Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನಮ್ಮ ಮನೆಯಲಿ - Namma Maneyali Dinavu Lyrics in Kannada - Yajamana Kannada Movie - Vishnuvardhan

ಚಿತ್ರ:ಯಜಮಾನ

ಸಂಗೀತ: ರಾಜೇಶ್ ರಾಮನಾಥ್

ಗಾಯಕರು:ಎಸ್.ಪಿ.ಬಿ, ರಾಜೇಶ್ ಕೃಷ್ಣನ್. ಕೆ.ಎಸ್.ಚಿತ್ರಾ

 

ನಮ್ಮ ಮನೆಯಲಿ

ದಿನವೂ ಮಿರುಗೊ ಚೈತ್ರವೇ

ಬೆಳದಿಂಗಳ ಈ ಪ್ರೀತಿ

ಕರಗಲು ಸಾಧ್ಯವೇ

ನಮ್ಮ ಮನೆಯಲಿ

ದಿನವೂ ಮಿರುಗೊ ಚೈತ್ರವೇ

ಬೆಳದಿಂಗಳ ಈ ಪ್ರೀತಿ

ಕರಗಲು ಸಾಧ್ಯವೇ

ಹೆಜ್ಜೇನಿನ ಸವಿ ಗೂಡಿದು

ಇಲ್ಲಿ ಪ್ರೀತಿಯೆ ಪರಮಾನ್ನ

ಪ್ರೀತಿಯೆ ಯಜಮಾನ

ನಮ್ಮ ಮನೆಯಲಿ

ದಿನವೂ ಮಿರುಗೊ ಚೈತ್ರವೇ

ಬೆಳದಿಂಗಳ ಈ ಪ್ರೀತಿ

ಕರಗಲು ಸಾಧ್ಯವೇ

♬♬♬♬♬♬♬♬♬♬♬♬♬♬♬

ಹಾಡೊ ಚಿಲಿಪಿಲಿ ಹಕ್ಕಿಗಳೆ

ಪ್ರೀತಿಯ ಭಾಷೆ ಕೇಳಿರೀ

ಕಣ್ಣಿನಂತ ಅಣ್ಣನು

ತಾಯಿಯಾದನು ನೋಡಿರಿ

ಶಿಲುಬೆಯನೇ ಏರಿದರೂ

ನಗುವಿನ ಒಲುಮೆ ತುಂಬಿದೆ

ಹಾರಾಡೊ ಮನಸಿಗೇ

ಆಕಾಶವೆ ನೀನಾದೆ

ಈ ಕಣ್ಗಳೆ ಕೊಡೆಯಾಗಲಿ

ಕಣ್ಣಿನ ಹನಿಯಲ್ಲೇ ಹೃದಯಕೆ ಹೂಮಳೆ

ನಮ್ಮ ಮನೆಯಲಿ

ದಿನವೂ ಮಿರುಗೊ ಚೈತ್ರವೇ

ಬೆಳದಿಂಗಳ ಈ ಪ್ರೀತಿ

ಕರಗಲು ಸಾಧ್ಯವೇ

♬♬♬♬♬♬♬♬♬♬♬♬♬♬♬

ನಮ್ಮ ಬಂಧ ಅನುಬಂಧ

ಸ್ವರ್ಗವೆ ನಾಚುವ ಹಾಗಿದೆ

ಇಲ್ಲಿ ಮೊಗ್ಗು ಅರಳಿದರೆ

ಹೂವಿಗೆ ಸಾವಿರ ವರ್ಷವೆ

ಕಣ್ಣೆರಡು ಇರಬಹುದು

ನೋಟಗಳೊಂದೆ ಅಲ್ಲವೇ

ರೂಪಗಳು ಎರಡೆರಡು

ಹೃದಯಾ ಒಂದೇ ಅಲ್ಲವೇ

ಈ ಜೀವನ ಸಂಜೀವಿನಿ

ಇದು ಅಣ್ಣನಾಶಯ

ನೀ ಹೇಳು ಶುಭಾಶಯ

ನಮ್ಮ ಮನೆಯಲಿ

ದಿನವೂ ಮಿರುಗೊ ಚೈತ್ರವೇ

ಬೆಳದಿಂಗಳ ಈ ಪ್ರೀತಿ

ಕರಗಲು ಸಾಧ್ಯವೇ

 

ಹೆಜ್ಜೇನಿನ ಸವಿ ಗೂಡಿದು

ಇಲ್ಲಿ ಪ್ರೀತಿಯೆ ಪರಮಾನ್ನ

ಪ್ರೀತಿಯೆ ಯಜಮಾನ

ನಮ್ಮ ಮನೆಯಲಿ

ದಿನವೂ ಮಿರುಗೊ ಚೈತ್ರವೇ

ಬೆಳದಿಂಗಳ ಈ ಪ್ರೀತಿ

ಕರಗಲು ಸಾಧ್ಯವೇ

No comments:

Post a Comment

Write Something about PK Music

new1

new2

new5