Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Mallige hoovagi chellitu ninna paruse Lyrics - C. Ashwath songs Lyrics - ಮಲ್ಲಿಗೆ ಹೂವಾಗಿ ಚೆಲ್ಲಿತು ನಿನ್ನ ಪರುಸೆ - Janapada Songs Lyrics

Song: Mallige hoovagi chellitu ninna paruse
Music: B.V Shrinivas
Singer: C. Ashwath

ಮಲ್ಲಿಗೆ ಹೂವಾಗಿ
ಚೆಲ್ಲಿತು ನಿನ್ನ ಪರುಸೆ
ಚೆಲ್ಲಾಟಗಾರ ಮಾದಪ್ಪ
ಓಹೊ.. ಚೆಲ್ಲಾಟಗಾರ ಮಾದಪ್ಪ
ನಿನ್ನ ಪರುಸೆ ಕಲ್ಲತ್ತಿ ಕಣಿವೆ ಇಳಿದಾವು
ಓಹೊ.. ಕಲ್ಲತ್ತಿ ಕಣಿವೆ ಇಳಿದಾವು
ಮಲ್ಲಿಗೆ ಹೂವಾಗಿ
ಚೆಲ್ಲಿತು ನಿನ್ನ ಪರುಸೆ
ಚೆಲ್ಲಾಟಗಾರ ಮಾದಪ್ಪ
ಓಹೊ.. ಚೆಲ್ಲಾಟಗಾರ ಮಾದಪ್ಪ
ನಿನ್ನ ಪರುಸೆ ಕಲ್ಲತ್ತಿ ಕಣಿವೆ ಇಳಿದಾವು
ಓಹೊ.. ಕಲ್ಲತ್ತಿ ಕಣಿವೆ ಇಳಿದಾವು

ಮಾದಪ್ಪ ಬರುವಾಗ ಮಾಳೆಲ್ಲ ಗಮ್ಮೆಂದು
ಮಾಳದಲಿ ಗರಿಕೆ ಚಿಗುರ್ಯಾವೋ
ಮಾದಪ್ಪ ಬರುವಾಗ ಮಾಳೆಲ್ಲ ಗಮ್ಮೆಂದು
ಮಾಳದಲಿ ಗರಿಕೆ ಚಿಗುರ್ಯಾವೋ
ಮಾಳದಲಿ ಗರಿಕೆ ಚಿಗುರ್ಯಾವೋ
ಮಾಯ್ಕಾರ ಮೂಡ್ಲಲ್ಲಿ ಮಳೆಯು ಸುರಿದಾವೊ
ಓಹೊ.. ಮೂಡ್ಲಲ್ಲಿ ಮಳೆಯು ಸುರಿದಾವೊ

ಮಲ್ಲಿಗೆ ಹೂವಾಗಿ
ಚೆಲ್ಲಿತು ನಿನ್ನ ಪರುಸೆ
ಚೆಲ್ಲಾಟಗಾರ ಮಾದಪ್ಪ
ಓಹೊ.. ಚೆಲ್ಲಾಟಗಾರ ಮಾದಪ್ಪ

ದಿಂಡುಗಲ್ಲಿನ ಮ್ಯಾಲೆ
ಗಂಡುಲಿಯ ಕುಳ್ಳಿರಿಸಿ
ಕೊಂಡೆಯ ಕೌದಿ ಬಿಗಿಮಾಡಿ
ದಿಂಡುಗಲ್ಲಿನ ಮ್ಯಾಲೆ
ಗಂಡುಲಿಯ ಕುಳ್ಳಿರಿಸಿ
ಕೊಂಡೆಯ ಕೌದಿ ಬಿಗಿಮಾಡಿ
ಕೊಂಡೆಯ ಕೌದಿ ಬಿಗಿಮಾಡಿ
ಮಾಯ್ಕಾರ ಗಂಡುಲಿಯ ಮ್ಯಾಲೇರಿ ಮೆರೆದಾನೋ
ಓಹೊ.. ಗಂಡುಲಿಯ ಮ್ಯಾಲೇರಿ ಮೆರೆದಾನೋ

ಮಲ್ಲಿಗೆ ಹೂವಾಗಿ
ಚೆಲ್ಲಿತು ನಿನ್ನ ಪರುಸೆ
ಚೆಲ್ಲಾಟಗಾರ ಮಾದಪ್ಪ
ಓಹೊ.. ಚೆಲ್ಲಾಟಗಾರ ಮಾದಪ್ಪ

ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪ ನಿನ್ನ ಬಳಿಗೆ ಬರುವೇವು
ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪ ನಿನ್ನ ಬಳಿಗೆ ಬರುವೇವು
ಅಪ್ಪ ನಿನ್ನ ಬಳಿಗೆ ಬರುವೇವು
ಮಾಯ್ಕಾರ ಮುತ್ತಿನ ಬಾಗಿಲು ತೆರೆದಾವು
ಓಹೋ ತುಪ್ಪದಾರತಿ ಬೆಳಗ್ಯಾವು

ಮಲ್ಲಿಗೆ ಹೂವಾಗಿ
ಚೆಲ್ಲಿತು ನಿನ್ನ ಪರುಸೆ
ಚೆಲ್ಲಾಟಗಾರ ಮಾದಪ್ಪ
ಓಹೊ.. ಚೆಲ್ಲಾಟಗಾರ ಮಾದಪ್ಪ
ನಿನ್ನ ಪರುಸೆ ಕಲ್ಲತ್ತಿ ಕಣಿವೆ ಇಳಿದಾವು
ಓಹೊ.. ಕಲ್ಲತ್ತಿ ಕಣಿವೆ ಇಳಿದಾವು
ಮಲ್ಲಿಗೆ ಹೂವಾಗಿ
ಚೆಲ್ಲಿತು ನಿನ್ನ ಪರುಸೆ
ಚೆಲ್ಲಾಟಗಾರ ಮಾದಪ್ಪ
ಓಹೊ.. ಚೆಲ್ಲಾಟಗಾರ ಮಾದಪ್ಪ
ನಿನ್ನ ಪರುಸೆ ಕಲ್ಲತ್ತಿ ಕಣಿವೆ ಇಳಿದಾವು
ಓಹೊ.. ಕಲ್ಲತ್ತಿ ಕಣಿವೆ ಇಳಿದಾವು
ಕಲ್ಲತ್ತಿ ಕಣಿವೆ ಇಳಿದಾವು
ಓಹೊ.. ಕಲ್ಲತ್ತಿ ಕಣಿವೆ ಇಳಿದಾವು

No comments:

Post a Comment

Write Something about PK Music

new1

new2

new5