ಭಾರತದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಲೇ ಇದೆ,
ಇದನ್ನು ಗಮನಿಸಿದ ಗ್ರಾಹಕರು ಗ್ಯಾಸ್ ತುಂಬಿಸಲು ಕಷ್ಟ ಪಡುವುತ್ತಿರುವುದಂತೂ ನಿಜ.
ಸಾಕಷ್ಟು ಬಡವರು ಅಡುಗೆ ಮಾಡಲು ಸೌದೆ ಒಲೆಯಿಂದ ಬೇಸತ್ತು
ಗ್ಯಾಸ್ ಒಲೆಗೆ ಒಗ್ಗಿಕೊಂಡು ಸಾಕಷ್ಟು ವರ್ಷಗಳೇ ಕಳೆದಿದೆ, ಅದರಲ್ಲೂ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ
ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಮೇಲೆ ಮಹಿಳೆಯರು ಗ್ಯಾಸ್ ಒಲೆಯ ಮೇಲೆ ಅವಲಂಭಿತರಾಗಿದ್ದಾರೆ ಆದರೆ
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಂಡು ನೊಂದಿದ್ದಾರೆ.
ಸಿಲಿಂಡರ್ ಬೆಲೆ ಎಷ್ಟೇ ಏರಿಕೆ ಕಂಡರೂ ಸಾಲ ಮಾಡಿಯಾದರೂ ಸಿಲಿಂಡರ್
ಕೊಂಡುಕೊಳ್ಳುವ ಬದಲಿಗೆ ಬೇರೆ ದಾರಿ ಇಲ್ಲದಂತಾಗಿದೆ.
ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾದರೆ ಸಾಕು ಎಂದು ಕಾಯುತ್ತಿರುವ
ಎಷ್ಟೋ ಬಡವರು ನಮ್ಮ ದೇಶದ ಹಳ್ಳಿಗಳಲ್ಲಿ ಇರುವುದಂತೂ ನಿಜ.
ಮೊದಮೊದಲು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಹಣ ಸಿಗುತ್ತಿತ್ತು,
ಆದರೆ ಕಾಲ ಕಳೆದಂತೆ ಸಬ್ಸಿಡಿ ಹಣವನ್ನೂ ನಿಲ್ಲಿಸಿದ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂಬುದು
ಜನರ ಅಭಿಪ್ರಾಯವಾಗಿದೆ.
ಆದರೆ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಗೆ ಕಾಯುತ್ತಿರುವ
ಕೆಲವು ಮಂದಿಗೆ ಬೆಲೆಯ ಇಳಿಕೆಯ ಬದಲಾಗಿ 200 ರೂ. ಸಬ್ಸಿಡಿ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ
ಆದರೆ ಇದು ಎಲ್ಲಾ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಅನ್ವಯವಾಗುವುದಿಲ್ಲ ಬದಲಿಗೆ ಕೇವಲ ಪ್ರದಾನಮಂತ್ರಿ
ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಪಡೆದಿರುವ ಬಳಕೆದಾರರಿಗೆ ಮಾತ್ರ ಸಬ್ಸಿಡಿ ಹಣವನ್ನು ನೀಡುವುದಾಗಿ
ಸರ್ಕಾರ ಹೇಳಿಕೊಂದಿದೆ.
ಷರತ್ತುಗಳು:
- ಪ್ರದಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್
ಸಿಲಿಂಡರ್ ಪಡೆದಿರುವ ಬಳಕೆದಾರರಿಗೆ ಮಾತ್ರ ನೀಡಲಾಗುವುದು
- ಒಂದು ವರ್ಷದಲ್ಲಿ ಕೇವಲ 12 ಸಿಲಿಂಡರ್ ಗಳಿಗೆ
ಮಾತ್ರ ಸಬ್ಸಿಡಿ ಹಣವನ್ನು ನೀಡಲಾಗುಗುವುದು.
- ಪ್ರತಿ ಖರೀದಿಗೆ 200 ರೂಗಳನ್ನು ಸಬ್ಸಿಡಿ ಹಣವನ್ನಾಗಿ ನೀಡಲಾಗುವುದು
- ಸಬ್ಸಿಡಿ ಹಣಕ್ಕಾಗಿ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ.
- ಹೆಚ್ಚಿನ ಮಾಹಿತಿಗೆ ನಿಮ್ಮ ಗ್ಯಾಸ್ ಸಿಲಿಂಡರ್ ಹಂಚಿಕೆದಾರರನ್ನು ಸಂಪರ್ಕಿಸಿ
No comments:
Post a Comment
Write Something about PK Music