Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮಣ್ಣ ತಿಂದು ಸಿಹಿ ಹಣ್ಣ - Manna thindu Lyrics - Muktha muktha Serial Lyrics in kannada

ಸಂಗೀತ: ಸಿ ಅಶ್ವತ್ಥ್

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ...
ಬೇವ ಅಗಿವ ಸವಿ ಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ...
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ...
ಬೇವ ಅಗಿವ ಸವಿ ಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ...
♬♬♬♬♬♬♬♬♬♬♬♬♬♬♬♬
ಹಸಿರ ತೋಳಿನಲಿ ಬೆಂಕಿಯ ಕೂಸ
ಪೊರೆವುದು ತಾಯಿಯ ಹೃದಯ..

ಹಸಿರ ತೋಳಿನಲಿ ಬೆಂಕಿಯ ಕೂಸ
ಪೊರೆವುದು ತಾಯಿಯ ಹೃದಯ..
ಮರೆಯುವುದುಂಟೆ ಮರೆಯಲಿ ನಿಂತೆ
ಕಾಯುವ ಕರುಣಾಮಯಿಯ..
ಮರೆಯುವುದುಂಟೆ ಮರೆಯಲಿ ನಿಂತೆ
ಕಾಯುವ ಕರುಣಾಮಯಿಯ..
♬♬♬♬♬♬♬♬♬♬♬♬♬♬♬♬

ತನ್ನಾವರಣವೆ ಸೆರೆಮನೆಯಾದರೆ
ಜೀವಕೆ ಎಲ್ಲಿಯ ಮುಕ್ತಿ...
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
ಬಯಲೇ ಜೀವನ್ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
ಬಯಲೇ ಜೀವನ್ಮುಕ್ತಿ
♬♬♬♬♬♬♬♬♬♬♬♬♬♬♬♬
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ...
ಬೇವ ಅಗಿವ ಸವಿ ಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ...
♬♬♬♬♬♬♬♬♬♬♬♬♬♬♬♬
ಹೂ ಮೊಗವಾಡದ ಇರಿಯುವ ಮುಳ್ಳೇ
ಎಲ್ಲಿವರೆಗೆ ನಿನ್ನಾಟ
ಹೂ ಮೊಗವಾಡದ ಇರಿಯುವ ಮುಳ್ಳೇ
ಎಲ್ಲಿವರೆಗೆ ನಿನ್ನಾಟ...
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
ಕಲಿಸಿದೆ ಜೀವನ ಪಾಠ...
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
ಕಲಿಸಿದೆ ಜೀವನ ಪಾಠ...
♬♬♬♬♬♬♬♬♬♬♬♬♬♬♬♬
ಇರುಳ ವಿರುದ್ಧ ಬೆಳಕಿನ ಯುದ್ಧ
ಕೊನೆಯಿಲ್ಲದ ಕಾದಾಟ...

ತಡೆಯೆ ಇಲ್ಲದೇ ನಡೆಯಲೇ ಬೇಕು
ಸೋಲಿಲ್ಲದ ಹೋರಾಟ...
ಇರುಳ ವಿರುದ್ಧ ಬೆಳಕಿನ ಯುದ್ಧ
ಕೊನೆಯಿಲ್ಲದ ಕಾದಾಟ...
ತಡೆಯೆ ಇಲ್ಲದೇ ನಡೆಯಲೇ ಬೇಕು
ಸೋಲಿಲ್ಲದ ಹೋರಾಟ...


No comments:

Post a Comment

Write Something about PK Music

new1

new2

new5