ಕೋಲುಮಂಡೆ ಜಂಗುಮಾ ದೇವರು ಗುರುವೆ
ಕ್ವಾರಣ್ಯಾಕೆ ದಯಮಾಡವ್ರೆ
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
ಕೋಲುಮಂಡೆ ಜಂಗುಮಾ ದೇವರು ಗುರುವೆ
ಕ್ವಾರುಣ್ಯಾಕೆ ದಯಮಾಡವ್ರೆ
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
ಹರನಿಗೆ ಶರಣೆಂದೆ ಗುರುವೆ ಗುರುವಿಗೆ ಶರಣೆಂದೆ
ಹರ
ಹರ ಶಿವ ಶಿವ ಶಂಕರ ನಮ್ಮ ಮಾಡೇವ್ಗೆ ಶರಣೆಂದೆ
ಕುಲದಲ್ಲಿ ಕುರುಬ ವಕ್ಕಲು ಗೌಡ
ಸ್ವ್ಯಾಮೀ ಜಾತೀಲಿ ಸೋಲುಗ ನೀಲಯ್ಯ
ನೀಲಯ್ನ ಮಡದಿ ಸಂಕಮ್ಮ
ಭೂಲೋಕದಲ್ಲಿ ಕಾಡು ಚೆಲುವೆ
ಮಡದಿ ಸಂಕಮ್ಮನ ಬಳಿಗೆ ಬತ್ತವ್ನೆ
ದೇವ
ಸೋಲುಗ ನೀಲಯ್ಯ
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
ಅಯ್ಯ ಕೋಲುಮಂಡೆ ಜಂಗುಮಾ
ಕ್ವಾರಣ್ಯಾಕೆ ದಯಮಾಡವ್ರೆ
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
ಎಲಾ
ಸಂಕ್ಕೆನ್ನೆ ನಾನು ಹೆಜ್ಜೇನು ಮಳೆ
ಹೆಜ್ಜೇನು ಬೇಟೆಗೆ ಹೋಯ್ಟಿದೀನಿ ಮಡದಿ
ಹ್ವ್ದಾವ್ದು..
ಕುಲಾದವ್ರೆಲ್ಲ ಸೇರ್ಸಿ ನನ್ನ ಕರಿತಾ ಇದಾರೆ ಮಡದಿ
ಹ್ವ್ದಪ್ಪ
ನಿನ್ನ ಒಬ್ಲುನ್ನೆ ಇಲ್ಲಿ ಬಿಟ್ಟು ಹೋಗೋದಕ್ಕೆ ನನಗೆ ಅನುಮಾನ ಮಡದಿ
ಶಿವ..
ಶಿವ..
ನೀನು ಬಲಗೈ ಮುಟ್ಟಿ ಭಾಷೆ ಕೊಟ್ಟು ನನ್ನ ಕಲಗೆಣ್ಣೆ..
ಅಯ್ಯೋ ಯಜಮಾನಾ..
ಅಂತ
ತಪ್ಪು ನಾನು ಏನು ಮಾಡಿದೆನೋ ಯಜಮಾನಾ?
ಶಿವ..
ಶಿವ..
ಅಂತ
ತಪ್ಪು ನೆಪ್ಪು ಕಂಡಾದೆ ಆದ ಪಕ್ಷದಲ್ಲಿ
ನಿನ್ನ ತಂದೆ ತಾಯಿಯ ಕರೆಸಯ್ಯ
ಅತ್ತೆ ಮಾವರ ಕರೆಸಯ್ಯ
ಅಣ್ಣಾ ತಮ್ಮಂದರ ಕರೆಸಯ್ಯ
ಅಕ್ಕ ತಂಗ್ಯಾರ ಕರೆಸಯ್ಯ
ಭಾವ
ಮೈದ್ನಾರ ಕರೆಸಯ್ಯ
ಅತ್ತೆ ನಾದ್ನೀರ ಕರೆಸಯ್ಯ
ಬಂಧು – ಬಳಗ
ಕೂರ್ಸಯ್ಯ
ಕುಲ್ದೊರ್ನೆಲ್ಲ ಸೇರ್ಸಯ್ಯ
ನ್ಯಾಯನಾದ್ರೂ ಮಾಡ್ಸಯ್ಯ ತಪ್ಪು ನೆಪ್ಪ ತೋರ್ಸಯ್ಯ
ನೀನು ಕಟ್ಟಿದ ತೆರವ ತಕ್ಕೊಂಡು ಅಲ್ಲೇ ಬಿಟ್ಟು ಬಿಡಯ್ಯ ಮಡದಿಯ
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
ಅಯ್ಯ ಕೋಲುಮಂಡೆ ಜಂಗುಮಾ ಕ್ವಾರಣ್ಯಾಕೆ ದಯಮಾಡವ್ರೆ..
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
ಎಲಾ
ಮಡದಿ ಸಂಕ್ಕೆನ್ನೆ
ಕಟ್ಟಿದ ತೆರವನ್ನು ತಕ್ಕಂಡು ಬೂಟ್ಬುದಕ್ಕೆ
ನೀನೇನು ದಾನವ, ಕಾರುವ, ಕುರಿಯ, ಕೋಳಿಯ, ಆಡು ಎಮ್ಮೆನಾ ಸಂಕೆನ್ನೆ
ನಿನ್ನ ಒಬ್ಬುಲ್ನೆ ಈ ಕಾಡು ದೋಪಿನ
ಒಂಟಿ ಸೊಪ್ಪಿನ ಗುಳ್ಲಲ್ಲಿ ಇರುವಂತಹ ವ್ಯಾಲದಲ್ಲಿ
ಕೇಳು ಕೇಳು ಸಂಕೆನ್ನೆ ಕೇಳು ಕೇಳು ಸಂಕೆನ್ನೆ
ಮುತ್ತಿನ ಸೆಟ್ಟಿ ಬರ್ತಾನೆ ಮುತ್ತು ಮುತ್ತಂತ ಸಾರ್ತನೆ
ಮುತ್ತಿನ ಸೆಟ್ಟಿ ಕರೀತೀಯ ಚಾಪೆನಾದ್ರೂ ಹಾಸ್ತೀಯ
ಮುತ್’ತುಂಬಾ ಉಂಡ್ಸಿ ಕೇಳ್ತೀಯ
ನೀನು ಅವ್ನ ನೋಡ್ತೀಯ ಅವ್ನು ನಿನ್ನ ನೋಡ್ತಾನೆ
ಅಂದ
ಚೆಂದ ನೋಡ್ತಾನೆ ದಪ್ಪ ಧುಡುವ ನೋಡ್ತಾನೆ
ಚೆಲುವ ಭಾವ ನೋಡ್ತಾನೆ
ನಿನ್ಮೇಲೆ ಕಣ್ಣು ಇತ್ತು ನಿನಗೆ ಒಲುಮೆ ಮದ್ದು ಕೊಟ್ಟು ನಿನ್ನ
ವಾಲಿಸಿ ಕೊಂಡು ಹೋಗ್ತಾನೆ
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
ಅಯ್ಯ ಕೋಲುಮಂಡೆ ಜಂಗುಮಾ ಕ್ವಾರಣ್ಯಾಕೆ ದಯಮಾಡವ್ರೆ
ಕೋಲುಮಂಡೆ ಜಂಗುಮಾ ದೇವರು ಗುರುವೆ ಕ್ವಾರಣ್ಯಾಕೆ ದಯಮಾಡವ್ರೆ
ಕ್ವಾರಣ್ಯ ನೀಡವ್ವ ಕೊಡುಗಳ್ಲ ಮಾದೇವನಿಗೆ
No comments:
Post a Comment
Write Something about PK Music