ತಿರುಕನೊರ್ವನೂರ ಮುಂದೆ
ಮುರುಕುಧರ್ಮ ಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ
ಪುರದರಾಜ ಸತ್ತನವಗೆ ವರ ಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮ ಮಾಲೆಯಿತ್ತು ಪುರದೊಳು
ನಡೆದು ಯಾರ ಕೊರಳಿನಲ್ಲಿ ತೊಡರಿಸುವದೋ
ಅವರ ಪಟ್ಟಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೇ
ಒಡನೆ ತನ್ನ ಕೊರಳಿನಲ್ಲಿ ತೊಡರಿಸಲ್ಕೆ ಕಂಡು
ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು
ಪಟ್ಟವನು ಕತ್ತಿ ನೃಪರು ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಲ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿನಲ್ಲ ನಿಷ್ಟ ಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ
ಓಲಗದಲಿರುತ್ತಾ ತೊಡೆಯ ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ
ನೋಡಿ ಬನ್ನಿರೆನಲು ಜೀಯ ನೋಡಿ ಬಂದೆವೆನಲು
ಬೇಗ
ಮಾಡು ಮದುವೆ ಮಂಟಪದೊಳು ಸಕಲಕಾರ್ಯವ
ಗಾಢವಾಗೆ ಸಂಭ್ರಮಗಳು ಮಾಡುತಿದ್ದ ಮದುವೆಗಳನು
ಕೂಡಿದಖಿಲ ರಾಯರೆಲ್ಲ ಮೆಚ್ಚುವಂದದಿ
ಧನದಮದವು ರಾಜ್ಯಮದವು ತನುಜಮದವು ಯುವತಿಮದವು
ಜನಿತವಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು ಮನೆಯ ಮುತ್ತಿದಂತೆಯಾಗಿ
ಕನಸು ಕಾಣುತಿರ್ದು ಹೆದರಿ ಕಣ್ಣ ತೆರೆದನು
No comments:
Post a Comment
Write Something about PK Music