ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿರುವ ವಸತಿ ರಹಿತ ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ‘ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23/08/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/09/2021
ಅರ್ಜಿಯನ್ನು ಯಾರು ಸಲ್ಲಿಸಬಹುದು.?
- ಒಂದು ಕುಟುಂಬದಲ್ಲಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದು
- ಅರ್ಜಿ ಸಲ್ಲಿಸುವವರು ಕನಿಷ್ಠ 5 ವರ್ಷಗಳು ಅಥವಾ 5 ವರ್ಷಗಳ ಮೇಲ್ಪಟ್ಟು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರಬೇಕು.
- ಚುನಾವಣಾ ಆಯೋಗದಿಂದ ನೀಡಲಾಗುವ ಗುರುತಿನ ಚೀಟಿಯನ್ನು ಹೊಂದಿರಬೇಕು.
- ವಸತಿ ಹೊಂದಿರುವಂತಿಲ್ಲ, ಸರ್ಕಾರದ ಯಾವುದೇ ವಸತಿ ಯೋಜನೆಯ ಲಾಭ ಪಡೆದಿರಬಾರದು.
- ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷ ಮೀರಿಬಾರದು.
ಮೀಸಲಾತಿಯ ವಿವರ:
ವರ್ಗಗಳು |
ಮೀಸಲಾತಿ (%) |
ಪರಿಶಿಷ್ಟ
ಜಾತಿ |
30 % |
ಪರಿಶಿಷ್ಟ
ಪಂಗಡ |
10 % |
ಜನರಲ್ |
50 % |
ವಿಕಲಚೇತನರಿಗೆ |
2 % |
ಸಹಾಯಧನ:
ವರ್ಗಗಳು |
ಮೀಸಲಾತಿ (%) |
ಪರಿಶಿಷ್ಟ
ಜಾತಿ |
3.50 ಲಕ್ಷ |
ಪರಿಶಿಷ್ಟ
ಪಂಗಡ |
3.50 ಲಕ್ಷ |
ಜನರಲ್ |
46,499
ರೂ. |
ದಾಖಲೆಗಳು:
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಅಕೌಂಟ್
- ಚುನಾವಣಾ ಗುರುತಿನ ಚೀಟಿ
- ಪಡಿತರ ಚೀಟಿ
- ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 5 ವರ್ಷಗಳಿಂದ ವಾಸವಿರುವ ದೃಡೀಕರಣ ಪತ್ರ
ವಸತಿ
ಇಲಾಖೆಯಿಂದ 'ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ
ಯೋಜನೆ'ಯಡಿಯಲ್ಲಿ 1 BHK ಮನೆ/ ಫ್ಲ್ಯಾಟ್ ಗಳ
ಹಂಚಿಕೆಗಾಗಿ ಅರ್ಹ
ಫಲಾನುಭವಿಗಳಿಂದ ಅರ್ಜಿ
ಆಹ್ವಾನಿಸಲಾಗಿದೆ. ಅರ್ಹರು
ದಿನಾಂಕ
23-08-2021 ರಿಂದ
ದಿನಾಂಕ
21-09-2021 ರವರೆಗೆ
ಅರ್ಜಿ
ಸಲ್ಲಿಸಬಹುದು. ವಸತಿ
ಇಲಾಖೆಯ
ಈ
ಸದಾವಕಾಶದಿಂದ ವಂಚಿತರಾಗದಿರಲು ಸಕಾಲದಲ್ಲಿ ಅರ್ಜಿ
ಸಲ್ಲಿಸಲು ಕೋರಲಾಗಿದೆ.
"ಬಹುಮಹಡಿ ಬೆಂಗಳೂರು ವಸತಿ ಯೋಜನೆ- ಭದ್ರ
ಬದುಕಿಗೆ ಸುಭದ್ರ
ಆಸರೆ"
No comments:
Post a Comment
Write Something about PK Music