Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಇವಳೇ ಅವಳು - Ivale Avalu Lyrics - Sparsha - Sudeep - Hamsalekha K Kalyan


Song Name - Ivalu Avalu Singer - Hariharan Starring - Sudeep, Rekha Music - Hamsalekha Lyrics - K Kalyan Banner - Sarovar Productions Producer - M Sanjeev Director - Sunil Kumar Desai


ಇವಳೇ ಅವಳು ಕನಸಲಿ ಬಂದವಳು

ಅವಳೇ ಇವಳು ಮನದಲಿ ನಿಂದವಳು

ಚೆಲುವೆ ಅಂದ ಸೆಳೆದ ವೇಳೆ

ನನ್ನ ಹೃದಯ ಪುಟದ ಮೇಲೆ

ಕವಿತೆ ಬರೆದವಳು

 

ಇವಳೇ ಅವಳು ಕನಸಲಿ ಬಂದವಳು

ಅವಳೇ ಇವಳು ಮನದಲಿ ನಿಂದವಳು

 

ಮೆಲ್ಲ ಮೆಲ್ಲ ನಡೆಯಲು ನೀ

ನವಿಲು ನಾಚಿ ನೋಡುತಿದೆ

ಚೆಲ್ಲಿದಂತೆ ಚೆಲುವನು ನೀ

ಸುಮವು ಸೆಳೆದು ಸವಿಯುತಿದೆ

ನಿನ್ನ ನೋಡಿ ಕಲಿಯಲಿ ಲತೆ ಬಿಂಕ‌

ನಾಚಿ ನಗಲು ಅಲೆ ಅಲೆ ಸಂಗೀತ

ನಿನ್ನ ಅಂದ ಗಂಧದಿಂದ

ಭ್ರಮಿಸಿ ಬಂದ ಭ್ರಮರವೊಂದು

ಮಧುವ ಅರಸುತಿದೆ

 

ಇವಳೇ ಅವಳು ಕನಸಲಿ ಬಂದವಳು

ಅವಳೇ ಇವಳು ಮನದಲಿ ನಿಂದವಳು

 

ಸುತ್ತಮುತ್ತ ಸುಳಿಯಲು ನೀ

ನಿನ್ನ ಸುತ್ತ ನಾ ಇರುವೇ

ನನ್ನ ಪುಟ್ಟ ಆಸೆಗೆ ನೀ

ಉಸಿರು ತುಂಬಿ ಬೆಳೆಸಿರುವೆ

ನೀನೆ ನನ್ನ ತನುಮನ ಮಿಡಿದವಳು

ನೀನೆ ನನ್ನ ಅನುದಿನ ಸೆಳೆದವಳು

ಇಂದು ಮುಂದು ಎಂದು ಬಂದು

ಹೃದಯ ತುಂಬ ತುಂಬಲೆಂದು

ಪ್ರೇಮ ತಂದವಳು

 

ಇವಳೇ ಅವಳು ಕನಸಲಿ ಬಂದವಳು

ಅವಳೇ ಇವಳು ಮನದಲಿ ನಿಂದವಳು

 

No comments:

Post a Comment

Write Something about PK Music

new1

new2

new5