ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ "ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ದಿ ನಿಗಮ " ವನ್ನು 1975ನೇ ಸಾಲಿನಲ್ಲಿ ಸ್ಥಾಪಿಸಲಾಯಿತು.ನಿಗಮವು 1956ರ ಕಂಪನಿ ಕಾಯ್ದೆಯಡಿ ಸ್ಥಾಪಿಸಲಾಯಿತು.ನಂತರ ನಿಗಮವನ್ನು 13.10.2005ರಲ್ಲಿ "ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ" ಎಂದು ಮರು ನಾಮಕರಣ ಮಾಡಲಾಯಿತು.
ಡಾ: ಬಿ. ಆರ್. ಅಂಬೇಡ್ಕರ್
ಅಭಿವೃದ್ದಿ ನಿಗಮದ ವತಿಯಿಂದ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ
ಸಾಕಷ್ಟು ಜೋಜನೆಗಳನ್ನು ರೂಪಿಸಿದೆ ಯಾವುವೆಂದರೆ.
- ·
ಸ್ವಯಂ ಉದ್ಯೋಗ - ಉದ್ಯಮಶೀಲತಾ ಯೋಜನೆ
- ·
ಭೂ ಒಡೆತನ ಯೋಜನೆ
- ·
ಗಂಗಾ ಕಲ್ಯಾಣ ಯೋಜನೆ
- ·
ಮೈಕ್ರೋ ಕ್ರೆಡಿಟ್ - ಪ್ರೇರಣಾ ಯೋಜನೆ
- ·
ಐರಾವತ ಯೋಜನೆ
- ·
ಸಮೃದ್ಧಿ ಯೋಜನೆ
- ·
ಉನ್ನತಿ ಯೋಜನೆ
ಸ್ವಯಂ ಉದ್ಯೋಗ
- ಉದ್ಯಮಶೀಲತಾ ಯೋಜನೆ
ಸ್ವಯಂ ಉದ್ಯೋಗ (ನೇರಸಾಲ) ಯೋಜನೆ
ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರು ಸಣ್ಣಕೈಗಾರಿಗೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು.
ಈ ಯೋಜನೆಯಡಿ ಮೂರು ಹಂತದ ಘಟಕ ವೆಚ್ಚವನ್ನು ಆಧರಿಸಿ ಸಹಾಯಧನವನ್ನು
ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆಯಡಿ ಪರಿಶಿಷ್ಟ ಜಾತಿ ಯುವಕ ಯುವತಿಯರಿಗೆ
ಹಣ್ಣು ಮತ್ತು ತರಕಾರಿಗಳನ್ನು ತಳ್ಳುವ ಗಾಡಿಯ ಮೂಲಕ ಮಾರಾಟ ಮಾಡಲು ಘಟಕ ವೆಚ್ಚ ರೂ.0.50 ಲಕ್ಷಗಳಲ್ಲಿ
ಸಾಲ ಸೌಲಭ್ಯ ಕಲ್ಪಿಸಲಾಗುವುದು.
ಘಟಕ ವೆಚ್ಚದ ಪೈಕಿ ರೂ. 25000/- ಸಹಾಯಧನ ಹಾಗೂ ರೂ. 25000/- ಸಾಲ ಮೊತ್ತವಾಗಿರುತ್ತದೆ.
Website
: http://adcl.karnataka.gov.in
ಅರ್ಜಿ ಸಲ್ಲಿಸಲು
ಇಲ್ಲಿ ಕ್ಲಿಕ್ ಮಾಡಿ
Direct Link : Apply Here
ಸ್ವಯಂ ಉದ್ಯೋಗ - ಉದ್ಯಮಶೀಲತಾ ಯೋಜನೆ (ಬ್ಯಾಂಕಗಳ ಸಹಯೋಗದಲ್ಲಿ)
ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ನಗರ ಪ್ರದೇಶದಲ್ಲಿ ಹಾಪ್ಕಾಮ್ಸ್ ಮಾದರಿಯಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಮಳಿಗೆಗಳನ್ನು ಸ್ಥಾಪಿಸಲು ಮತ್ತು ಇತರೆ ಸ್ವಯಂ ಉದ್ಯೋಗ ಘಟಕಗಳ ಉದ್ದೇಶಕ್ಕೆ ಘಟಕ ವೆಚ್ಚದ ಶೇ.70ರಷ್ಟು ಅಥವಾ ಗರಿಷ್ಠ ಮಿತಿ ರೂ.1.00 ಲಕ್ಷದವರೆಗೆ ಸಹಾಯಧನ ಉಳಿದ ಮೊತ್ತ ಬ್ಯಾಂಕ್ ಸಾಲ.
Website
: http://adcl.karnataka.gov.in
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Direct Link : Apply here
ಭೂ ಒಡೆತನ ಯೋಜನೆ
ಭೂ-ಒಡೆತನ ಯೋಜನೆಯು ನಿಗಮದ ಒಂದು ಪ್ರತಿಷ್ಟಿತ ಯೋಜನೆಯಾಗಿದ್ದು, ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಸೌಲಭ್ಯವನ್ನು ನೀಡಲಾಗುತ್ತಿದೆ.
ಸರ್ಕಾರದ ಆದೇಶ ಸಂಖ್ಯೆ: ಸಕಇ 148 ಎಸ್ ಡಿಸಿ 2017, ಬೆಂಗಳೂರು ದಿನಾಂಕ: 20.04.2017ರಂತೆ 26 ಜಿಲ್ಲೆಗಳಿಗೆ ಘಟಕ ವೆಚ್ಚ ಗರಿಷ್ಟ ರೂ. 15.00 ಲಕ್ಷ ಇದ್ದು, ಉಳಿದ 04 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ) ಸರ್ಕಾರದ ಆದೇಶ ಸಂಖ್ಯೆ: ಸಕಇ:137:ಎಸ್ ಡಿಸಿ:2018, ಬೆಂಗಳೂರು ದಿನಾಂಕ: 12.09.2018ರಂತೆ ಘಟಕ ವೆಚ್ಚ ರೂ.20.00 ಲಕ್ಷಗಳಿದ್ದು, ಘಟಕ ವೆಚ್ಚದಲ್ಲಿ ಶೇ.50 ಭಾಗ ಸಹಾಯಧನ ಹಾಗೂ ಶೇ.50 ಭಾಗ ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು.
ಸದರಿ ಘಟಕ ವೆಚ್ಚದ ಮಿತಿಯಲ್ಲಿ ಕನಿಷ್ಠ 2.00 ಎಕರೆ ಖುಷ್ಕಿ ಅಥವಾ ಕನಿಷ್ಠ 1.00 ಎಕರೆ ತರಿ ಅಥವಾ ½ ಎಕರೆ (20 ಗುಂಟೆ) ಕಡಿಮೆಯಿಲ್ಲದಂತೆ ಭಾಗಾಯ್ತು ಜಮೀನನ್ನು ಖರೀದಿಸಿ ಕೊಡಲಾಗುವುದು.
ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ.ಮೀ ವ್ಯಾಪ್ತಿಯೊಳಗೆ ಜಮೀನನ್ನು ಫಲಾನುಭವಿಗೆ ಖರೀದಿಸಿ ಕೊಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ದರ ನಿಗದಿಪಡಿಸುತ್ತದೆ.
ಭೂ ಒಡೆತನ ಯೋಜನೆಯಡಿ ಅವಧಿಸಾಲವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ದಿ ನಿಗಮದಿಂದ ಮತ್ತು ಸಹಾಯಧನವನ್ನು ವಿಶೇಷ ಕೇಂದ್ರಿಯ ನೆರವು ಯೋಜನೆ ಅನುದಾನ ದಿಂದ ಭರಿಸಲಾಗುತ್ತಿದೆ. ಈ ಯೋಜನೆಯಡಿ ಫಲಾಪೇಕ್ಷಿಗಳಿಗೆ ಸೌಲಭ್ಯ ಕಲ್ಪಿಸಲು ವಿಧಾನಸಭಾ ಕ್ಷೇತ್ರವಾರು ಪರಿಶಿಷ್ಟ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಮತ್ತು ಹಿಂದಿನ ವರ್ಷಗಳಲ್ಲಿ ಹೆಚ್ಚಿನ ಪ್ರಸ್ತಾವನೆಗಳು ಬಂದಿರುವ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾವಾರು ಗುರಿಯನ್ನು ನಿಗದಿಪಡಿಸಲಾಗಿದೆ.
Website
: http://adcl.karnataka.gov.in
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Direct
Link : Apply here
ಗಂಗಾ ಕಲ್ಯಾಣ ಯೋಜನೆ
ಸಾಮೂಹಿಕ ನೀರಾವರಿ/ಏತ
ನೀರಾವರಿ ಯೋಜನೆ:
ನದಿ ಮತ್ತು ನೈಸರ್ಗಿಕ ಹಳ್ಳಗಳ ಅಕ್ಕಪಕ್ಕದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳನ್ನು ಗುರುತಿಸಿ 8 ರಿಂದ 15 ಎಕರೆ ಹೊಂದಿರುವ ಗುಂಪು ಜಮೀನಿಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಪುರ್ಣ ಸಹಾಯಧನದೊಂದಿಗೆ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗುವುದು. 8 ಎಕರೆ ಘಟಕಕ್ಕೆ ರೂ.2.53ಲಕ್ಷ ಹಾಗೂ 15 ಎಕರೆ ಘಟಕಕ್ಕೆ ರೂ.3.59ಲಕ್ಷ ಘಟಕ ವೆಚ್ಚ ನಿಗದಿಪಡಿಸಲಾಗಿದೆ.
Website
: http://adcl.karnataka.gov.in
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Direct Link : Apply online
ವೈಯಕ್ತಿಕ
ನೀರಾವರಿ ಕೊಳವೆಬಾವಿ ಯೋಜನೆ:
ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಯನ್ನು 1984ರಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ 1½ ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಲೆನಾಡು ಪ್ರದೇಶಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ 1.00 ಎಕರೆ ಜಮೀನು ಹೊಂದಿರುವವರಿಗೂ ಸಹ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.
ಈ ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು(ಗ್ರಾ), ಬೆಂಗಳೂರು(ನಗರ), ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕೆಳಗೆ ಕುಸಿದಿರುವುದರಿಂದ ಈ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.4.50 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರಲ್ಲಿ ರೂ.4.00 ಲಕ್ಷ ಸಹಾಯಧನವಿದ್ದು, ಉಳಿದ ರೂ.50,000/- ಅವಧಿಸಾಲವಾಗಿರುತ್ತದೆ. ಇತರೆ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.3.50 ಲಕ್ಷ ನಿಗದಿಪಡಿಸಿದ್ದು, ಇದರಲ್ಲಿ ರೂ.3.00 ಲಕ್ಷ ಸಹಾಯಧನ ಮತ್ತು ರೂ.0.50 ಲಕ್ಷ ಅವಧಿಸಾಲವಾಗಿರುತ್ತದೆ. ಘಟಕ ವೆಚ್ಚದ ಪೈಕಿ ವಿದ್ಯುದ್ದೀಕರಣಕ್ಕೆ ಘಟಕ ವೆಚ್ಚದ ಸಹಾಯಧನದ ಮಿತಿಯಲ್ಲಿ ಪ್ರತಿ ಕೊಳವೆಬಾವಿಗೆ ರೂ.50,000/-ಗಳನ್ನು ಸಂಬಂಧಿಸಿದ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು.
Website
: http://adcl.karnataka.gov.in
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Direct
Link : Apply online
ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ:
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರದ ಉದ್ದೇಶಕ್ಕಾಗಿ “ಪ್ರೇರಣಾ ಯೋಜನೆ” ಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ ನಿರುದ್ಯೋಗಿ ಮಹಿಳೆಯರಿಗೆ ಗುಂಪು ಚಟುವಟಿಗಳ ಮೂಲಕ ಉತ್ಪಾದನಾ ಚಟುವಟಿಗಳನ್ನು ಆರಂಭಿಸಿ ಲಾಭಗಳಿಸಲು ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದಿಮದ ಸಹಾಯಧನ ಮತ್ತು ಸಾಲು ನೀಡಲು ಅವಕಾಶ ಮಾಡಿಕೊಡಲಾಗುತ್ತದೆ.
ಆಯ್ಕೆಯಾದ ಕನಷ್ಠ 10 ಮಹಿಳೆಯರ ಸ್ವಸಹಾಯ ಗುಂಪನ್ನು ರಚಿಸುವುದು/ಹಾಲಿ ಅಸ್ಥಿತ್ವದಲ್ಲಿರುವ ಮಹಿಳಾ ಸ್ವ-ಸಹಾಯ ಗುಂಪಿಗೆ ಆರ್ಥಿಕ ಬೆಂಬಲವನ್ನು ನೀಡಲಾಗುವುದು.
ಜಂಟಿ ಖಾತೆಯನ್ನು ಆರಂಭಿಸಿ ಉತ್ತಮ ಆದಾಯಗಳಿಸುವ ಉತ್ಪಾದನಾ / ಸೇವಾ ಘಟಕ ಆರಂಭಿಸಲು ರೂ. 2.50 ಲಕ್ಷ ಹಣವನ್ನು ನಿಗಮ ಭರಿಸುತ್ತದೆ. (ರೂ. 15,000/- ಸಹಾಯಧನ ಮತ್ತು ರೂ. 10,000/- ಬೀಜಧನ ಸಾಲ).
ವ್ಯಾಪಾರ/ ಉತ್ಪಾದನೆ/ ಸೇವಾ ಚಟುವಟಿಗಳಲ್ಲಿಗಳಿಸುವ ಆದಾಯವನ್ನು ಸಮಾನಾಗಿ ಹಂಚಿಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವುದು ಈ ಯೋಜನೆಯ ಮೂಲ ಉದ್ದೇಶವಾಗಿರುತ್ತದೆ.
Website
: http://adcl.karnataka.gov.in
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Direct
Link : Apply Online
ಐರಾವತ ಯೋಜನೆ
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಲಘು ವಾಹನ ಚಾಲನಾ ಪರವಾನಗಿ ಹೊಂದಿರುವ ಪರಿಶಿಷ್ಟ ಜಾತಿಯ ನಿರುದ್ಯೋಗಿ ವಿಧ್ಯಾವಂತ ಯುವಕ / ಯುವತಿಯರಿಗೆ ಪ್ರವಾಸಿ ಟ್ಯಾಕ್ಸಿಗಳ ಮಾಲೀಕರನ್ನಾಗಿ ಮಾಡಿ “ಓಲಾ” / “ಉಬರ್” / “ಮೇರು” ಸಂಸ್ಥೆಗಳ ಸಹಯೋಗದಲ್ಲಿ ಅತಿ ಹೆಚ್ಚು ಆದಾಯ ಪಡೆಯುವ “ಐರಾವತ ಯೋಜನೆ” ಅನುಷ್ಟಾನಗೊಳಿಸಲು ಉದ್ದೇಶಿಸಿದೆ. ಕರ್ನಾಟಕ ರಾಜ್ಯ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರ ತಾಣವಾಗಿದ್ದು, ಈ ಯೋಜನೆಗೆ ಹೆಚ್ಚನ ಬೇಡಿಕೆ ಇರುತ್ತದೆ.
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಯೋಜನೆಗೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು. ಉಳಿದ ಭಾಗ ಬ್ಯಾಂಕ್/ಹಣಕಾಸು ಸಂಸ್ಥೆ/ಫಲಾನುಭವಿಯ ವಂತಿಕೆಯಿಂದ ಭರಿಸಿ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು.
ಆಯ್ಕೆಯಾದ ಫಲಾನುಭವಿಗಳಿದೆ “ಓಲಾ”/”ಉಬರ್”/”ಮೇರು” ಸಂಸ್ಥೆಗಳೊಂದಿಗೆ ಟೈ-ಅಪ್ ಮಾಡಿಕೊಂಡು ಬೇಡಿಕೆ ಇರುವ ಮುಖ್ಯ ನಗರ ಪ್ರದೇಶಗಳಾದ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಇನ್ನಿತರೇ ಜಿಲ್ಲಾ ಕೇಂದ್ರಗಳಲ್ಲಿ ವಾಹನ ಚಾಲನೆ ಮಾಡಲು ವ್ಯವಸ್ಥೆ ಮಾಡಿ, ಯೋಜನೆಯನ್ನು ರೂಪಿಸಾಗಿದೆ.
Website
: http://adcl.karnataka.gov.in
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಮೃದ್ಧಿ ಯೋಜನೆ
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಗ್ರಾಮೀಣ/ನಗರ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರನ್ನು ಉದ್ಯಮಶೀಲರನ್ನಾಗಿಸಲು “ಸಮೃದ್ಧಿ ಯೋಜನೆ” ಅನುಷ್ಟಾನಗೊಳಿಸಲು ಉದ್ದೇಶಿಸಿದೆ.
ಸದರಿ ಯೋಜನೆಯಡಿ ಪರಿಶಿಷ್ಟ ಜಾತಿ ನಿರುದ್ಯೋಗಿಗಳಿಗೆ ವಿವಿಧ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಹಾಗೂ ಲಾಭದಾಯಕವಾಗಿ ನಡೆಸಲು ಅಗತ್ಯವಾದ ಉದ್ಯಮಶೀಲತಾ ತರಬೇತಿ/ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಘಟಕಗಳನ್ನು ಸೃಷ್ಟಿಸಲು ವ್ಯವಸ್ಥೆ ಮಾಡಲಾಗುವುದು.
ಸದರಿ ಯೋಜನೆಯಡಿ ವಿವಿಧ ಉದ್ದೇಶಗಳಡಿ ಯೋಜನೆಗಳನ್ನು ರೂಪಿಸಲಾಗಿದೆ.
ಉತ್ತಮ ಮಾರುಕಟ್ಟೆ ಹೊಂದಿರುವ ಸರ್ಕಾರಿ ಮತ್ತು ಖಾಸಗಿ ಬ್ರಾಂಡೆಡ್ ಸಂಸ್ಥೆಗಳ ಸಹಯೋಗದಲ್ಲಿ ಫ್ರಾಂಚೈಸಿ/ಡೀಲರ್ ಶಿಪ್ ವ್ಯವಸ್ಥೆಯೊಂದಿಗೆ ರಿಟೈಲ್ ವ್ಯಾಪಾರಿ ಮಳಿಗೆಗಳನ್ನು ಆರಂಭಿಸಲು ಅಗತ್ಯವಾದ ತಾಂತ್ರಿಕ ಬೆಂಬಲ ಹಾಗೂ ಆರ್ಥಿಕ ಬೆಂಬಲ ನೀಡಿ ಯಶ್ವಸಿ ಉದ್ದಿಮೆದಾರರನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಈಗಾಗಲೇ ಸರ್ಕಾರಿ ಮತ್ತು ಬ್ರಾಂಡೆಡ್ ಸಂಸ್ಥೆಗಳ ಜೊತೆ ಸರ್ಕಾರವು ಒಡಂಬಡಿಕೆ(ಎಂಓಯು) ಮಾಡಿಕೊಳ್ಳಲು ವ್ಯವಸ್ಥೆಯಾಗಿರುತ್ತದೆ.
ಆಯ್ಕೆಯಾದ ಪ್ರತೀ ಫಲಾನುಭವಿಗೆ ಗರಿಷ್ಠ ರೂ. 10.00 ಲಕ್ಷಗಳವರೆಗೆ ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ.
Website
: http://adcl.karnataka.gov.in
ಉನ್ನತಿ ಯೋಜನೆ
(ಕರ್ನಾಟಕ ಸರ್ಕಾರದ ಐ.ಟಿ-ಬಿ.ಟಿ ಇಲಾಖೆ ಸಹಯೋಗದಲ್ಲಿ ತಂತ್ರಜ್ಞಾನದ ಬಳಕೆ ಮಾಡಿ ಹೊಸ ಚಿಂತನೆ ಮತ್ತು ಆವಿಷ್ಕಾರಗಳ ವಿಶಿಷ್ಟ ನೂತನ ಉದ್ಯಮ ಪ್ರಾರಂಭಿಸಿರುವ ಅರ್ಹ ಪ್ರತಿಭಾವಂತರಿಗೆ ಅನುದಾನ ನೀಡುವ ಯೋಜನೆ)
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಅಭಿವೃದ್ಧಿ ನಿಗಮಗಳ ಪರವಾಗಿ ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು 2018-19ನೇ ಸಾಲಿನಲ್ಲಿ “ಉನ್ನತಿ ಯೋಜನೆ” ಯನ್ನು ಅನುಷ್ಟಾನಗೊಳಿಸುತ್ತಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಪ್ರತಿಭಾವಂತ ಯುವಕ/ಯುವತಿಯರು ಸ್ಟಾರ್ಟ್ಅಪ್ ಉದ್ದಿಮೆಗಳನ್ನು ಆರಂಭಿಸಿದ್ದಲ್ಲಿ ಪ್ರಾರಂಭಿಕ ಆರ್ಥಿಕ ಸಮಸ್ಯೆಗಳಿಗೆ ಬೆಂಬಲವಾಗಿ ಆಯ್ಕೆಯಾಗುವ ಪ್ರತಿ ಅರ್ಹ ಉದ್ಯಮಿಗೆ ರೂ.5.00 ಲಕ್ಷಗಳವರೆಗೆ ಆರ್ಥಿಕ ಸಹಾಯ ಮಾಡುವುದು ಯೋಜನೆಯ ಉದ್ದೇಶವಾಗಿರುತ್ತದೆ.
ಕರ್ನಾಟಕ ಸರ್ಕಾರದ ಐ.ಟಿ-ಬಿ.ಟಿ ಇಲಾಖೆಯಲ್ಲಿ ಈಗಾಗಲೇ ಈ ಯೋಜನೆಯು ಅಸ್ತಿತ್ವದಲ್ಲಿದ್ದು, ಅದೇ ಮಾದರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾವಂತ ಉದ್ಯಮಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು.
ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಉನ್ನತ ಮಟ್ಟದ ಮೌಲ್ಯಮಾಪನ ಸಮಿತಿ ಮತ್ತು ಅಂತಿಮ ಆಯ್ಕೆಸಮಿತಿ ಮೂಲಕ ಫಲಾನುಭವಿ ಉದ್ಯಮಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಲಾಗುವುದು.
Website : http://adcl.karnataka.gov.in
No comments:
Post a Comment
Write Something about PK Music