ಚಿತ್ರ: ಹೃದಯವಂತ
ಸಂಗೀತ/
ಸಾಹಿತ್ಯ : ಹಂಸಲೇಖ
ಗಾಯನ
: ಎಸ್.ಪಿ.ಬಾಲಸುಬ್ರಮಣ್ಯಂ
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
ಈ
ಮಣ್ಣಿನಲ್ಲಿ ಈ ಮಣ್ಣಿನಲ್ಲಿ
ಈ
ಮಣ್ಣಿನಲ್ಲಿ ಚಿನ್ನ ಬೆಳೆಯುವ ಜನರೆ ನನ್ನ ದೈವ
ಈ
ದೈವಕ್ಕಾಗಿ ಜೀವ ನೀಡುವ ಭಾಗ್ಯವೇ ನನ್ನದು
ಪುಣ್ಯವೇ
ನನ್ನದು
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
ಆಳು
ಎಂದು ಆಳೆ ಅಲ್ಲ
ಆಳೊ
ಹಾಗೇ ಅವನಾಗಬೇಕಿದೆ
ಧಣಿಯು
ಎಂದೂ ದಣಿವೇ ಇಲ್ಲ
ಧಣಿಯೂ
ದುಡಿಯೋ ಆಳಾಗಬೇಕಿದೆ
ಉಳ್ಳೋರು
ಉಳುವವರನ್ನೂ ಉಳಿಸಿ ಕೊಳ್ಳೊದೇ
ಬಡವರಿಗೇ
ನಾವೂ ಮಾಡುವ ಸನ್ಮಾನ
ಒಂದೇ
ತೆನೆಯಲ್ಲಿ ಒಗ್ಗಟ್ಟಿನ ಕಾಳಂತೇ
ಸಮರಸವ
ಪಾಲಿಸೋದೇ ದೇವರ ಗುಣಗಾನ
ಜನವೇ
ಜರ್ನಾಧನ ನೀ ಕೇಳು ಅಣ್ಣಯ್ಯ
ಕಾಯಕವೇ
ಕೈಲಾಸ ನೀ ತಿಳಿಯೋ ತಮ್ಮಯ್ಯ
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
ರೈತ
ಇರದ ನಾಡೇ ಇಲ್ಲ
ರೈತ
ಬೆಳೆದ ಬೆಳೆ ತಿನ್ನದವರೇ ಇಲ್ಲ
ರೈತ
ಎಂದೂ ಸ್ವಾರ್ಥಿ ಅಲ್ಲ
ತನಗೆ
ಮಾತ್ರ ಎಂದವನು ಬೆಳೆವುದಿಲ್ಲ
ಮುಕ್ಕೋಟಿ
ದೇವತೆಗಳು ಇದ್ದರೇ ಏನಂತೇ
ಗಣಪತಿಯೇ
ಮೊದಲು ನಮಗೇ ಎಲ್ಲಾ ಪೂಜೆಗೆ
ದುಡಿಯೋ
ಕೋಟಿ ಯಂತ್ರಗಳೂ ಇದ್ದರೂ ಏನಂತೆ
ರೈತಾನೆ
ಮೊದಲ ಮಾನವ ಯಂತ್ರ ಭೂಮಿಗೆ
ಈ
ರೈತ ನಕ್ಕರೇ ನಗುವುದು ಭಾರತ
ಈ
ಭಾರತ ಆ ದಿವಸ ಲೋಕದ ಸ್ನೇಹಿತ
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
ಈ
ಮಣ್ಣಿನಲ್ಲಿ ಈ ಮಣ್ಣಿನಲ್ಲಿ
ಈ
ಮಣ್ಣಿನಲ್ಲಿ ಚಿನ್ನ ಬೆಳೆಯುವ ಜನರೆ ನನ್ನ ದೈವ
ಈ
ದೈವಕ್ಕಾಗಿ ಜೀವ ನೀಡುವ ಭಾಗ್ಯವೇ ನನ್ನದು
ಪುಣ್ಯವೇ
ನನ್ನದು
ಅನ್ನ
ನೀಡೋರೆ ನನ್ನೋರು
ನೆರಳು
ನೀಡೋರೆ ನನ್ನೋರು
No comments:
Post a Comment
Write Something about PK Music