(Prime Minister's
Employment Generation Programme) ಭಾರತ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ವ್ಯಾಪಾರ ಮಾಡುವವರಿಗೆ
ಸಾಲ ನೀಡುವ ಯೋಜನೆಯಾಗಿದೆ, ಈ ಯೋಜನೆಯಡಿ ಫಲಾನುಭವಿಗಳು ಸರ್ಕಾರದಿಂದ ತಮ್ಮ ವ್ಯಾಪಾರಕ್ಕೆ ಬೇಕಾದ
ಬಂಡವಾಳವನ್ನು ಸಾಲವಾಗಿ ಪಡೆಯಬಹುದಾಗಿದೆ ಹಾಗೂ 15 ರಿಂದ 35% ರಷ್ಟು ಸಬ್ಸಿಡಿ ಯನ್ನು ಪಡೆಯಬಹುದು.
PMEGP ಸಾಲ ಯೋಜನೆಯ
ಮೂಲಕ ನೀವು ಎಷ್ಟು ಸಬ್ಸಿಡಿ ಪಡೆಯಬಹುದು?
ಫಲಾನುಭವಿಗಳು |
ಸಬ್ಸಿಡಿ ( ಗ್ರಾಮೀಣ ) |
ಸಬ್ಸಿಡಿ ( ನಗರ ) |
ಜನರಲ್ |
15% |
25% |
ಹಿಂದುಳಿದ
ವರ್ಗ ( Special ) |
25% |
35% |
PMEGP ಯೋಜನೆಯಡಿ ಸಾಲದ
ಮಿತಿ:
- ·
PMEGP ಸಾಲದ ಮಿತಿಯು ರೂ. 9.5 ರಿಂದ 23.75 ಲಕ್ಷ ರೂ.
- · ಉತ್ಪಾದನಾ ವಲಯದ ಗರಿಷ್ಠ ಯೋಜನಾ ವೆಚ್ಚವನ್ನು ರೂ .25 ಲಕ್ಷಕ್ಕೆ ಮಿತಿಗೊಳಿಸಲಾಗಿದೆ.
- ·
ವ್ಯಾಪಾರ/ ಸೇವಾ ವಲಯಕ್ಕೆ ರೂ .10 ಲಕ್ಷಕ್ಕೆ ಮಿತಿಗೊಳಿಸಲಾಗಿದೆ.
PMEGP ಸಾಲದ ಬಡ್ಡಿ ದರ
ಎಷ್ಟು?
ಪಿಎಂಇಜಿಪಿ ಯೋಜನೆಯಡಿ ಸಾಲದ ಬಡ್ಡಿ ದರ 11 ರಿಂದ 12% ವರೆಗೆ ಹೊಂದಿರುತ್ತದೆ
PMEGP ಸಾಲಕ್ಕೆ ಯಾರು ಅರ್ಜಿ
ಸಲ್ಲಿಸಬಹುದು?.
- · 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಅರ್ಜಿಯನ್ನು ಸಲ್ಲಿಸಬಹುದು.
- ·
ರೂ .10 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಉತ್ಪಾದನಾ
ವಲಯದ ಯೋಜನೆಗೆ ವ್ಯಕ್ತಿಯು ಕನಿಷ್ಠ 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ·
ರೂ. 5 ಲಕ್ಷ ಕ್ಕಿಂತ ಹೆಚ್ಚಿನ ವೆಚ್ಚದ ವ್ಯಾಪಾರ/ಸೇವಾ
ವಲಯದ ಯೋಜನೆಗೆ ವ್ಯಕ್ತಿಯು ಕನಿಷ್ಠ 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ·
ಸ್ವಸಹಾಯ ಗುಂಪುಗಳು (ಬಿಪಿಎಲ್ ಅಡಿಯಲ್ಲಿ ಬರುವ
ಯಾವುದೇ ಯೋಜನೆಯ ಪ್ರಯೋಜನಗಳನ್ನು ಪಡೆದಿಲ್ಲದವರು )
- ·
ಸೊಸೈಟೀಸ್ ನೋಂದಣಿ ಕಾಯ್ದೆ, 1860 ರ ಅಡಿಯಲ್ಲಿ
ನೋಂದಾಯಿಸಲಾದ ಸಂಸ್ಥೆಗಳು
- ·
ಉತ್ಪಾದನಾ ಸಹಕಾರ ಸಂಘಗಳು
- ·
ಚಾರಿಟಬಲ್ ಟ್ರಸ್ಟ್‌ಗಳು
PMEGP ಸಾಲದ ಅರ್ಜಿಯನ್ನು
ಮಾಡುವಾಗ ಯಾವ ದಾಖಲೆಗಳು ಬೇಕಾಗುತ್ತವೆ?
ಆಧಾರ್ ಕಾರ್ಡ್ ( Aadhar Card )
ಪ್ಯಾನ್ ಕಾರ್ಡ್ ( Pan Card )
ಯೋಜನೆಯ ವರದಿ ( Project Report )
ಜಾತಿ ಪ್ರಮಾಣಪತ್ರ ( Caste Certificate )
ಅಗತ್ಯವಿದ್ದರೆ ವಿಶೇಷ ವರ್ಗದ ಪ್ರಮಾಣಪತ್ರ ( Special Category Certificate
)
ಗ್ರಾಮೀಣ ಪ್ರದೇಶದ ಪ್ರಮಾಣಪತ್ರ ( Rural Certificate )
ಶಿಕ್ಷಣ/ ಕೌಶಲ್ಯ ಅಭಿವೃದ್ಧಿ ತರಬೇತಿ/ EDP ಪ್ರಮಾಣಪತ್ರ
ಅಧಿಕಾರ ಪತ್ರ ( Authorization Letter )
ಪಿಎಂಇಜಿಪಿ ಆನ್‌ಲೈನ್ ಅರ್ಜಿಯನ್ನು
ಹೇಗೆ ಮಾಡುವುದು
PMEGP ಆನ್‌ಲೈನ್‌ನಲ್ಲಿ ಪ್ರಾರಂಭಿಸಲು ಇ-ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ
https://www.kviconline.gov.in/pmegpeportal/pmegphome/index.jsp
No comments:
Post a Comment
Write Something about PK Music