Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Sigivem Kshanadali Lyrics - Bhaktha Prahlaada Lyrics - ಸಿಗಿವೆಂ ಕ್ಷಣದಲಿ ನಿನ್ನ ನಾಂ


ಚಿತ್ರ: ಭಕ್ತ ಪ್ರಹ್ಲಾದ
ಹರಿ...
ಸಿಗಿವೆಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೆಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೆಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೆಂ ಕ್ಷಣದಲಿ ನಿನ್ನ ನಾಂ

ಹಾಲ ಕಡಲ ಕ್ಷಣದಿ ಕುಡಿಯುತ
ಶೇಷನೊಡಲ ಸಿಗಿದು ಬಿಸುಡುತ
ಚಕ್ರ ಕಡಿದು ಮುರಿದು ಎಸೆಯುತ
ನಿನ್ನ ಗದೆ ಪುಡಿ ಪುಡಿ ಮಾಡಿ
ಹಾಲ ಕಡಲ ಕ್ಷಣದಿ ಕುಡಿಯುತ
ಶೇಷನೊಡಲ ಸಿಗಿದು ಬಿಸುಡುತ
ಚಕ್ರ ಕಡಿದು ಮುರಿದು ಎಸೆಯುತ
ನಿನ್ನ ಗದೆ ಪುಡಿ ಪುಡಿ ಮಾಡಿ
ಶಿವನು ಹೆದರುತಿರೆ ಬ್ರಹ್ಮ ಬೆವರುತಿರೆ
ಸುರರು ನಡುಗುತಿರೆ ನರರು ಅಳುತಲಿರೆ
ಕಣ್ಣಲಿ, ರೋಷದ, ಬೆಂಕಿಯ, ಚೆಲ್ಲಿ ಪಡಾ ಪಡಾ
ನಾನೀಗ ಸಿಗಿವೆಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೆಂ ಕ್ಷಣದಲಿ ನಿನ್ನ ನಾಂ

ಆಕಾಶ ಹೆದರಿ ಹೆದರಿ ನಡುಗಿರೆ
ಕಾರ್ಮೋಡ ಭಯದಿ ಬೆದರಿ ಚದುರಿರೆ
ಭೂಮಿ ಅಳುತ ಶರಣು ಎನುತಿರೆ
ದೇವೇಂದ್ರನೆದೆಯನು ಸೀಳಿ
ಆಕಾಶ ಹೆದರಿ ಹೆದರಿ ನಡುಗಿರೆ
ಕಾರ್ಮೋಡ ಭಯದಿ ಬೆದರಿ ಚದುರಿರೆ
ಭೂಮಿ ಅಳುತ ಶರಣು ಎನುತಿರೆ
ದೇವೇಂದ್ರನೆದೆಯನು ಸೀಳಿ
ಸ್ವರ್ಗ ನರಕಗಳ ಎಲ್ಲ ಲೋಕಗಳ
ನನ್ನ ಕಾಲಡಿಯಲಿಟ್ಟು ಆಳುತಿರೆ
ಎದುರಿಸಿ ನಿಲ್ಲುವ ವೀರರು ಯಾರು ಬಿಡು ಬಿಡು...
ನಾನೀಗ ಸಿಗಿವೆಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೆಂ ಕ್ಷಣದಲಿ ನಿನ್ನ ನಾಂ

No comments:

Post a Comment

Write Something about PK Music

new1

new2

new5