Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Ententha Ellanu Barali Lyrics - C Ashwath Songs Lyrics - Bhavageethe Lyrics - ಎಂತೆಂತ ಎಲ್ಲಾನು ಬರಲಿ

Music/Singer: C Ashwath
Lyrics: Santa Shishunala Shareefa

ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ
ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ
ಎಂತೆನೆಂಬುದ ತೋರುವ ಗುರುವ
ಎಂತೆನೆಂಬುದ ತೋರುವ ಗುರುವ
ಅಂತಃಕರಣ ತಪ್ಪದೆ ಕಾಯಲಿ
ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ

ಬಡತನವೆಂಬುದು ಕಡೆತನಕ ಇರಲಿ
ಒಡವೆ ವಸ್ತು ಕಳ್ಳರು ಹೊರಲಿ
ಬಡತನವೆಂಬುದು ಕಡೆತನಕ ಇರಲಿ
ಒಡವೆ ವಸ್ತು ಕಳ್ಳರು ಹೊರಲಿ
ನಡುವಂತ ದಾರಿ ತಿಳಿಯದೆ ತಪ್ಪಿ
ನಡುವಂತ ದಾರಿ ತಿಳಿಯದೆ ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ

ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ
ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ

ಉದ್ಯೋಗ ವ್ಯಾಪಾರ ಇಲ್ಲದಂತಾಗಲಿ
ಬುದ್ದಿ ಎಂಬುದೇ ಮಸಣಿಸಿ ಹೋಗಲಿ
ಉದ್ಯೋಗ ವ್ಯಾಪಾರ ಇಲ್ಲದಂತಾಗಲಿ
ಬುದ್ದಿ ಎಂಬುದೇ ಮಸಣಿಸಿ ಹೋಗಲಿ
ಮತ್ತು ಹಾಕಿ ಎನ್ನನು ಕೊಳ್ಳಲಿ
ಮತ್ತು ಹಾಕಿ ಎನ್ನನು ಕೊಳ್ಳಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ

ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ
ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ

ಭಾಷೆ ಪಂಥ ನಡಿದಂಗಾಗಲಿ
ಹಾಸ್ಯ ಮಾಡಿ ಜನರೆಲ್ಲ ನಗಲಿ
ಭಾಷೆ ಪಂಥ ನಡಿದಂಗಾಗಲಿ
ಹಾಸ್ಯ ಮಾಡಿ ಜನರೆಲ್ಲ ನಗಲಿ
ಶ್ರೀ ಶಿಶುನಾಳಧೀಶ ಗುರುವಿನ
ಶ್ರೀ ಶಿಶುನಾಳಧೀಶ ಗುರುವಿನ
ಲೇಸಾದ ದಯವೊಂದು ಕಡೆ ತನಕಿರಲಿ
ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ
ಎಂತೆನೆಂಬುದ ತೋರುವ ಗುರುವ
ಎಂತೆನೆಂಬುದ ತೋರುವ ಗುರುವ
ಅಂತಃಕರಣ ತಪ್ಪದೆ ಕಾಯಲಿ
ಎಂತೆಂತ ಎಲ್ಲಾನು ಬರಲಿ
ಚಿಂತೆ ಎಂಬುದು ಸಾವಿರ ಇರಲಿ

No comments:

Post a Comment

Write Something about PK Music

new1

new2

new5