಳಿ ಮೆಲ್ಲನೆ ತೆವಳಿತು
ಬೆಚ್ಚ ಬೆಚ್ಚನೆ ಉಸಿರಿನಂದದಿ
ಗಾಳಿ ಮೆಲ್ಲನೆ ತೆವಳಿತು
ಗಾಳಿ ಮೆಲ್ಲನೆ ತೆವಳಿತು
ಮೌನ, ಮೌನ ತಬ್ಬಿತು ನೆಲವ ಜುಮ್ಮೆನೆ
ಪುಳಕಗೊಂಡಿತು ಧಾರಿಣಿ
ಇರುಳ ಸೆರಗಿನ ನೆಳಲು ಚಾಚಿತು
ಬಾನು ತೆರೆಯಿತು ಕಣ್ಣನು
ಇರುಳ ಸೆರಗಿನ ನೆಳಲು ಚಾಚಿತು
ಬಾನು ತೆರೆಯಿತು ಕಣ್ಣನು
ನೆಲವು ತಣಿಯಿತು ಬೆವರು ಹನಿಯಿತು
ಭಾಷ್ಪ ನೆನೆಸಿತು ಹುಲ್ಲನು
ನೆಲವು ತಣಿಯಿತು ಬೆವರು ಹನಿಯಿತು
ಭಾಷ್ಪ ನೆನೆಸಿತು ಹುಲ್ಲನು
ಮೌನ, ಮೌನ ತಬ್ಬಿತು ನೆಲವ ಜುಮ್ಮೆನೆ
ಪುಳಕಗೊಂಡಿತು ಧಾರಿಣಿ
ಮೌನ ಉರುಳಿತು ಹೊರಳಿತೆದ್ದಿತು
ಗಾಳಿ ಭೋರನೆ ಬೀಸಿತು
ಮೌನ ಉರುಳಿತು ಹೊರಳಿತೆದ್ದಿತು
ಗಾಳಿ ಭೋರನೆ ಬೀಸಿತು
ತೆಂಗುಗರಿಗಳ ಚಾಮರಕೆ
ಹಾಯೆಂದು ಮೌನವು ಮಲಗಿತು
ತೆಂಗುಗರಿಗಳ ಚಾಮರಕೆ
ಹಾಯೆಂದು ಮೌನವು ಮಲಗಿತು
ಹಾಯೆಂದು ಮೌನವು ಮಲಗಿತು
ಹಾಯೆಂದು ಮೌನವು ಮಲಗಿತು
No comments:
Post a Comment
Write Something about PK Music