Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಆಕಾಶ ಬಾಗಿದೆ - Aakasha baagide Song Lyrics in Kannada - Samyuktha Kannada Movie Lyrics in kannada

ಚಿತ್ರ: ಸಂಯುಕ್ತ

ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು

ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ ಭಾಮಿನಿ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ ಭಾಮಿನಿ
ಆಕಾಶ ಬಾಗಿದೆ
♬♬♬♬♬♬♬♬♬♬♬♬♬♬♬♬

.. .. .. ..
ತಂಗಾಳಿ ಬೀಸಿ ಬಂದು
ನಿನ್ನ ಹೂ ಮೈಯಿ ಸೋಕಿತೆ
ಅರಳಿದ ಸುಮಗಳ
ಪರಿಮಳ ಚೆಲ್ಲಾಡೀತೆ
ರೆಂಬೆ ತೂಗಿ ತೂಗಿ
ಹೊಸ ಉಲ್ಲಾಸ ತೋರುತಾ
ಹಸುರಿನಾ ಎಲೆಗಳ
ಚಾಮರ ಬೀಸಿತೇ
ಬಳ್ಳಿಲಿ ನಗುವ ಹೂವು
ಸೌಂದರ್ಯ ಕಾಣುವಾ
ಚಪಲದಿ ಇಣುಕುತಾ
ನಸು ನಾಚಿ ನೋಡಿದೆ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ ಭಾಮಿನಿ
ಆಕಾಶ ಬಾಗಿದೆ
♬♬♬♬♬♬♬♬♬♬♬♬♬♬♬♬

ಎಲ್ಲಿಂದ ತಂದ ಕಣ್ಣೋ
ಇವಳು ಎಲ್ಲಿಂದ ಬಂದ ಹೆಣ್ಣೋ
ನಡೆಯಲು ನಾಟ್ಯವು
ಮೌನವು ಸಂಗೀತವು
ಶೃಂಗಾರ ಕಾವ್ಯ ಒಂದು
ಹೊಸ ಹೆಣ್ಣಾಗಿ ಬಂದಿತೇನೋ
ಹವಳವೋ ಅಧರವೋ
ಪ್ರಣಯದ ಚೆಲ್ಲಾಟವೊ
ಬಂಗಾರದಿಂದ ತಂದ
ತನುವ ಕಾಂತಿಗೆ
ಬಯಕೆಯು ಮನಸನು
ಕೆಣಕಲು ನಾ ಸೋತೆನೇ
ಆಕಾಶ ಬಾಗಿದೆ
ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ
ಕಾಮಿನಿ ಭಾಮಿನಿ
ಆಕಾಶ ಬಾಗಿದೆ

No comments:

Post a Comment

Write Something about PK Music

new1

new2

new5