ಈ ಮೊದಲು ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ, ಹೆಸರು ಬದಲಾವಣೆ ಮಾಡಿಸಬೇಕೆಂದರೆ ಆಧಾರ್ ಸೆಂಟರ್ ಗೆ ಹೋಗಿ ಫಾರಂ ಭರ್ತಿ ಮಾಡಿ ಕ್ಯೂ ನಲ್ಲಿ ನಿಂತು ದಿನ ಪೂರ್ತಿ ಮಾಡಿಸಬೇಕಿತ್ತು, ಈಗ ನಿಮಗೆ ಬೇಕಾದ ಬದಲಾವಣೆಯನ್ನು ಸರಿಯಾದ ದಾಖಲೆಯನ್ನು ನೀಡಿ ನೀವೇ ನಿಮ್ಮ ಮೊಬೈಲ್ ನಲ್ಲಿ ಮಾಡಬಹುದು.
ನೀವು ನಿಮ್ಮ ಆಧಾರ್ ಕಾರ್ಡ್ನಲ್ಲಿ ವಿಳಾಸ, ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗ ಇಂತಹ ಪ್ರಮುಖ ವಿವರಗಳನ್ನು ಅಪ್ಡೇಟ್ ಮಾಡಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿಳಾಸ, ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗ ನವೀಕರಣಕ್ಕಾಗಿ ಲಿಂಕ್ ಅನ್ನು ಬಿಡುಗಡೆ ಮಾಡಿದೆ
ಆಧಾರ್ ಕಾರ್ಡ್ ನವೀಕರಣ ವಿಳಾಸ, ಹೆಸರು, ಹುಟ್ಟಿದ ದಿನಾಂಕ, ಲಿಂಗ ನೇರ ಲಿಂಕ್ ನೀವು ಈಗ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಲಿಂಗವನ್ನು ಸ್ವಯಂ ಸೇವಾ ಅಪ್ಡೇಟ್ ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬಹುದು - https://ssup.uidai.gov.in/ssup/
ಆಧಾರ್ ಕಾರ್ಡ್ ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆ OTP ಮೂಲಕ ದೃಡೀಕರಿಸಲು ಅಗತ್ಯವಿದೆ.
ಆನ್ಲೈನ್ ಪೋರ್ಟಲ್ ಮೂಲಕ ಪ್ರತಿ ಅಪ್ಡೇಟ್ ಗೆ 50 ರೂ. ಪಾವತಿಸಬೇಕಾಗುತ್ತದೆ.
ಈಗ ನೀವು ಆಧಾರ್ ಸ್ವಯಂ ಸೇವಾ ಅಪ್ಡೇಟ್ ಪೋರ್ಟಲ್ ಅಂದರೆ https://ssup.uidai.gov.in/ssup/ ಮೂಲಕ ಆನ್ಲೈನ್ನಲ್ಲಿ ನಿಮ್ಮ ಹೆಸರನ್ನು ನಿಮ್ಮ ಆಧಾರ್ನಲ್ಲಿ ಅಪ್ಡೇಟ್ ಮಾಡಬಹುದು.
ನಿಮ್ಮ ಗುರುತಿನ ಮೂಲ ಪುರಾವೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ.
ನೀವು ಈಗ ಸ್ವಯಂ ಸೇವಾ ಅಪ್ಡೇಟ್ ಪೋರ್ಟಲ್ ಮೂಲಕ ಆಧಾರ್ ನಲ್ಲಿ ನಿಮ್ಮ ಹೆಸರಿನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಬಹುದು.
ಮದುವೆಯ ನಂತರ ಹೆಸರು ಬದಲಾವಣೆ, ವಿಳಾಸ ಬದಲಾವಣೆ ಮಾಡಬಹುದು.
ಹೆಸರಿನಲ್ಲಿ ಸಣ್ಣ ಬದಲಾವಣೆಗೆ ಡಾಕ್ಯುಮೆಂಟ್ ಅಗತ್ಯವಿದೆ.
ಜನ್ಮ ದಿನಾಂಕ ನವೀಕರಣಕ್ಕಾಗಿ, ಡಾಕ್ಯುಮೆಂಟ್ ಅಗತ್ಯವಿದೆ.
ಲಿಂಗ ಬದಲಾವಣೆಗಾಗಿ ಯಾವುದೇ ಡಾಕ್ಯುಮೆಂಟ್ ಅಗತ್ಯವಿಲ್ಲ.
ವಿಳಾಸ ಬದಲಾವಣೆಗಾಗಿ ಡಾಕ್ಯುಮೆಂಟ್ ಅಗತ್ಯವಿದೆ.
ಆನ್ಲೈನ್ ಪೋರ್ಟಲ್ ಮೂಲಕ ಪ್ರತಿ ಅಪ್ಡೇಟ್ಗೆ ರೂ. 50 ವಿಧಿಸಲಾಗುತ್ತದೆ.
ಆಧಾರ್ ಡೌನ್ ಲೋಡ್ ಮಾಡುವುದು ಹೇಗೆ Click here
How to change aadhar address online
How to change mobile number in aadhar card online
How to change Name in aadhar card online
What is procedure to change Aadhar address online
Aadhar correction online
No comments:
Post a Comment
Write Something about PK Music