ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಗಾಗಿ ಸಹಾಯಧನ ಯೋಜನೆ (ಪರಿಷ್ಕೃತ)
ಸದರಿ ಯೋಜನೆಯಡಿ ಟ್ಯಾಕ್ಸಿ / ಗೂಡ್ಸ್ ಮತ್ತು ಹೊಸ ಆಟೋ ರಿಕ್ಷಾ ವಾಹನವನ್ನು ಖರೀದಿಸಲು ಪ್ರತಿ ಅರ್ಜಿದಾರರಿಗೆ ರೂ.75,000/- ಸಹಾಯಧನ ನೀಡಲಾಗುತ್ತದೆ. ಬ್ಯಾಂಕ್ ಸಾಲದ ಮೂಲಕ ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋ ರಿಕ್ಷಾ ಖರೀದಿಸುವ ಅರ್ಜಿದಾರರು ಈ ಸೌಲಭ್ಯವನ್ನು ಪಡೆಯಬಹುದು.
ಅರ್ಹತೆ
ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರಬೇಕು
ಅವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
ವಯಸ್ಸಿನ ಮಿತಿ 18 ರಿಂದ 45 ವರ್ಷಗಳು
ಎಲ್ಲಾ ಮೂಲಗಳಿಂದ ವಾರ್ಷಿಕ ಕುಟುಂಬದ ಆದಾಯ ರೂ .4,50,000/- ಗಿಂತ ಕಡಿಮೆ ಇರಬೇಕು
ಫಲಾನುಭವಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಮಾನ್ಯ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು
ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು
ಅರ್ಜಿದಾರರು ಅಥವಾ ಅವರ ಕುಟುಂಬ ಸದಸ್ಯರು ಕಳೆದ 05 ವರ್ಷಗಳಲ್ಲಿ ಟ್ಯಾಕ್ಸಿ/ಗೂಡ್ಸ್/ಆಟೋ ರಿಕ್ಷಾ ವಾಹನವನ್ನು ಖರೀದಿಸಲು ಸರ್ಕಾರದ ಯಾವುದೇ ಇತರ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆದಿರಬಾರದು.
https://kmdc.karnataka.gov.in
No comments:
Post a Comment
Write Something about PK Music