Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ವಿರಹ ಕಡಲಾಗಿದೆ - Ee Viraha Kadalaagide Song Lyrics in Kannada - Mavu Bevu Kannada Movie Lyrics - C Ashwath

ಚಿತ್ರ:ಮಾವು ಬೇವು
ಎಸ್. ಪಿ. ಬಾಲಸುಬ್ರಮಣ್ಯಂ

ಗಾಯಕರು: ಎಸ್. ಪಿ. ಬಿ
ಸಂಗೀತ: ಸಿ.ಅಶ್ವಥ್
ರಚನೆ: ಪ್ರೊ. ಆರ್. ದೊಡ್ಡರಂಗೇಗೌಡ

ವಿರಹ ಕಡಲಾಗಿದೆ
ವಿರಹ ಕಡಲಾಗಿದೆ ನೀನಿರದೆ
ಇನಿದಾದ ಸನಿಹ ಸಿಗದೆ
ಸವಿ ನೆನಪೆ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ
ವಿರಹ ಕಡಲಾಗಿದೆ
♫♫♫♫♫♫♫♫♫♫♫♫

321
ಕೂಡಿದ ಹಸಿ ಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ  ಆಸೆಯ ಬಗೆ ಕೆರಳಿ
ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿ ನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ  ಹೊನಲಾಗಿ ಹರಿದಿದೆ
ವಿರಹ ಕಡಲಾಗಿದೆ ನೀನಿರದೆ
ಇನಿದಾದ ಸನಿಹ ಸಿಗದೆ
ಸವಿ ನೆನಪೆ ಸಿಹಿಯಾಗಿದೆ
ಎಂದೆಂದು ಹಸಿರಾದ  ಹೊನಲಾಗಿ ಹರಿದಿದೆ
ವಿರಹ ಕಡಲಾಗಿದೆ...
♫♫♫♫♫♫♫♫♫♫♫♫

321
ಪ್ರೀತಿಯ ಸಿರಿ ವೀಣೆ ಮೀಟಿದೆ ಹೃದಯ
ನಿಂತಲ್ಲಿ ಕುಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖ ಭೋಗ ಬೇಡಿದೆ
ಸವಿ ನೆನಪೇ ನನ್ನ ಕಾಡಿದೆ..
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ
ವಿರಹ ಕಡಲಾಗಿದೆ ನೀನಿರದೆ
ಇನಿದಾದ ಸನಿಹ ಸಿಗದೆ
ಸವಿ ನೆನಪೆ ಸಿಹಿಯಾಗಿದೆ..
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ
ಹಸಿರಾದ ಹೊನಲಾಗಿ ಹರಿದಿದೆ

 

No comments:

Post a Comment

Write Something about PK Music

new1

new2

new5