Song: |
Heluve Kathe heluve |
Lyrics: |
Vijayanarasimha |
Singer: | S P Balasubramanya |
Music | Manoranjan Prabhakar |
Music
Label |
Anand audio |
ಹೇಳುವೆ ಕಥೆ ಹೇಳುವೆ
ಕೇಳಿರಿ ಕಥೆ ಹೇಳುವೆ
ಹೇಳುವೆ ಕಥೆ ಹೇಳುವೆ
ಕೇಳಿರಿ ಕಥೆ ಹೇಳುವೆ
ಗೌರಿ ಪುತ್ರ ವಿನಾಯಕನಿಗೆ
ಆನೆ ಮುಖವು ಬಂದ ಕಥೆಯ
ಹೇಳುವೆ ಕಥೆ ಹೇಳುವೆ
ಕೇಳಿರಿ ಕಥೆ ಹೇಳುವೆ
ಗೌರಿ ಪುತ್ರ ವಿನಾಯಕನಿಗೆ
ಆನೆ ಮುಖವು ಬಂದ ಕಥೆಯ
ಹೇಳುವೆ ಕಥೆ ಹೇಳುವೆ
ಕೇಳಿರಿ ಕಥೆ ಹೇಳುವೆ
ಒಂದು ದಿನ ಪಾರ್ವತಿಯು ಸ್ನಾನ ಗೃಹಕೆ ಹೊರಟಳು
ಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅದಕೆ ಇತ್ತಳು
ಒಂದು ದಿನ ಪಾರ್ವತಿಯು ಸ್ನಾನ ಗೃಹಕೆ ಹೊರಟಳು
ಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅಡಕೆ ಇತ್ತಲು
ಅಮ್ಮ ನಿನ್ನ ಆಜ್ಞೆ ಏನು ಎಂದು ಕೇಳಿ ಕಂದನು
ಅಮ್ಮ ನಿನ್ನ ಆಜ್ಞೆ ಏನು ಎಂದು ಕೇಳಿ ಕಂದನು
ಕಾವಲಿರು ಎಂದಳು ಗೌರಿ ಒಲವಿಂದ
ಕಾವಲಿರು ಎಂದಳು ಗೌರಿ ಒಲವಿಂದ
ಹೇಳುವೆ ಕಥೆ ಹೇಳುವೆ
ಕೇಳಿರಿ ಕಥೆ ಹೇಳುವೆ
ಗೌರಿ ಪುತ್ರ ವಿನಾಯಕನಿಗೆ
ಆನೆ ಮುಖವು ಬಂದ ಕಥೆಯ
ಹೇಳುವೆ ಕಥೆ ಹೇಳುವೆ
ಕೇಳಿರಿ ಕಥೆ ಹೇಳುವೆ
ಕಂದ ಕಾವಲಿರುವ ವೇಳೆ ಶಿವನು ಅಲ್ಲಿಗೆ ಬಂದ
ಶಿವನು ಯಾರೆಂದರಿಯದೆ ನಿಲ್ಲಿಸಿದನು ಕಂದ
ಒಳಗಡೆ ಬಿಡೆನು ಇಲ್ಲೆ ನಿಲ್ಲಿ ಎಂದು ಕಂದ ಎನಲು
ಹರಗೆ ಉಕ್ಕಿ ಬಂತು ಆಗ ಕೋಪದ ಹೊನಲು
ಕೋಪದಾ ಹೊನಲು
ಕೋಪದಿಂದ ಶೂಲ ತೆಗೆದು ನಿಂತನು ತ್ರಿಪುರಾರಿ
ಕಂದನ ತಲೆ ಕತ್ತರಿಸಿದ ಕಾಮ ಸಂಹಾರಿ
ಶಬ್ಧ ಕೇಳಿ ಒಳಗಿನಿಂದ ಓಡಿ ಬಂದಳು ಗೌರಿ
ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ
ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ
ಸತ್ತ ಹುಡುಗ ತನ್ನ ಮಗನು ಎಂದು ಅರಿತ ನೊಂದ ಶಿವನು
ಒಂದು ತಲೆಯ ಅರಸಿ ತನ್ನಿ ಎಂದು ಆಜ್ಞೆ ತಂದನು
ಸತ್ತ ಹುಡುಗ ತನ್ನ ಮಗನು ಎಂದು ಅರಿತ ನೊಂದ ಶಿವನು
ಒಂದು ತಲೆಯ ಅರಸಿ ತನ್ನಿ ಎಂದು ಆಜ್ಞೆ ತಂದನು
ಅರಸಿ ಹೊರಟರು ಗಣಗಳು ದಿಕ್ಕು ದಿಕ್ಕಿಗೆ
ಆನೆಯೊಂದು ಮಲಗಿತ್ತು ಉತ್ತರ ದಿಕ್ಕಿಗೆ
ಆನೆ ತಲೆಯ ಕತ್ತರಿಸಿ ಶಿವನ ಬಳಿಗೆ ತಂದರು
ಅದನು ಮಗನ ದೇಹಕಿಟ್ಟು ಜೀವ ತಂದನು ದೇವನು
ಜೀವ ತುಂಬಿದ ಕಂದ ತಂದೆಗೆ ವಂದನೆಗೈದನು
ಸಂತಸದಿ ಮಗನ ತಬ್ಬಿ ಅವಗೆ ವರವ ಇತ್ತನು
ಸಂತಸದಿ ಮಗನ ತಬ್ಬಿ ಅವಗೆ ವರವ ಇತ್ತನು
ಇಂದಿನಿಂದ ಮೊದಲ ಪೂಜೆ ಎಂದು ನಿನಗೆ ಎಂದನು
ಗಣಗಳಿಗೆ ನಾಯಕ ನೀ ಎಂದು ಶಿವನು ನುಡಿದನು
ಅಂದಿನಿಂದ ಕಂದನಾದ ದೈವ ಗಣ ನಾಯಕ
ಭಕ್ತರ ವಿಘ್ನಗಳನು ಆರಿಸುವ ವಿನಾಯಕ
ಭಕ್ತರ ವಿಘ್ನಗಳನು ಆರಿಸುವ ವಿನಾಯಕ
ಭಕ್ತರ ವಿಘ್ನಗಳನು ಆರಿಸುವ ವಿನಾಯಕ
Heluve kathe heluve
Keliri kathe heluve
Heluve kathe heluve
Keliri kathe heluve
Gowri puthra vinayakanige
Aane mukhavu banda katheya
Heluve kathe heluve
Keliri kathe heluve
Gowri puthra vinayakanige
Aane mukhavu banda katheya
Heluve kathe heluve
Keliri kathe heluve
Ondu dina parvathiyu Snana gruhake horatalu
Mannininda murthiya maadi Jeeva adake iththalu
Ondu dina parvathiyu Snana gruhake horatalu
Mannininda murthiya maadi Jeeva adake iththalu
Amma ninna aajne enu Endu keli kandanu
Amma ninna aajne enu Endu keli kandanu
Kaavaliru endalu gowri olavinda
Kaavaliru endalu gowri olavinda
Heluve kathe heluve
Keliri kathe heluve
Gowri puthra vinayakanige
Aane mukhavu banda katheya
Heluve kathe heluve
Keliri kathe heluve
Kanda kaavaliruva vele Shivanu allige banda
Shivanu yarendariyade Nillisidanu kanda
Olagade bidenu Ille nilli endu kanda enalu
Harage ukki banthu Aaga kopada honalu
Kopadaa honalu
Kopadinda shooola thegedu ninthanu thripuraari
Kandana thale kaththrarisida kaama samhaari
Shabdha keli olagininda odi bandalu gowri
Saththa magana kandu aththu golaadidalu naari
Saththa magana kandu aththu golaadidalu naari
Satta huduga thanna maganu Endu aritha nonda shivanu
Ondu thaleya arasi thanni Endu aajne thandanu
Satta huduga thanna maganu Endu aritha nonda shivanu
Ondu thaleya arasi thanni Endu aajne thandanu
Arasi horataru ganagalu dikku dikkige
Aaneyondu malagittu uttara dikkige
Aane thaleya kaththarisi Shivana balige thandaru
Adanu magana dehakittu Jeeva thandanu devanu
Jeeva thumbida kanda Thandege vandanegaidanu
Santhasadi magana thabbi Avage varava iththanu
Santhasadi magana thabbi Avage varava iththanu
Indininda modala pooje Endu ninage endanu
Ganagalige nayaka nee Endu shivanu nudidanu
Andininda kandanaada Daiva gana naayaka
Bhakthara vighnagalanu arisuva vinayaka
Bhakthara vighnagalanu arisuva vinayaka
Bhakthara vighnagalanu arisuva vinayaka
No comments:
Post a Comment
Write Something about PK Music