Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಚೆಲ್ಲಿದರು ಮಲ್ಲಿಗೆಯಾ - Chellidaru Malligeya Lyrics in Kannada


Song: Chellidaro Malligeya Album/Movie: Janapada Jatre - Geetha Namana Singer: Appagere Thimmaraju & PartyWA Music Director: Y K Muddukrishna Lyricist: Traditional Music Label : Lahari Music

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

 

(ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಆಹಾ ಚೆಲ್ಲಿದರು ಮಲ್ಲಿಗೆಯ)

 

ಮಾದಪ್ಪ ಬರುವಾಗಾ ಮಾಳೆಲ್ಲ ಘಮ್ಮೆಂದಿತೊ

ಮಾದಪ್ಪ ಬರುವಾಗಾ ಮಾಳೆಲ್ಲ ಘಮ್ಮೆಂದಿತೊ

ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ


(ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಆಹಾ ಚೆಲ್ಲಿದರು ಮಲ್ಲಿಗೆಯ)

 

ದಿಂಡುಗಲ್ಲಿನ ಮ್ಯಾಲೆ ಗಂಡುಲಿಯ ಕುಳ್ಳಿರಿಸಿ

ದಿಂಡುಗಲ್ಲಿನ ಮ್ಯಾಲೆ ಗಂಡುಲಿಯ ಕುಳ್ಳಿರಿಸಿ

ಗಂಡುಲಿಯ ಕುಳ್ಳಿರಿಸಿ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಗಂಡುಲಿಯ ಕುಳ್ಳಿರಿಸಿ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

 

(ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಆಹಾ ಚೆಲ್ಲಿದರು ಮಲ್ಲಿಗೆಯ)

 

ಸಂಪಿಗೆ ಹೂವ್ನಂಗೇ... ಗುಂಪಾದೋ ನಿನ್ನ ಪರುಸೆ

ಸಂಪಿಗೆ ಹೂವ್ನಂಗೇ... ಗುಂಪಾದೋ ನಿನ್ನ ಪರುಸೆ

ಗುಂಪಾದೋ ಕೌದಳ್ಳಿ ಬಯಲಲ್ಲಿ ಮಾದಪ್ಪ

ಚೆಲ್ಲಿದರು ಮಲ್ಲಿಗೆಯ

ಗುಂಪಾದೋ ಕೌದಳ್ಳಿ ಬಯಲಲ್ಲಿ ಮಾದಪ್ಪ

ಚೆಲ್ಲಿದರು ಮಲ್ಲಿಗೆಯ

 

(ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಆಹಾ ಚೆಲ್ಲಿದರು ಮಲ್ಲಿಗೆಯ)

 

ಮಲ್ಲೆ ಹೂವಿನ ಮಂಚ ಮರುಗದ ಮೇಲುದುಪು

ಮಲ್ಲೆ ಹೂವಿನ ಮಂಚ ಮರುಗದ ಮೇಲುದುಪು

ತಾವರೆ ಹೂವ ತಲೆದಿಂಬ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯಾ

ತಾವರೆ ಹೂವ ತಲೆದಿಂಬ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯಾ

 

(ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಆಹಾ ಚೆಲ್ಲಿದರು ಮಲ್ಲಿಗೆಯ)

 

ಹೊತ್ತು ಮುಳುಗಿದರೇನೂ ಕತ್ತಲಾದರೇನು

ಹೊತ್ತು ಮುಳುಗಿದರೇನೂ ಕತ್ತಲಾದರೇನು

ಅಪ್ಪ ನಿನ್ನ ಬಳಿಗೆ ಬರುವೇವು ನಾವು

ಚೆಲ್ಲಿದರು ಮಲ್ಲಿಗೆಯಾ

ಅಪ್ಪ ನಿನ್ನ ಬಳಿಗೆ ಬರುವೇವು ನಾವು

ಚೆಲ್ಲಿದರು ಮಲ್ಲಿಗೆಯಾ

 

(ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ

ಬಾಣಾಸೂರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯ

ಆಹಾ ಚೆಲ್ಲಿದರು ಮಲ್ಲಿಗೆಯ)

 

Chellidaro Malligeya Lyrics

No comments:

Post a Comment

Write Something about PK Music

new1

new2

new5