Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಬರೆಯದ ಮೌನದ ಕವಿತೆ - Bareyada Mounada Kavithe Lyrics - Sparsha - udeep, Rekha - Hamsalekha - R N Jayagopal


Song Name - Bareya Mounada Kavite Singer - Pankaj Udas, Kavitha Krishnamurthy, Archana Udupal Starring - Sudeep, Rekha Music - Hamsalekha Lyrics - R N Jayagopal Banner - Sarovar Productions Producer - M Sanjeev Director - Sunil Kumar Desai


M : ಬರೆಯದ ಮೌನದ ಕವಿತೆ

F : ಹಾಡಾಯಿತು

M :ಎದೆಯಲಿ ನೆನಪಿನ ನೋವು

F :ಸುಖ ತಂದಿತು

M :ಬರೆಯದ ಮೌನದ ಕವಿತೆ ಹಾಡಾಯಿತು

ಎದೆಯಲಿ ನೆನಪಿನ ನೋವು ಸುಖ ತಂದಿತು

F :ಹೃದಯದಿ ಪ್ರೇಮ ತರಂಗ ನೀ ಮೀಟಿದೆ

ಬದುಕಿಗೆ ನೂತನ ಅರ್ಥ ನೀ ನೀಡಿದೆ

M :ಸುಮಧುರ ಅನುಭವ ನೂರು ನಾ ನೋಡಿದೆ

ನಡೆಯುವ ಮುಂದಿನ ದಾರಿ ಮರೆ ಎಂದಿದೆ

ನಡೆ ಎಂದಿದೆ, ಗುರಿ ತೋರಿದೆ

F : ಹೃದಯದಿ ಪ್ರೇಮ ತರಂಗ ನೀ ಮೀಟಿದೆ

ಬದುಕಿಗೆ ನೂತನ ಅರ್ಥ ನೀ ನೀಡಿದೆ

 

F : ಓ ಹೂವ ಕಂಪು ಪರರಿಗಾಗಿ ಸಕಲ ಜನ್ಮವು

ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು

M : ಓ ಕಾಲ ಬರೆದ ಹೊಸತು ಹಾಡು ಹಾಡಲಾರೆನು

ಮನದ ಪುಟದೀ ಬರೆದ ಗೀತೆ ಮರೆಯಲಾರೆನು

F :ಎಲ್ಲಿಯ ಬಂಧವು ಕಾಣೆ

ಬೆಸೆಯಿತು ಜೀವಕೆ ಜೀವ

ಅರ್ಪಣೆ ಮಾಡುವೆ ನಿನಗೆ

ನನ್ನೀ ಹೃದಯದ ಭಾವ

 

M : ಬರೆಯದ ಮೌನದ ಕವಿತೆ ಹಾಡಾಯಿತು

ಎದೆಯಲಿ ನೆನಪಿನ ನೋವು ಸುಖ ತಂದಿತು

F :ಸುಮಧುರ ಅನುಭವ ನೂರು ನಾ ನೋಡಿದೆ

ನೆಡೆಯುವ ಮುಂದಿನ ದಾರಿ ಮರೆ ಎಂದಿದೆ

ನಡೆ ಎಂದಿದೆ, ಗುರಿ ತೋರಿದೆ

 

M : ಓ ಯಾವ ಹೂವು ಯಾರ ಮುಡಿಗೊ ಅವನ ಆಟದೀ

ಚೈತ್ರ ಬಂದು ಹೋಯಿತಮ್ಮ ನನ್ನ ತೋಟದೀ

F : ಓ ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು

ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು

M :ಬಾಳಲಿ ಪಡೆದದು ಏನೋ

ಅರಿಯದೆ ಕಳೆದುದು ಏನೋ

ಕಾಣದ ಕೈಗಳ ಸ್ಪರ್ಶ

ಮುಂದೆ ತರುವುದು ಏನೋ

 

F :ಹೃದಯದಿ ಪ್ರೇಮ ತರಂಗ ನೀ ಮೀಟಿದೆ

ಬದುಕಿಗೆ ನೂತನ ಅರ್ಥ ನೀ ನೀಡಿದೆ

M :ಸುಮಧುರ ಅನುಭವ ನೂರು ನಾ ನೋಡಿದೆ

ನಡೆಯುವ ಮುಂದಿನ ದಾರಿ ಮರೆ ಎಂದಿದೆ

ನಡೆ ಎಂದಿದೆ, ಗುರಿ ತೋರಿದೆ

No comments:

Post a Comment

Write Something about PK Music

new1

new2

new5