Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಎಲ್ಲಿ ಜಾರಿತೋ ಮನವು - Elli Jaaritho Manavu Lyrics - Yelli Jaritho Manavu Lyrics

Song: Yelli Jaritho Manavu Program: Apoorva Milana Singer: Apoorva Sridhar Music: Mysore Ananthaswamy Lyricist: N S Lakshminarayana Bhatta Music Label : Lahari Music

ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ…
ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ…
ಎಲ್ಲಿ ಅಲೆಯುತಿಹುದೋ ಏಕೆ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ…
ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ…

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ
ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿ ಸಾಲ
ದಾಟಿ ಬಂತು ಬೇಲಿ ಸಾಲ ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ….

ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ
ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ

ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ….

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು
ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು
ಬಂದು ಕಾಡುತಿರಲು ಎದೆಯ
ಬಂದು ಕಾಡುತಿರಲು ಎದೆಯ ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ
ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ…
ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ…
ಎಲ್ಲಿ ಜಾರಿತೋ… ಎಲ್ಲೆ ಮೀರಿತೋ… ನಿಲ್ಲದಾಯಿತೋ…

No comments:

Post a Comment

Write Something about PK Music

new1

new2

new5