Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Karnataka Minority Development Corporation | Ganga Kalyana | Taxi Subsidy Loan | Shramashakthi Yojane | Micro Loan | Arivu Yojane


ನಿಗಮದ ಯೋಜನೆಗಳು

  • ‘ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆ
  • ಟ್ಯಾಕ್ಸಿ ಗೂಡ್ಸ್ ಪ್ಯಾಸೆಂಜರ್‌ ಆಟೋ ರಿಕ್ಷಾ ವಾಹನ ಖರೀದಿಗಾಗಿ ಸಹಾಯಧನ ಸೌಲಭ್ಯ ಯೋಜನೆ
  • ಗಂಗಾ ಕಲ್ಯಾಣ ಯೋಜನೆ
  • ಸಣ್ಣ (ಮೈಕ್ರೋ) ಸಾಲ ಹಾಗೂ ಸಹಾಯಧನ ಯೋಜನೆ
  • ‘ಶ್ರ್ರಮಶಕ್ತಿ’ ಯೋಜನೆ
  • ಮೈಕ್ರೋಸಾಲ ಯೋಜನೆ(ವೈಯಕ್ತಿಕ) ಮಹಿಳೆಯರಿಗೆ (2020-21) ಮಾತ್ರ

 

ಅರಿವು ಯೋಜನೆ (ಪರಿಷ್ಕೃತ)

       

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯನ್ನು 2020-21ನೇ ಸಾಲಿನ ಅನ್ವಯವಾಗುವಂತೆ ಹೊಸ (ಪ್ರೆಶ್)‌ ಪ್ರಕರಣಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾದ ವೈದ್ಯಕೀಯ/ವೃತ್ತಿಪರ ಕೋರ್ಸುಗಳ ವಿಧ್ಯಾರ್ಥಿಗಳ ಹೊರತಾಗಿ ಬೇರೆ ಯಾವ ಕೋರ್ಸುಗಳಿಗೂ ಸಾಲವನ್ನು ನೀಡಲಾಗುವುದಿಲ್ಲ. ರಿನ್ಯೂವಲ್ಪ್ರಕರಣಗಳಲ್ಲಿ ಸರ್ಕಾರಿ ಆದೇಶ ಸಂಖ್ಯೆ MWD 310 MDS 2020 ಬೆಂಗಳೂರು ದಿನಾಂಕ 17/08/2020ರನ್ವಯ   ಕೆಳಕಂಡಂತೆ ಪರಿಷ್ಕರಿಸಿ ಕಾರ್ಯಗತಗೊಳಿಸಲು ಸರ್ಕಾರವು ಆದೇಶಿಸಿರುತ್ತದೆ.

 

ರಿನ್ಯೂವಲ್ಸಾಲವನ್ನು ಪರಿಗಣಿಸುವಾಗ ವಿದ್ಯಾರ್ಥಿಯು ಹಿಂದಿನ ವರ್ಷದ/ಹಿಂದಿನ ಸೆಮಿಸ್ಟರ್ಪರೀಕ್ಷೆಗಳಲ್ಲಿ ಕನಿಷ್ಟ ಶೇ.65ರಷ್ಟು ಅಂಕಗಳನ್ನು ಎಲ್ಲಾ ವಿಷಯಗಳಲ್ಲೂ ತೇರ್ಗಡೆ ಹೊಂದಿರಬೇಕುವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ರಿನ್ಯೂವಲ್ಅರ್ಜಿಯನ್ನು ಸಲ್ಲಿಸುವಾಗ ನಿಗಮದಿಂದ ಹಿಂದಿನ ವರ್ಷಗಳಲ್ಲಿ ಪಡೆದಿರುವ ಒಟ್ಟು ಸಾಲದ ಬಾಕಿಯ ಮೊತ್ತದೆ ಶೇ.12 ರಷ್ಟುನ್ನು ಜಿಲ್ಲಾ ಕಛೇರಿಗಳಲ್ಲಿ ಪಾವತಿಸಿರಬೇಕು

 

1.   ಸಿ..ಟಿ/ನೀಟ್ಇಂದ ಆಯ್ಕೆಯಾದ ವೈದ್ಯಕೀಯ ಪದವಿ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಶೇ.50% ಗರಿಷ್ಟ ರೂ.2.00 ಲಕ್ಷಗಳವರೆಗೆ

2.   ಸಿ..ಟಿ/ನೀಟ್ಇಂದ ಅಂದರೆ ಡೆಂಟಲ್‌, ಎಂ.ಬಿಎ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದ ಶೇ.50% ಗರಿಷ್ಟ ರೂ.30,000/- (ರಿನ್ಯೂವಲ್ಸಹಿತ)

3.   ಸಿ..ಟಿ ಇಂದ ಅಂದರೆ ಇಂಜಿನಿಯರಿಂಗ್ಎಂ.ಟೆಕ್‌, ಎಂ.ಸಿ., ಬಿ.ಎಸ್.ಸಿ (.ಜಿ) ಅಯುರ್ವೇದ, .ಎಸ್.ಎಂ.ಹೆಚ್.‌, ಡಿ.ಫಾರ್ಮ, ಬಿ.ಫಾರ್ಮ ಮತ್ತು ಇತರೆ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಬೋಧನಾ ಶುಲ್ಕದ ಶೇ.50% ಗರಿಷ್ಟ ರೂ.30,000/-

4.   ಇತರೆ ಡಿಗ್ರಿ, ಡಿಪ್ಲೋಮಾ ಮತ್ತು ಐಟಿಐ ಕೋರ್ಸುಗಳಿಗೆ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಹೊಸ (ಪ್ರಶ್)‌ ಪ್ರಕರಣಗಳಿಗೆ ಬೋಧನಾ ಶುಲ್ಕ ಇರುವುದಿಲ್ಲ ರಿನ್ಯೂವಲ್ಪ್ರಕರಣಗಳಿಗೆ ಮಾತ್ರ ರೂ.10,000/- ಗರಿಷ್ಟ.

 

 

ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಗಾಗಿ ಸಹಾಯಧನ ಯೋಜನೆ (ಪರಿಷ್ಕೃತ)

 

ಸದರಿ ಯೋಜನೆಯಡಿ ಟ್ಯಾಕ್ಸಿ / ಗೂಡ್ಸ್ ಮತ್ತು ಹೊಸ ಆಟೋ ರಿಕ್ಷಾ ವಾಹನವನ್ನು ಖರೀದಿಸಲು ಪ್ರತಿ ಅರ್ಜಿದಾರರಿಗೆ ರೂ.75,000/- ಸಹಾಯಧನ ನೀಡಲಾಗುತ್ತದೆಬ್ಯಾಂಕ್ ಸಾಲದ ಮೂಲಕ ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ಆಟೋ ರಿಕ್ಷಾ ಖರೀದಿಸುವ ಅರ್ಜಿದಾರರು ಸೌಲಭ್ಯವನ್ನು ಪಡೆಯಬಹುದು.

ಅರ್ಹತೆ

ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರಬೇಕು
ಅವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
ವಯಸ್ಸಿನ ಮಿತಿ 18 ರಿಂದ 45 ವರ್ಷಗಳು
ಎಲ್ಲಾ ಮೂಲಗಳಿಂದ ವಾರ್ಷಿಕ ಕುಟುಂಬದ ಆದಾಯ ರೂ .4,50,000/- ಗಿಂತ ಕಡಿಮೆ ಇರಬೇಕು
ಫಲಾನುಭವಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಮಾನ್ಯ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು
ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು
ಅರ್ಜಿದಾರರು ಅಥವಾ ಅವರ ಕುಟುಂಬ ಸದಸ್ಯರು ಕಳೆದ 05 ವರ್ಷಗಳಲ್ಲಿ ಟ್ಯಾಕ್ಸಿ/ಗೂಡ್ಸ್/ಆಟೋ ರಿಕ್ಷಾ ವಾಹನವನ್ನು ಖರೀದಿಸಲು ಸರ್ಕಾರದ ಯಾವುದೇ ಇತರ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆದಿರಬಾರದು.


 'ಗಂಗಾ ಕಲ್ಯಾಣ' ಯೋಜನೆ

) ಏತ ನೀರಾವರಿ ಯೋಜನೆ

            ಯೋಜನೆಯಡಿಯಲ್ಲಿ ನಿರಂತರವಾಗಿ ಹರಿಯುತ್ತಿರುವ ನೀರನ್ನು (ನದಿ) ಪೈಪ್ಲೈನ್ ಮೂಲಕ ಮೇಲಕ್ಕೆ ಎತ್ತಿ, ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಯೋಜನೆಯನ್ನು ನಿಗಮವು ಅನುಷ್ಠಾನಗೊಳಿಸಿ ನಂತರ ಅದನ್ನು ಫಲಾನುಭವಿಗಳ ಗ್ರಾಹಕರ ಸಹಕಾರ ಸಂಘಕ್ಕೆ ಹಸ್ತಾಂತರ ಮಾಡಲಾಗುವುದು. ಉತ್ತಮ ಬೆಳೆ ಪಡೆಯುವ ಸಲುವಾಗಿ ಕೃಷಿ ತಜ್ಙರಿಂದ ಸಲಹೆ ಮತ್ತು ನೆರವನ್ನು ಕೊಡಿಸಲಾಗುವುದು ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆಅರ್ಜಿದಾರರು ವೆಬ್ಪೇಜ್ಮೂಲಕ ಆನ್-ಲೈನ್ಅರ್ಜಿಯನ್ನು ಸಲ್ಲಿಸಬೇಕು.

 ) ವೈಯಕ್ತಿಕ ಕೊಳವೆಬಾವಿ ಯೋಜನೆ

 ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಹರಿಯುವ ನೀರಿನ ವ್ಯವಸ್ಥೆ ಲಭ್ಯವಿರುವುದಿಲ್ಲವೋ ಅಂತಹ ಸ್ಥಳದಲ್ಲಿ ತಜ್ಞ ಭೂವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ನೆಲದಡಿಯಲ್ಲಿ ಕೊಳವೆಬಾವಿಯನ್ನು ಕೊರೆದು, ನಂತರ ನೀರು ಸಂಗ್ರಹಿಸಲು ಟ್ಯಾಂಕ್ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನುಒದಗಿಸಲಾಗುತ್ತದೆ. ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಯೋಜನೆಯಡಿಯಲ್ಲಿ 01 ಎಕರೆ 20 ಗುಂಟೆಯಿಂದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗೆ ಒಂದು ಕೊಳವೆಬಾವಿ ಕೊರೆಯಿಸಿ ಅಥವಾ ತೆರೆದ ಬಾವಿಯನ್ನು ನಿರ್ಮಿಸಿ, ಅದಕ್ಕೆ ನಿಗಮದಿಂದ ಪಂಪ್ಸೆಟ್ನ್ನು ಅಳವಡಿಸಲಾಗುವುದು. ಪಂಪ್ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ.1.50 ಲಕ್ಷವಾಗಿದೆ. ಅರ್ಜಿದಾರರು ವೆಬ್ ಪೇಜ್ಮೂಲಕ ಆನ್-ಲೈನ್ಅರ್ಜಿಯನ್ನು ಸಲ್ಲಿಸಬೇಕು.

 

) ತೆರೆದ ಬಾವಿ

 ವೈಯಕ್ತಿಕ ಕೊಳವೆಬಾವಿ ಕೊರೆಯಲು ಸಾಧ್ಯವಾಗದ ಸಂದರ್ಭದಲ್ಲಿ ಅಂದರೆ ಮಳೆ ಅಡ್ಡಿ ಪಡಿಸುವಿಕೆ, ಜಮೀನಿನಲ್ಲಿ ನಿಂತಿರುವ ಬೆಳೆಗಳು ಮುಂತಾದ ಸಂದರ್ಭಗಳಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ತೆರದ ಬಾವಿ ಕಾಮಗಾರಿಕೆಯನ್ನು ಜಿಲ್ಲಾ ವ್ಯವಸ್ಥಾಪಕರು ಫಲಾಪೇಕ್ಷಿಯ ಅಪೇಕ್ಷೆ ಮೇರೆಗೆ ನಿಗಮದ ನಿಯಮಾನುಸಾರ ಅರ್ಜಿ ಹಾಗೂ ದಾಖಲಾತಿಗಳನ್ನು ಪಡೆದು ಸಂಬಂಧಪಟ್ಟ ಮತ ಕ್ಷೇತ್ರದ ಮಾನ್ಯ ಶಾಸಕರ ಅನುಮೋದನೆ ಪಡೆದು ಪ್ರಸ್ತಾವನೆಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವರು.

         

ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರ್ಕಾರವು ರೂ.2.00ಲಕ್ಷಗಳನ್ನು ನಿಗದಿಪಡಿಸಿರುತ್ತದೆ. ಮೊತ್ತದಲ್ಲಿ ಕೊಳವೆ ಬಾವಿಯ ಕೊರೆಯುವಿಕೆ, ಪಂಪ್ಸೆಟ್ಸ್ ಸರಬರಾಜು ಮತ್ತು ವಿದ್ಯುದ್ದೀಕರಣದ ಠೇವಣಿ ಮೊತ್ತವನ್ನು ಭರಿಸಲಾಗುತ್ತದೆ ಯೋಜನೆ ಅಡಿಯಲ್ಲಿ ರೂ.2,00,000/-ಗಳು ಸಹಾಯಧನ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗೆ ಸಹಾಯಧನ ರೂ.3.50 ಲಕ್ಷಗಳು ವಾಗಿರುತ್ತದೆ. ಇದರಲ್ಲಿ ರೂ. 50,000/- ವಿದ್ಯದೀಕರಣ ವೆಚ್ಚಕ್ಕೆ ಮೀಸಲು.

 

ಸೌಲಭ್ಯ ಪಡೆಯಬಯಸುವ ಫಲಾನುಭವಿಗಳು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಅಂದರೆ ಪ್ರತಿ ಫಲಾನುಭವಿಗೆ 1ಎಕರೆ 20ಗುಂಟೆ (1 ಎಕರೆ50ಸೆಂಟ್ಸ್) ಎಕರೆಯಿಂದು 5 ಎಕರೆಯವರೆಗೆ ಕುಷ್ಕಿ ಜಮೀನಿರಬೇಕು ಮತ್ತು ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿರಬೇಕು. ಸರ್ಕಾರಿ ಆದೇಶ ಸಂಖ್ಯೆ: ಸಕಇ 168 ಬಿಎಮ್ಎಸ್ 2010 ದಿನಾಂಕ 25-07-2011 ರಲ್ಲಿ ಸೂಚಿಸಿರುವಂತೆ ಮಡಿಕೇರಿ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಗರಿಷ್ಠ 1 ಎಕರೆ ಜಮೀನನ್ನು ಹೊಂದಿರತಕ್ಕದ್ದು. ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಅರ್ಜಿ 3 ಭಾವಚಿತ್ರ, ವಾರ್ಷಿಕ ಆದಾಯ ಪ್ರಮಾಣ ಪತ್ರ, ಆಧಾರಕಾರ್ಡ್/ಚುನಾವಣ ಗುರುತಿನ ಚೀಟಿ/ರೇಷನ್ ಕಾರ್ಡ್ ನಕಲು, ಪಹಣಿ, ರೆರ್ಕಾರ್ಡ್ ಆಪ್ ರೈಟ್ಸ್ ಪಡೆದು ಆಯ್ಕೆ ಸಮಿತಿಯಲ್ಲಿ ಮಂಡಿಸಿ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಫಲಪೇಕ್ಷಿಗಳನ್ನು ಆಯ್ಕೆ ಮಾಡತಕ್ಕದ್ದು. (ಕೇಂದ್ರ ಕಛೇರಿಯ ಲಿಖಿತ ಅನುಮತಿ ಇಲ್ಲದೆ ಗುರಿಗಿಂತ ಹೆಚ್ಚಿಗೆ ಫಲಾಪೇಕ್ಷಿಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿದರೆ ತಮ್ಮ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು).

 

ಅರ್ಹತೆ:

 1.   ಸರ್ಕಾರಿ ಆದೇಶದಲ್ಲಿ ಸೂಚಿಸಿರುವಂತೆ ಫಲಾನುಭವಿಯು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.

2.   ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

3.   ಅವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.

4.   ವಾರ್ಷಿಕ ಕೌಟುಂಬಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.81,000/ಗಳು ಹಾಗೂ ನಗರ ಪ್ರದೇಶಗಳಲ್ಲಿ ರೂ.1.03 ಲಕ್ಷಗಳನ್ನು ಮೀರಿಬಾರದು.

5.   ಅರ್ಜಿದಾರರು ʼಆಧಾರ್‌ʼ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು

6.   ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು

 

 

ಸಣ್ಣ (ಮೈಕ್ರೋ) ಸಾಲ ಹಾಗೂ ಸಹಾಯಧನ ಯೋಜನೆ

 

            ಯೋಜನೆಯನ್ನು ಸ್ವ-ಸಹಾಯ ಗುಂಪಿನ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಅಂತಹ ಸಂಘಟಿತ ಗುಂಪು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 10 ರಿಂದ 20 ಸದಸ್ಯರನ್ನು ಹೊಂದಿದ್ದುಅದರ ಸದಸ್ಯರು ಹಣಕಾಸು ಮಿತವ್ಯಯ ಚಟುವಟಿಕೆಯಲ್ಲಿ(thrift activity) ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿರಬೇಕು. ಅಂತಹ ಸಂಘದ ಸದಸ್ಯರು ತಮ್ಮಲ್ಲಿ ಇಬ್ಬರನ್ನು ಪ್ರತಿನಿಧಿ-01 ಮತ್ತು ಪ್ರತಿನಿಧಿ-02 ಆಗಿ ಆಯ್ಕೆಮಾಡಿಕೊಂಡಿರಬೇಕು. ಪ್ರತಿನಿಧಿಗಳು ಸ್ವ-ಸಹಾಯ ಗುಂಪಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಬ್ಯಾಂಕಿನಿಂದ ತಮ್ಮನ್ನುಅಧಿಕೃತ ರುಜುದಾರರುಎಂಬ ಮಾನ್ಯತೆ ಪಡೆದಿರಬೇಕು. ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಮಹಿಳೆಯರು ರೂಪಿಸಿಕೊಂಡ ಸ್ವ-ಸಹಾಯ ಗುಂಪಿಗೆ ಪ್ರಾಶಸ್ತö್ಯ ಕೊಡಲಾಗುವುದು. ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರು ಪ್ರಾರಂಭಿಸಬಯಸುವ ಸಣ್ಣ ವ್ಯಾಪಾರ ಅಂದರೆ, ತಳ್ಳುವ ಗಾಡಿಯಲ್ಲಿ ತರಕಾರಿ/ಹಣ್ಣು ಮಾರಾಟ, ಕಲಾಯಿ ಮಾಡುವಿಕೆ, ಹಾಸಿಗೆ ಮಾಡುವಿಕೆ, ಪಾನ್ ಶಾಪ್, ಕಡ್ಲೆಕಾಯಿ ವ್ಯಾಪಾರ, ಸೈಕಲ್ ರಿಪೇರಿ, ಗ್ಯಾಸ್/ಆರ್ಕ್ ವೆಲ್ಡಿಂಗ್, ವಲ್ಕನೈಸಿಂಗ್, ಮೀನು ಮಾರಾಟ, ಟೀ ಶಾಪ್ ಮುಂತಾದುವುಗಳಿಗೆ ನಿಗಮವು ಪ್ರತಿ ಸದಸ್ಯನಿಗೆ ರೂ.10,000/- ಸಾಲ ಸೌಲಭ್ಯವನ್ನು (ರೂ.5,000/- ಸಾಲ ಮತ್ತು ರೂ.5,000/- ಸಹಾಯಧನ) ನೀಡುತ್ತದೆ. ನಿಗಮದಿಂದ ಸಾಲವನ್ನು ಸ್ವ-ಸಹಾಯ ಗುಂಪಿಗೆ ನೇರವಾಗಿ ಮಂಜೂರು ಮಾಡಲಾಗುವುದು.ನಂತರ ಅಂತಹ ಸ್ವ-ಸಹಾಯ ಗುಂಪು, ತಮ್ಮ ಸದಸ್ಯರಿಗೆ ಸಾಲವನ್ನು ಬಿಡುಗಡೆ ಮಾಡುಬೇಕು. ಸಾಲವನ್ನು ಶೇ.5 ಬಡ್ಡಿದರದಲ್ಲಿ 36 ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.   

 

'ಶ್ರಮ ಶಕ್ತಿ' ಯೋಜನೆ

 

         

                       ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ ರೂ.50,000/-ದವರೆಗೆ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ, ಶೇ.50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟು ಹಣವನ್ನುಬ್ಯಾಕ್ಎಂಡ್ ಸಹಾಯಧನವನ್ನಾಗಿ ಪರಿಗಣಿಸಲಾಗುತ್ತದೆ.ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲನಾದಲ್ಲಿ, ಶೇ.50ರಷ್ಟು ಬ್ಯಾಕ್ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

 

ಮೈಕ್ರೋಸಾಲ ಯೋಜನೆ(ವೈಯಕ್ತಿಕ) ಮಹಿಳೆಯರಿಗೆ ಮಾತ್ರ

    (2020-21 ನೇಸಾಲಿಗೆಮಾತ್ರ)

 

ಕೋವಿಡ್-19 ಪಿಡುಗಿ ನಿಂದಾಗಿ ತೊಂದರೆ ಗೊಳಗಾದ, ನಿಗಮದ ಯಾವುದೇ ಯೋಜನೆಯಲ್ಲೂಇದುವರೆಗೆಸಾಲ,ಸಹಾಯಧನ ಯಾವುದನ್ನೂ ಪಡೆಯದ ಕಡುಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ 23,000 ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50 ವಯೋಮಾನದೊಳಗಿನ ಮಹಿಳೆಯರಿಗೆ, ತಳ್ಳುವಗಾಡಿಯಲ್ಲಿ ವ್ಯಾಪಾರ, ಬೀದಿವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರಕಿರಾಣಿ ಅಂಗಡಿ, ಅರಿಷಿನ / ಕುಂಕುಮ/ ಅಗರಬತ್ತಿ/ ಕರ್ಪೂರ, ಪಾದಚಾರಿ ಮಾರ್ಗದಲ್ಲಿ, ಟೀ / ಕಾಪಿಮಾರಾಟ, ಎಳನೀರು ವ್ಯಾಪಾರಹೂವಿನ ವ್ಯಾಪಾರ, ತರಕಾರಿ ವ್ಯಾಪಾರ, ಹಣ್ಣಿನ ವ್ಯಾಪಾರ, ಇನ್ನಿತರ ಸಣ್ಣ ವ್ಯಾಪಾರ ನಡೆಸಲು ಆರಂಭಿಕ ಬಂಡವಾಳಕ್ಕಾಗಿ ರೂ.10,000/-ಮೊತ್ತದ (ರೂ.8000/-ಸಾಲ +ರೂ.2,000/-ಸಬ್ಸಿಡಿ) ಅಲ್ಪಾವಧಿ ಸಾಲ ಯೋಜನೆ ಇದು.

 

ಸಾಲನೀಡಿಕೆ ವಿಧಾನ:

). ಅರ್ಜಿಸಲ್ಲಿಸುವಾಗ ನೀಡಬೇಕಾದ ದಾಖಲಾತಿಗಳು (ಮಹಿಳೆಯರುಮಾತ್ರ)

1.ಸರಳಅರ್ಜಿನಮೂನೆ(ಆನ್ ಲೈನಿನಲ್ಲೆ ನೀಡಲಾಗಿದೆ)

2.ಆಧಾರ್ ಕಾರ್ಡ್

3.ಬಿಪಿಎಲ್ ಕಾರ್ಡ್ /ಅಂತ್ಯೋದಯ ಕಾರ್ಡ್

4.ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ

(ಹೆಸರು, ಖಾತೆ ಸಂಖ್ಯೆ, ಫೋಟೋ, ಬ್ಯಾಂಕಿನ ವ್ಯವಸ್ಥಾಪಕರ ಸಹಿ ಇರುವ ಪುಟಮತ್ತು ಇತ್ತೀಚಿನ ಎರಡು ತಿಂಗಳ ವ್ಯವಹಾರ, ಶಿಲ್ಕು ತೋರಿಸುವ ಪುಟಗಳ ಜೆರಾಕ್ಸ್)

5.ಜಾತಿ/ ಆದಾಯ ಪ್ರಮಾಣಪತ್ರ

6.ವಿಧವೆಯರು: ಪಿಂಚಣಿ ದಾಖಲೆ ಅಥವಾ ಗಂಡನ ಮರಣ ಪ್ರಮಾಣಪತ್ರ

7.ವಿಕಲಚೇತನರು: ಅಧಿಕೃತ ಅಂಗವೈಕಲ್ಯ ಪ್ರಮಾಣಪತ್ರ.

 


).ಅರ್ಜಿಸಲ್ಲಿಕೆ ಮತ್ತು ಮಂಜೂರಾತಿ ಪ್ರಕ್ರಿಯೆ:

ಮೊದಲಹಂತ:

 

1.   ನಿಗಮದ ವೆಬ್ಸೈಟಿನಲ್ಲಿ ((kmdcmicro.karnataka.gov.in)ಸಾಲದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಆನ್ಲೈನಿನಲ್ಲೇ ಭರ್ತಿಮಾಡಿ, ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅಪ್ಲೋಡ್ಮಾಡಿದಾಗ, ಅರ್ಜಿದಾರರು ನೀಡಿದಮೊಬೈಲ್ ಸಂಖ್ಯೆಗೆ ಓಟಿಪಿ ಸಂಖ್ಯೆಯೊಂದು ಬರುತ್ತದೆ. ಅದನ್ನುಆನ್ಲೈನಿನಲ್ಲಿ ದಾಖಲಿಸಿದಾಗ ಅರ್ಜಿಯು ನಿಗಮದ ವೆಬ್ಸೈಟಿನಲ್ಲಿ ರಿಜಿಸ್ಟರ್ಆಗುತ್ತದೆ. ಆಗಅರ್ಜಿದಾರರ ರಿಜಿಸ್ಟರ್ ಸಂಖ್ಯೆ ಮೊಬೈಲಿಗೂ ರವಾನೆಯಾಗುತ್ತದೆ. ರಿಜಿಸ್ಟರ್ಆದ ಆನ್ಲೈನ್ ಅರ್ಜಿಯ ಎರಡು ಪ್ರತಿಗಳನ್ನು ಪ್ರಿಂಟ್ಮಾಡಿ ಇಟ್ಟುಕೊಳ್ಳಬೇಕು.

 

2.   ಆನ್ಲೈನ್ಮೂಲಕ ಸಲ್ಲಿಸಲಾದ ಅರ್ಜಿಗಳನ್ನು, ನಿಗಮವು ನಿರ್ಧರಿಸಿದ ಮಾನದಂಡಗಳ ಆಧಾರದಲ್ಲಿ, ಆನ್ಲೈನಿನಲ್ಲಿಯೇ ಆದ್ಯತೆಮೇರೆಗೆ ಜಿಲ್ಲಾವಾರು, ತಾಲೂಕುವಾರು ಮತ್ತು ಗ್ರಾಮಪಂಚಾಯತುವಾರಾಗಿ ಹಂಚಿಕೆಯಾದ Àಗುರಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದು.

 

ಎರಡನೇಹಂತ

3.   ಹೀಗೆ ಆಯ್ಕೆಯಾದ ಫಲಾನುಭವಿಗಳಿಗೆ ಮೊಬೈಲ್ಮೂಲಕ ಆಯ್ಕೆ ಯಾಗಿರುವ

ಬಗ್ಗೆ ಸಂದೇಶ ಕಳುಹಿಸಲಾಗುತ್ತದೆ. ಫಲಾನುಭವಿಗಳು ಈಗಾಗಲೇ ತಮಗೆನೀಡಿದ ರಿಜಿಸ್ಟರ್ನಂಬ ರ್ಮೂಲಕ ಲಾಗಿನ್ಆಗಿ ಆನ್ಲೈನಿ ನಿಂದ ಸಾಲದ ದಾಖಲೆಪತ್ರಗಳನ್ನು ಡೌನ್ಲೋಡ್ಮಾಡಿ ಕೊಂಡು, ಭರ್ತಿಮಾಡಿ ಸಹಿಹಾಕಿದ ದಾಖಲೆಪತ್ರಗಳನ್ನು ಸ್ಕಾನ್ಮಾಡಿ ಮತ್ತೆ ಅಪಲೋಡ್ಮಾಡಬೇಕು.

 

4.   ಆನ್ಲೈನಿನಲ್ಲಿ ಅಪಲೋಡ್ಮಾಡಿದನಂತರ, ಸಹಿಹಾಕಿಟ್ಟು ಕೊಂಡ. ಸಾಲ ಮಂಜೂರಾತಿ ಪತ್ರ ಹಾಗೂ ತಗಾದೆ ಪತ್ರ, ಹಿಂದೆ ಸಲ್ಲಿಸಿದ ಸಾಲದ ಅರ್ಜಿ ಮತ್ತು ನೀಡಿರುವ ಕೆವೈಸಿ ದಾಖಲೆಗಳ ಪ್ರತಿಗಳೊಂದಿಗೆ, ಆಯಾ ಜಿಲ್ಲಾವ್ಯವಸ್ಥಾಪಕರ ಕಛೇರಿಯಲ್ಲಿಸಲ್ಲಿಸಬೇಕು.

 

ಮೂರನೇಹಂತ:

5.   ಜಿಲ್ಲಾವಾರು ಆಯ್ಕೆಯಾದ ಫಲಾನುಭವಿಗಳಪಟ್ಟಿಯನ್ನು ಜಿಲ್ಲಾ ಕಛೇರಿಗಳಿಗೆ ಮುಂಚಿತವಾಗಿ ಮೇಲ್ ಮೂಲಕ ಕಳುಹಿಸಲಾಗುವುದು. ತದನಂತರ ಆಯ್ಕೆಯಾದ ಫಲಾನುಭವಿಗಳುಸಲ್ಲಿಸುವ ಅರ್ಜಿ, ಸಹಿಹಾಕಿಟ್ಟುಕೊಂಡ. ಸಾಲ ಮಂಜೂರಾತಿ ಪತ್ರ ಹಾಗೂ ತಗಾದೆಪತ್ರಗಳ ಮೂಲಪ್ರತಿಗಳನ್ನು ಮತ್ತು ಕೆವೈಸಿ ದಾಖಲೆಗಳನ್ನುಆಯಾ ಜಿಲ್ಲಾವ್ಯವಸ್ಥಾಪಕರು ಮೂಲ ದಾಖಲೆಗಳೊಂದಿಗೆ ಪರಿಶೀಲಿಸಿ ಆನ್ಲೈನಿನಲ್ಲೇ ಮಂಜೂರಾತಿಗೆ ಶಿಫಾರಸು ಮಾಡಬೇಕು. ಮತ್ತು ಎಲ್ಲಾ ದಾಖಲೆಗಳನ್ನು ಜಿಲ್ಲಾಕಛೇರಿಯಲ್ಲಿ ಸುರಕ್ಷಿತವಾಗಿ ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕು.

 

6.   () ಜಿಲ್ಲಾ ಕಛೇರಿಯಿಂದ ಆನ್ಲೈನಿನಲ್ಲೇ ಮಂಜೂರಾಗಿ ಬಂದಪಟ್ಟಿಗಳ

ಆಧಾರದಲ್ಲಿ ಆಯಾ ದಿನಪಡೆದ ಸಾಲದ ಅರ್ಜಿಗಳನ್ನು ಕೇಂದ್ರ ಕಛೇರಿಯಲ್ಲಿ  ಆಯಾದಿನವೇ ಪಟ್ಟಿ ಮಾಡಿ, ಸಾಲ ಬಿಡುಗಡೆಗೆ ಸಿದ್ಧಗೊಳಿಸುವುದು. ಯಾವ ಕಾರಣಕ್ಕೂಪಟ್ಟಿಯನ್ನು ಕೇಂದ್ರಕಛೇರಿಗೆ ಆನ್ಲೈನಿನಲ್ಲೇ  ಅನುಮೋದಿಸುವಲ್ಲಿ ತಡಮಾಡಕೂಡದು. ಫಲಾನುಭವಿಗಳನ್ನು ಸತಾಯಿಸುವುದಾಗಲ್ಲಿ, ದಾಖಲೆ ಪತ್ರಗಳನ್ನು ತಕ್ಷಣವೆ ಸ್ವೀಕರಿಸಲು ವಿಳಂಬ ಮಾಡುವುದಾಗಲಿ ಕಂಡುಬಂದಲ್ಲಿ ಜಿಲ್ಲಾ ವ್ಯವಸ್ಥಾಪಕರಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

 

() ಆಯಾ ಜಿಲ್ಲೆಯಿಂದ ಆಯ್ಕೆಯಾದ ಫಲಾನುಭವಿಗಳಿಂದ ಸಂಗ್ರಹಿಸಿದ ಸಾಲ ಪತ್ರಗಳ ಆಧಾರದಲ್ಲಿ ಎಲ್ಲಾ ಫಲಾನುಭವಿಗಳ ಸಾಲ ಖಾತೆಯನ್ನು ಸಾಲದ ರಿಜಿಸ್ಟರಿನಲ್ಲಿ ತೆರೆಯತಕ್ಕದ್ದು.

 

() ಮೈಕ್ರೋ ಸಾಲದ ಮೊರೆಟೋರಿಯಂಅವಧಿ 2 ತಿಂಗಳು ಮಾತ್ರ. ನಂತರ 10

       ಸಮಾನ ಕಂತುಗಳಲ್ಲಿ, ಶೇಕಡ 4 ಬಡ್ಡಿಯೊಂದಿಗೆ ಸಾಲವನ್ನು ವಸೂಲಾತಿ

       ಮಾಡತಕ್ಕದ್ದು. (ರೂ.10,000/-ಸಾಲಕ್ಕೆ 10 ತಿಂಗಳ ಮಾಸಿಕ ಕಂತು ರೂ 1,025/-)

         

() ಮೇಲೆ ಸೂಚಿಸಿದ ಕ್ರಮಗಳಲ್ಲಿ ಯಾವುದೇ ವ್ಯತ್ಯಯಕಂಡು ಬಂದಲ್ಲಿ ಜಿಲ್ಲಾ

        ವ್ಯವಸ್ಥಾಪಕರೇ ಜವಾಬ್ದಾರರಾಗಿರುತ್ತಾರೆ.

 

7    ಸಾಲ ಅನುಮೋದನೆಯ ನಂತರ ಕೇಂದ್ರ ಕಛೇರಿಯಿಂದ ಕೂಡಲೇಸಾಲದ

     ಮೊತ್ತವನ್ನು ನೆಪ್ಟ್ ಮೂಲಕ ಪ್ರತಿಯೋರ್ವ ಸಾಲಗಾರರ ಖಾತೆಗೆ ಜಮಾ ಮಾಡಬೇಕು.

 

Official Website 

https://kmdc.karnataka.gov.in

No comments:

Post a Comment

Write Something about PK Music

new1

new2

new5