Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಸೋಜುಗದ ಸೂಜು ಮಲ್ಲಿಗೆ - Sojugada Sooji mallige Song Lyrics in Kannada - Ananya Bhat

Singer - Ananya Bhat

ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಅಂದಾವರೇ ಮುಂದಾವರೇ
ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ
ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ತಪ್ಪಲೆ ಬೆಳಗ್ಯೂವ್ನಿ ತುಪ್ಪವ ಕಾಯ್ಸ್ಯೂವ್ನಿ
ಕಿತ್ತಾಳೆ ಹಣ್ಣ ತಂದ್ಯೂವ್ನಿ ಮಾದೇವ ನಿಮಗೆ
ಕಿತ್ತಳೆ ಹಣ್ಣ ತಂದ್ಯೂವ್ನಿ ಮಾದಪ್ಪ
ಕಿತ್ತಾಡಿ ಬರುವ ಪರಸೆಗೆ ಮಾದೇವ ನಿಮ್ಮ
ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೇ ಮಾದೇವ ನೀವೇ
ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೇ
ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ
ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ


ಇದನ್ನೂ ಓದಿ


Sojugada Sooju mallige Song Lyrics in Kannada 

No comments:

Post a Comment

Write Something about PK Music

new1

new2

new5