ಚಿತ್ರ: ಪರಪಂಚ
ಸಂಗೀತ: ವೀರ್ ಸಮರ್ಥ್
ಸಾಹಿತ್ಯ: ಯೋಗರಾಜ್ ಭಟ್
ಹುಟ್ಟಿದ ಊರನು
ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ
ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ
ಊರ ದಿಕ್ಕಿನ ಗಾಳಿ ತಂದಿದೆ
ಒಂದು ಕಾಣದ ಕೂಗನ್ನು
ತವರಿಗಿಂತ ಬೆಚ್ಚನೆ ಜಾಗ
ಹೇಳು ಎಲ್ಲಿದೆ ನಿಂಗಿನ್ನೂ
ನಿಂಗಿದೂ ಬೇಕಿತ್ತಾ ಮಗನೇ
ವಾಪಸ್ಸು ಹೊಂಟ್ಹೋಗು ಶಿವನೇ
ಬ್ಯಾಗು ಹಿಡೀ ಸೀದಾ ನಡಿ
ಬೋರ್ಡು ನೋಡಿ ಬಸ್ಸು ಹಿಡಿ
ಹುಟ್ಟಿದ ಊರನು
ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ
ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ
♫♫♫♫♫♫♫♫♫♫♫♫
ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂಗೆ
ಊರಲ್ಲೇ ನಿನ್ನ ಉಸಿರಿದೆ
ನಿನ್ನೂರ ನಡುವಿನ
ಆಲದ ಮರದಲಿ
ನೀ ಕೆತ್ತಿ ಬಂದ ಹೆಸರಿದೆ
ಕಿತ್ಹೋದ ಕಾಸಿಗೆ
ಕಿತ್ತಾಡೋ ಕೀರ್ತಿಗೆ
ಹೈವೇಲಿ ಲಾರಿ ಹಿಡಿದು ನೀ ಬಂದೆ
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ
ಸಂಕ್ರಾತಿ ಹೂವಿನಂತೆ ನೀನಾದೆ
ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ
ಮಗನಿಗೆ ನಿನ್ನ ಹೆಸರಿಟ್ಟಾಳೋ
ಈ ಬಾರಿ ಒಳ್ಳೆ ಫಸಲಂತೇ
ಅತ್ತಿಗೆ ತಿರುಗಾ ಬಸಿರಂತೇ
ನಿಮ್ ಮಾವ ಎಲೆಕ್ಷನ್ ಗೆದ್ನಂತೇ
ದೊಡ್ಡಪ್ಪ ಸಿಗರೇಟ್ ಬಿಟ್ನಂತೆ
ಅತ್ತೆಯ ಮಗಳು ಓದ್ತಾಳೋ
ಆಗಾಗ ನಿನ್ನ ನಂಬರ್ ಕೇಳ್ತಾಳೋ
ನಿಂಗೂ ಡಿಮ್ಯಾಂಡಿದೇ ಮಗನೇ
ವಾಪಸ್ಸು ಹೊಂಟ್ಹೋಗು ಶಿವನೇ
ಬ್ಯಾಗು ಹಿಡೀ ಸೀದಾ ನಡಿ
ಬೋರ್ಡು ನೋಡಿ ಬಸ್ಸು ಹಿಡಿ
ಹುಟ್ಟಿದ ಊರನು
ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ
ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ
♫♫♫♫♫♫♫♫♫♫♫♫
ಇದ್ದಕ್ಕಿದಂತೆ ಏನೇನೋ ಅನ್ನಿಸಿ
ಕಣ್ಣು ತುಂಬಿ ಕೊಳ್ಳೋದ್ಯಾಕೆ
ಅಪ್ಪ ಅಮ್ಮ ಇಬ್ರೂ
ಹತ್ರ ಕುಂತುಕೊಂಡು
ಅಳಬ್ಯಾಡ ಅಂದಂಗಾಗೊದ್ಯಾಕೆ
ದಿಕ್ಕುಗೆಟ್ಟವನು ಕಾಲಿದ್ದು ಹೆಳವ
ಎತ್ಲಾಗೆ ಹೋದರೂ ಒಂದೇ ನೀನೂ
ಎಲ್ಲಿಂದ ಬಂದೆಯೋ
ಅಲ್ಲೇ ಹುಡುಕಾಡು
ದುರ್ಬಿನು ಹಾಕಿಕೊಂಡು
ನಿನ್ನೇ
ನೀನು
ಚಡ್ಡಿ ದೋಸ್ತ್ರೆಲ್ಲಾ ನಿನ್ನಾ ಬೈತಾರೆ
ಪಕ್ಕದ ಮನೆ ಹುಡುಗಿ ಕಾಯ್ತಾಳೆ
ಕಲಿಸಿದ ಮೇಷ್ಟ್ರು ಹೋಗ್ಬಿಟ್ರೂ
ಮುತ್ತಜ್ಜನ ಮನೆ ಮಾರ್ ಬಿಟ್ರೂ
ತಂಗಿಯ ಗಂಡ ಲಾಸಾಗೋದಾ
ಅಣ್ಣಂಗೆ ಖಾಯಿಲೆ ಮೊನ್ನೆಯಿಂದಾ
ಅಪ್ಪಂಗೆ ಉಸಿರೇ ಸಾಕಾಗಿದೆ
ಅವ್ವಂಗೆ ನೆನಪೇ ನಿಂತ್ಹೋಗಿದೆ
ಕಂಡಿಸನ್ ಹಿಂಗಿದೇ ಮಗನೇ
ವಾಪಸ್ಸು ಹೊಂಟ್ಹೋಗು ಶಿವನೇ
ಬ್ಯಾಗು ಹಿಡೀ ಸೀದಾ ನಡಿ
ಕಣ್ಣೊರೆಸಿ ಬಸ್ಸು ಹಿಡಿ
ಬ್ಯಾಗು ಹಿಡೀ ಸೀದಾ ನಡಿ
ಕಣ್ಣೊರೆಸಿ ಬಸ್ಸು ಹಿಡಿ
Huttida uranu Lyrics
Huttida ooranu bittu banda mele Lyrics
No comments:
Post a Comment
Write Something about PK Music