ಮಲೆನಾಡ ಹೆಣ್ಣ ಮೈ ಬಣ್ಣ
ಬಲುಚೆನ್ನ, ಆ ನಡು ಸಣ್ಣ
ನಾ ಮನಸೋತೆನೆ ಚಿನ್ನ
ಮಲೆನಾಡ ಹೆಣ್ಣ ಮೈ ಬಣ್ಣ
ಬಲುಚೆನ್ನ ಆ ನಡು ಸಣ್ಣ
ಆಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ
ಬಯಲಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು
ನನ್ನ ಸರದಾಗೆ ರಸಗುಂಡು
ಮಾತು ನಿಂದು ಹುರಿದ ಅರಳು ಸಿಡಿಧ್ಹಂಗೆ
ಕಣ್ಣುಗಳು ಮಿಂಚಂಗೆ
ನಿನ್ನ ನಗೆಯಲ್ಲೇ ಸೆಳೆದ್ಯಲ್ಲೇ
ಮನದಾಗೆ ನಿಂತ್ಯಲ್ಲೇ
ನನ್ನ ಮನದಾಗೆ ನಿಂತ್ಯಲ್ಲೇ
ಮಲೆನಾಡ ಹೆಣ್ಣ ಮೈ ಬಣ್ಣ
ಬಲುಚೆನ್ನ ಆ ನಡು ಸಣ್ಣ
ಆಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ
ಕಾಡಬೇಡಿ ನೋಡಿ ಯಾರು ನನ್ನೋರು
ನನ್ನ ಹಿರಿಯೋರು
ಬಿಡಿ ನನ್ನ ಕೈಯ್ಯ ದಮ್ಮಯ್ಯ
ತುಂಟಾಟ ಸಾಕಯ್ಯ
ಈ ತುಂಟಾಟ ಸಾಕಯ್ಯ
ಬಯಲಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು
ನನ್ನ ಸರದಾಗೆ ರಸಗುಂಡು
ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ
ಅದ ನಾ ಬಲ್ಲೆ ನಾ ಬಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ
ಮಲೆನಾಡ ಹೆಣ್ಣ ಮೈ ಬಣ್ಣ
ಬಲುಚೆನ್ನ ಆ ನಡು ಸಣ್ಣ
ಆಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ
ಬಯಲಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು
ನನ್ನ ಸರದಾಗೆ ರಸಗುಂಡು
ನನ್ನ ಸರದಾಗೆ ರಸಗುಂಡು
ನನ್ನ ಸರದಾಗೆ ರಸಗುಂಡು
No comments:
Post a Comment
Write Something about PK Music