ಚಿತ್ರ: ಅಜಯ್
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಮಣಿ ಶರ್ಮ
ಏನೇ ಆಗಲಿ ನಗಬೇಕು
ಯಾಕೆ ನೀನು ಹೀಗಿರಬೇಕು
ನೋವು ನಲಿವು
ಸಮನಾಗಿರಬೇಕು……..
ಹರುಷ ಒಂದೇ ಈ ಬಾಳಿನಲಿ
ಯಾರಿಗುಂಟು ಈ ಜಗದಲ್ಲಿ
ಏನೇ ಬಂದರು
ಎದುರಿಸಬೇಕಿಲ್ಲಿ...........
ಏಳು ಬೀಳು ಇಲ್ಲಿ ಯಾರಿಗಿಲ್ಲ ಹೇಳು
ಎಲ್ಲ ಸಹಿಸಿ ಮುಂದೆ
ನಡೆಯುವುದೇ ಬಾಳು
ಅಳು ಏತಕೆ ಅಳುಕೇತಕೆ
ಒಳ್ಳೆ ಕಾಲ ಬರುವುದು ಇಂದೇ
ಹೊಸ ಬಾಳಿಗೆ ಹೊಸತನವಿದೆ
ಹೊಸ ಬೆಳಕು ಉಂಟು ಕಣ್ಮುಂದೆ
Oh my ದೇವರೇ
why don't you take it away
All of the pain in the way gal
life is full of such a
feeling and freaky gal
don't you ever let your sorrows
make you hate this world...
Never ever loose your
magic for logic gal
Life is just a say keep a
why don't you take it away
All of the pain in the way gal
life is full of such a
feeling and freaky gal
don't you ever let your sorrows
make you hate this world...
Never ever loose your
magic for logic gal
Life is just a say keep a
smiling oh ma bud
Oh you are our angel
We'll be there for u
We'll be there for u yeah
Oh you are our angel
We'll be there for u
We'll be there for u yeah
ತಂಪು ಚೆಲ್ಲುವ ಹೂವುಗಳೇ
ಇಂಪು ಚೆಲ್ಲುವ ಹಕ್ಕಿಗಳೇ
ನಗುವ ಚೆಲ್ಲಿರಿ ಇವಳ ಮನದಲ್ಲಿ………
ಮಳೆಯು ಸುರಿಸುವ ಮೋಡಗಳೆ
ಗಾಳಿ ಹರಡುವ ಗಂಧಗಳೇ
ಧೈರ್ಯ ತುಂಬಿರಿ ಇವಳ ಮನಸಲ್ಲಿ…….
ಕೊರಗಿ ಸೊರಗಿ ಮೊಗ್ಗಾಗದಿರು ಬಾಗಿ
ನಾಳೆ ನಿನದೆ ನೀ ಅರಳೆ ಹೂವಾಗಿ
ಪ್ರತಿ ಕಷ್ಟದ ಹಿಂದೆ ಸುಖವಿದೆ
ಸೋಲಲ್ಲೂ ಗೆಲುವಿದೆ ಮುಂದೆ
ಪ್ರತಿ ರಾತ್ರಿಯ ಹಿಂದೆ ಹಗಲಿದೆ
ನೋವಲ್ಲೂ ನಲಿವಿದೆ ಮುಂದೆ
Oh my ದೇವರೇ
why don't you take it away
All of the pain in the way gal
why don't you take it away
All of the pain in the way gal
ಬಾಳು ಎಂಬುದೇ ಹೋರಾಟ
ದಾರಿ ಕಾಣದ ಅಲೆದಾಟ
ನಿತ್ಯವೂ ಇಲ್ಲಿದೆ
ಸಾವಿರ ಹೊಡೆದಾಟ........
ಎಲ್ಲ ನಮ್ಮವರು ಲೋಕದಲಿ
ಯಾರು ಆಗರು ಸಮಯದಲಿ
ನಮ್ಮ ನಂಬಿಕೆ
ನಮಗಿರಬೇಕಿಲ್ಲಿ...........
ಓಡೋ ಕಾಲ ಎಂದೆಂದೂ ನಿಲ್ಲದಮ್ಮ
ನಾವು ಅದರ ಜೊತೆ
ನಡೆಯಲೇ ಬೇಕಮ್ಮಾ
ಇಂದು ಆಗದು ಮುಂದೆ ಸಾಗದು
ಅನ್ನೋ ಮಾತನೆಲ್ಲ ಮರೀಬೇಕು
ಈ ಬದುಕಲಿ ಪ್ರತಿ ಹೆಜ್ಜೆಗೂ
ಒಂದು ಭರವಸೆ ಇರಬೇಕು...
No comments:
Post a Comment
Write Something about PK Music