Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

YAVUDEE PRAVAAHAVU LYRICS - C ASHWATH SONGS LYRICS - ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..

Lyrics: G.S. Shivarudrappa
Music/ Singer: C. Ashwath

ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..
ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..
ಮನೆಮನೆಗಳ ಕೊಚ್ಚಿ ಕೊರೆದು
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು..
ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..

ಗುಡಿ ಗೋಪುರ ಉರುಳುತಿವೆ
ಹಳೆಯ ಪ್ರತಿಮೆ ತೇಲುತಿವೆ
ಗುಡಿ ಗೋಪುರ ಉರುಳುತಿವೆ
ಹಳೆಯ ಪ್ರತಿಮೆ ತೇಲುತಿವೆ
ದೀಪವಾರಿ ತಂತಿ ಹರಿದು
ವಾದ್ಯವೃಂದ ನರಳುತಿದೆ
ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..

ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಮುರಿದಿವೆ
ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಮುರಿದಿವೆ
ಭಯ ಸಂಶಯ ತಲ್ಲಣಗಳ
ಕಂದರಗಳು ತೆರೆದಿವೆ
ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..

ಮುಖ ಮುಖವೂ ಮುಖವಾಡವ
ತೊಟ್ಟು ನಿಂತ ಹಾಗಿವೆ
ಮುಖ ಮುಖವೂ ಮುಖವಾಡವ
ತೊಟ್ಟು ನಿಂತ ಹಾಗಿವೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ
ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು..
ಯಾವುದೀ ಪ್ರವಾಹವು.. ಯಾವುದೀ ಪ್ರವಾಹವು..

No comments:

Post a Comment

Write Something about PK Music

new1

new2

new5